ಗ೦ಡು ಕಾಳಿ೦ಗ ಅನ್ನೋ ಪುಟ್ಟ ಗಿಡ ದೊಡ್ಡ ದೊಡ್ಡ ಕಾಯಿಲೆಗಳನ್ನು ಓಡಿಸುವ ಭೂಪ….!

0
1534

ಈ ಸಸ್ಯವು ಪುಟ್ಟಗಿಡ ಎಲ್ಲಾ ಕಡೆಗಳಲ್ಲಿಯೂ ಬೆಳೆಯುತ್ತದೆ. ಇದರ ಎಲೆಗಳ ಅ೦ಚುಗಳು ಕತ್ತರಿಯಾಕಾರದಲ್ಲಿರುತ್ತದೆ. ಇದರ ಹೂವುಗಳು ತಿಳಿ ಹಳದಿ ಮತ್ತು ಪು‌‌‌‌‌‌‌ಷ್ಪಪಾತ್ರೆಯ ಮೇಲೆ ಸು೦ದರವಾಗಿ ಅರಳುತ್ತದೆ. ಮತ್ತು ಉದ್ದವಾಗಿರುತ್ತದೆ. ಈ ಗಂಡು ಕಾಳಿಂಗವು ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಇನ್ನು ಈ ಗಿಡ ಯಾವ ಯಾವ ರೋಗಗಳಿಗೆ ಹೆಚ್ಚು ಸಹಾಯವಾಗಿದೆ ಅನ್ನೋದು ಇಲ್ಲಿದೆ ನೋಡಿ.

Related image

ರಕ್ತಭೇದಿಯನ್ನು ತಡೆಗಟ್ಟಲು:

Image result for Bloodbath
ಈ ಗಂಡು ಕಾಳಿಂಗ ಗಿಡವು ರಕ್ತಭೇದಿಯನ್ನು ತಡೆಗಟ್ಟುತ್ತದೆ. ರಕ್ತಭೇಧಿಯನ್ನು ತಡೆಯಲು ಇದರ ಹಸಿ ಎಲೆಗಳ ರಸವನ್ನು ತೆಗೆದ ತಕ್ಷಣ ಅರ್ಧ ಟೀ ಚಮಚ ರಸವನ್ನು ಜೇನಿನೊಂದಿಗೆ ಸೇವಿಸುವುದರಿಂದ ರಕ್ತಭೇದಿಯನ್ನು ತಡೆಯಬಹುದು.

ನೋವು ನಿವಾರಣೆಗೆ:

Image result for Pain relief

ಸಾಮಾನ್ಯವಾಗಿ ಮಾನವನಿಗೆ ಯಾವುದೇ ಭಾಗದಲ್ಲಿ ನೋವು ಕಾಣಿಸಿಕೊಂಡರೆ ಈ ಗಿಡದ ಹಸಿ ಸೊಪ್ಪನ್ನು ನುಣ್ಣಗೆ ಅರೆದು ನೋವಿಗೆ ಲೇಪಿಸಿದರೆ ನಿಮ್ಮ ನೋವು ಕಡಮೆ ಆಗುತ್ತದೆ.

ಕುಷ್ಠರೋಗ ನಿವಾರಣೆಗೆ:

Image result for Leprosy

ಈ ಗಂಡು ಕಾಳಿಂಗ ಗಿಡದಿಂದ ಕುಷ್ಠರೋಗವನ್ನು ನಿವಾರಣೆ ಮಾಡಬಹುದು.
ಒಂದು ಹಿಡಿ ಹಸಿ ಸೊಪ್ಪನ್ನು ತೆಗೆದು ನುಣ್ಣಗೆ ಅರೆದು ಗಾಯಗಳಿಗೆ ಹಾಕುವುದರಿಂದ ಮತ್ತು ಇದರ ರಸವನ್ನು ಅದೆ ಸಮಯಕ್ಕೆ ಒಂದು ಟೀ ಚಮಚದಂತೆ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ರೋಗವು ನಿವಾರಣೆಯಾಗುತ್ತದೆ