ಲೈಂಗಿಕ ಕ್ರಿಯೆಯ ಮೊದಲು ಮತ್ತು ಕ್ರಿಯೆ ನಂತರ ಹೆಚ್ಚು ನೀರು ಕುಡಿಯಬೇಕಂತೆ; ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ..

0
1624

ಲೈಂಗಿಕತೆ ಎನ್ನುವುದು ಪ್ರತಿಯೊಂದು ಜೀವಿಯಲ್ಲಿರುವ ನೈಸರ್ಗಿಕ ಕ್ರಿಯೇಯಾಗಿದ್ದು, ಈ ವೇಳೆ ಹೆಚ್ಚು ಜಾಗೃತಿವಹಿಸುವುದು ಒಳ್ಳೆಯದು. ಇಲ್ಲದಿದ್ದರೆ ಅಡ್ಡ ಪರಿಣಾಮಗಳು ಕಂಡು ಬಂದು ನಿಮ್ಮ ಲೈಂಗಿಕ ಆಸಕ್ತಿಯನ್ನು ಕುಂದಿಸಬಹುದು. ಹಾಗೆಯೇ ಹಲವಾರು ತೊಂದರೆಗಳು ವುಂಟಾಗಬಹುದು, ಮತ್ತು ಇನ್ನೊದು ಮುಖ್ಯವಾದ ವಿಷಯ ಅಂದ್ರೆ ಸೆಕ್ಸ್ ವೇಳೆ ನೀರು ಕುಡಿಯುವುದು ಅತೀಮುಖ್ಯವಾಗಿದೆ ಇದನ್ನು ಸಂಶೋಧನೆಯೊಂದು ತಿಳಿಸಿದ್ದು. ದೇಹಕ್ಕೆ ಬೇಕಾಗುವಷ್ಟು ನೀರು ಕುಡಿದರು ಮಿಲನದ ವೇಳೆ ಹೆಚ್ಚು ನೀರು ಕುಡಿಯಬೇಕು ಎಂದು ಸಲಹೆ ನೀಡಿದೆ. ಹಾಗಾದ್ರೆ ಈ ವೇಳೆ ನಿರು ಕುಡಿದರೆ ಎಷ್ಟೊಂದು ಲಾಭಗಳಿವೆ ನೋಡಿ.


Also read: ಲೈಂಗಿಕ ಸಮಸ್ಯೆಯಿಂದ ಬಳಲುವವರು ಈ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಬಹುತೇಕ ಸಮಸ್ಯೆಗಳು ಬಗೆಹರೆದು ನೆಮ್ಮದಿಯಿಂದ ಇರಬಹುದು..

1. ಲೈಂಗಿಕ ಕ್ರಿಯೆಯನ್ನು ಸುಧಾರಣೆಗೊಳಿಸುತ್ತೆ:

ಹೌದು ಲೈಂಗಿಕ ಕ್ರಿಯೆಯಲ್ಲಿ ಪುರುಷರು ಹೆಚ್ಚು ನೀರು ಸೇವನೆ ಮಾಡುವುದರಿಂದ ಶಿಶ್ನಗಳಿಗೆ ಸರಿಯಾಗಿ ರಕ್ತಸಂಚಾರವಾಗುವುದು. ಇದರಿಂದ ಆರೋಗ್ಯಕಾರಿ, ಗಡುಸಾದ ಹಾಗೂ ಬಲವಾದ ನಿಮಿರುವಿಕೆ ಉಂಟಾಗುವುದು. ನೀವು ಇನ್ನೊಂದು ಸಲ ಸೆಕ್ಸ್ ನಲ್ಲಿ ತೊಡಗಿಕೊಳ್ಳಲು ಬಯಸುವುದಾದರೆ ಆಗ ನೀವು ನೀರು ಸೇವಿಸಿ. ಯಾವುದೇ ರೀತಿಯ ಶಕ್ತಿ ಪೇಯಗಳು ಮತ್ತು ಆಲ್ಕೋಹಾಲ್ ನಿಮಗೆ ನೀರು ಕುಡಿದಷ್ಟು ಲಾಭವನ್ನು ಖಂಡಿತವಾಗಿಯೂ ನೀಡಲಾರದು. ಪ್ರತಿನಿತ್ಯ ನೀವು ನೀರು ಕುಡಿಯುವುದರಿಂದ ನಿಮ್ಮ ಲೈಂಗಿಕ ಆರೋಗ್ಯ ಮಾತ್ರವಲ್ಲದೆ, ಸಂಪೂರ್ಣ ಆರೋಗ್ಯ ಕಾಪಾಡುವುದು.


Also read: ಲೈಂಗಿಕ ಶಕ್ತಿಯನ್ನು ವೃದ್ಧಿಸಲು ದುಬಾರಿ ಮಾತ್ರೆ ಮದ್ದುಗಳ ಮೊರೆ ಹೋಗೋ ಮೊದ್ಲುಈ ಮನೆ ಔಷಧಿಗಳಿಂದ ಉತ್ತಮ ಪರಿಹಾರ ಕಂಡುಕೊಳ್ಳಿ..

2. ಮಿಲನದ ಬಳಿಕ ಕಾಡುವ ನೋವು ನಿವಾರಣೆ ಮಾಡುತ್ತೆ:

ಸೆಕ್ಸ್ ಬಳಿಕ ಸ್ನಾಯು ಸೆಳೆತ ಅಥವಾ ಬಿಗಿತದಿಂದಾಗಿ ನೀವು ಸಂಪೂರ್ಣವಾಗಿ ಆನಂದ ಪಡೆಯಲು ಸಾಧ್ಯವಾಗದು. ನೋವು ಯಾವಾಗಲೂ ಒಳ್ಳೆಯ ಅನುಭವವಲ್ಲ. ನಿರ್ಜಲೀಕರಣ ಮತ್ತು ಅತಿಯಾಗಿ ಬೆವರು ಹೊರಹೋಗುವ ಕಾರಣದಿಂದಾಗಿ ಜನರಲ್ಲಿ ಹೆಚ್ಚಾಗಿ ಸ್ನಾಯುಗಳ ಸೆಳೆತವು ಉಂಟಾಗುವುದು. ಸೆಕ್ಸ್ ತುಂಬಾ ಹುರುಪಿನ ಚಟುವಟಿಕೆಯಾಗಿದೆ ಮತ್ತು ಇದರಲ್ಲಿ ಹಲವಾರು ಭಂಗಿಗಳನ್ನು ಕೂಡ ಬಳಸಲಾಗುವುದು. ನಿಮ್ಮ ದೇಹವು ಈ ಭಂಗಿಗೆ ತಯಾರಾಗಿ ಇಲ್ಲದೆ ಇದ್ದರೆ ಆಗ ಸೆಳೆತವು ಉಮಟಾಗುವುದು. ಪರಾಕಾಷ್ಠೆ ವೇಳೆ ನೀವು ಹೆಚ್ಚು ಬೆವರುತ್ತೀರಿ ಮತ್ತು ಸ್ಖಲನ ಮತ್ತು ಜೊಲ್ಲು ಕೂಡ ಹೊರಹೋಗುವುದು. ಇದರಿಂದ ನೀವು ಸೆಕ್ಸ್ ಗೆ ಮೊದಲು ಮತ್ತು ಸೆಕ್ಸ್ ಬಳಿಕ ಸ್ವಲ್ಪ ಸಮಯ ಬಿಟ್ಟು ನೀರು ಸೇವಿಸಬೇಕು.

3. ದೈಹಿಕವಾಗಿ ದಣಿವಿಗೆ ನೀರು ಮುಖ್ಯ:

ದೈಹಿಕ ಚಟುವಟಿಕೆ ಬಳಿಕ ನೀವು ನೀರು ಸೇವಿಸುವುದು ಅತೀ ಅಗತ್ಯವಾಗಿದೆ. ಇದರಿಂದಲೂ ದೇಹವು ನಿರ್ಜಲೀಕರಣವಾಗುವುದು. ನಿರ್ಜಲೀಕರಣವು ನಿಮ್ಮ ಸಂಪೂರ್ಣ ದೇಹದ ಮೇಲೆ ಪರಿಣಾಮ ಬೀರುವುದು. ನಿಮ್ಮ ಬಾಯಿ ಅಥವಾ ಯೋನಿಯು ಸೆಕ್ಸ್ ಆಟದ ಬಳಿಕ ಸಂಪೂರ್ಣವಾಗಿ ಒಣಗಿದಂತೆ ಆಗಬಹುದು. ಇದರಿಂದ ಸೆಕ್ಸ್ ಬಳಿಕ ನೀರು ಕುಡಿಯಲು ಮರೆಯಬೇಡಿ.


Also read: ಬಿಯರ್ ಕುಡಿಯುವುದರಿಂದ ನಿಮ್ಮ ಲೈಂಗಿಕ ಕ್ರಿಯೆಗೆ ಆಗುವ ಲಾಭಗಳೇನು ಗೊತ್ತಾ..!

4. ಮೂತ್ರಕೋಶದ ಸೋಂಕು ತಡೆಯಲು:

ಸಂಶೋಧನೆಗಳ ಪ್ರಕಾರ ಲೈಂಗಿಕವಾಗಿ ತುಂಬಾ ಚಟುವಟಿಕೆಯಿಂದ ಇರುವಂತಹ ಮಹಿಳೆಯರು ಬೇರೆ ಮಹಿಳೆಯರಿಗಿಂತ ಹೆಚ್ಚು ಸೋಂಕು ತಗಲಿಸಿಕೊಳ್ಳುವ ಅಪಾಯವಿರುವುದು. ಹೆಚ್ಚಿನ ಮಹಿಳೆಯರು ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಮಾಡಬೇಕೆಂದು ತಿಳಿದಿದೆ. ಆದರೆ ನೀರು ಕುಡಿಯಬೇಕೆಂದು ತಿಳಿದಿಲ್ಲ. ಯೋನಿಯು ತೇವಾಂಶದಿಂದ ಇರಬೇಕು. ಸೆಕ್ಸ್ ಬಳಿಕ ಮೂತ್ರ ವಿಸರ್ಜನೆ ಮಾಡುವ ಕಾರಣ ಬ್ಯಾಕ್ಟೀರಿಯಾವು ಹೊರಹೋಗುವುದು. ಇದರಿಂದ ಮೂತ್ರಕೋಶದ ಸೋಂಕನ್ನು ತಡೆಯಬಹುದು. ಸೆಕ್ಸ್ ಬಳಿಕ ಹೆಚ್ಚಿನ ನೀರು ಸೇವನೆ ಮಾಡಿದರೆ ಆಗ ಮೂತ್ರಕೋಶದ ಸೋಂಕನ್ನು ಕಡಿಮೆ ಮಾಡಬಹುದು.

ಯುಟಿಐ ತಡೆಯಲು:

ಯುಟಿಐ ತಡೆಯಲು ಮಹಿಳೆಯರು ಸೆಕ್ಸ್ ಬಳಿಕ ನೀರು ಸೇವನೆ ಮಾಡುವುದು ಎಷ್ಟು ಅಗತ್ಯವೋ ಅದೇ ರೀತಿ ಪುರುಷರು ಕೂಡ ಸೆಕ್ಸ್ ಚಟುವಟಿಕೆ ಬಳಿಕ ದೇಹದಲ್ಲಿರುವ ವಿಷವನ್ನು ಹೊರಹಾಕಲು ನೀರು ಸೇವನೆ ಮಾಡುವುದು ಅತೀ ಅಗತ್ಯವಾಗಿದೆ. ಮೂತ್ರವು ಹೆಚ್ಚಾಗುವ ಕಾರಣದಿಂದಾಗಿ ಇದು ಮಹಿಳೆಯರ ಗರ್ಭಕೋಶವನ್ನು ಶುದ್ಧೀಕರಿಸುವುದು. ಇದರಿಂದ ಶಿಲೀಂಧ್ರ ಸೋಂಕನ್ನು ಕೂಡ ತಡೆಯಬಹುದು.