ಮೋದಿ ಸರ್ಕಾರವು ಕೋರೋನ ಸಂಕಟವನ್ನು ಉತ್ತಮವಾಗಿ ಬಳಸಿಕೊಂಡು ರೈತರಿಗೆ ಸಹಾಯವಾಗುವಂತೆ ತಂದಿರುವ ತಿದ್ದುಪಡಿ ರೈತರ ಬಾಳಿಗೆ ಆಶಾಕಿರಣವಾಗುವುದೇ??

0
91

ಕೋವಿಡ್-19 ಪ್ರಭಾವ ಮತ್ತು ಇದನ್ನು ನಿಗ್ರಹಿಸುವ ಕ್ರಮವಾಗಿ ಘೋಷಿಸಲಾದ ಲಾಕ್ಡೌನ್ನಿಂದಾಗಿ ಭಾರತ ಆರ್ಥಿಕವಾಗಿ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದೆ. ಕೊರೊನಾ ಪಿಡುಗಿನಿಂದ ತತ್ತರಿಸಿರುವ ದೇಶಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 20 ಲಕ್ಷ ಕೋಟಿ ಪ್ಯಾಕೇಜ್’ನ ಮುಂದುವರಿದ ಭಾಗವಾಗಿ 1955ರ ಅಗತ್ಯ ಸರಕುಗಳ ಕಾಯ್ದೆ ತಿದ್ದುಪಡಿಯನ್ನು ತರಲಾಗುವುದು ಎಂದು ಘೋಷಿಸಿದ್ದಾರೆ. ದೇಶಕ್ಕೆ ಕೇಂದ್ರವು ನೀಡಲು ಉದ್ದೇಶಿಸಿರುವ ಪರಿಹಾರ ಕ್ರಮಗಳ ಮೂರನೇ ಕಂತಿನ ವಿವರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಪ್ರಕಟಿಸಿದ್ದಾರೆ.

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪ್ಯಾಕೇಜ್’ನ ಮೂರನೇ ಕಂತಿನಲ್ಲಿ 1955ರ ಅಗತ್ಯ ಸರಕುಗಳ ಕಾಯ್ದೆ ತಿದ್ದುಪಡಿಯನ್ನು ತರಲು ಸರ್ಕಾರ ಮುಂದಾಗಿದೆ. ತಿದ್ದುಪಡಿಯ ಭಾಗವಾಗಿ, ಧಾನ್ಯಗಳು, ಖಾದ್ಯ ತೈಲಗಳು, ಎಣ್ಣೆಕಾಳುಗಳು, ಬೇಳೆಕಾಳುಗಳು, ಈರುಳ್ಳಿ ಮತ್ತು ಆಲೂಗಡ್ಡೆಗಳನ್ನು ಅನಿಯಂತ್ರಿತಗೊಳಿಸಲಾಗುತ್ತದೆ. ಇದರರ್ಥ ರೈತರು ಈ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದಾಗಿದೆ. ಕೃಷಿ ಮತ್ತು ಸಂಬಂಧಿಸಿದ ಕ್ಷೇತ್ರಗಳು ಮೂರನೇ ಕಂತಿನ ಕೇಂದ್ರದಲ್ಲಿವೆ. ಒಟ್ಟು ₹1.63 ಲಕ್ಷ ಕೋಟಿಯ ಯೋಜನೆಗಳನ್ನು ಪ್ರಕಟಿಸಲಾಗಿದೆ.

ಕೃಷಿ ಮತ್ತು ಸಂಬಂಧಿಸಿದ ಕ್ಷೇತ್ರಗಳಿಗೆ ಒಟ್ಟು ಎಂಟು ಉಪಕ್ರಮಗಳನ್ನು ನಿರ್ಮಲಾ ಪ್ರಕಟಿಸಿದ್ದಾರೆ. ಕೃಷಿ ಮೂಲಸೌಕರ್ಯವನ್ನು ಬಲಪಡಿಸುವುದಕ್ಕಾಗಿ ₹1 ಲಕ್ಷ ಕೋಟಿ ನಿಧಿ. ಕೋಲ್ಡ್‌ ಸ್ಟೋರೇಜ್‌ ಸೌಲಭ್ಯಗಳು, ಆಹಾರ ಸಂಗ್ರಹ ಕೇಂದ್ರಗಳು ಮುಂತಾದವುಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಪ್ರಾಥಮಿಕ ಕೃಷಿ ಸಹಕಾರ ಸಂಘಗಳು, ಸ್ಟಾರ್ಟ್‌ ಅಪ್‌ಗಳು, ಮಾರಾಟಗಾರರಿಗೆ ಅನುಕೂಲ ಆಗಲಿದೆ.

ಆಹಾರ ಸಿದ್ಧಪಡಿಸುವ ಸಣ್ಣ ಗಾತ್ರದ ಸಂಸ್ಥೆಗಳ ನೆರವಿಗೆ ₹10 ಸಾವಿರ ಕೋಟಿಯ ಯೋಜನೆ. ಆರೋಗ್ಯ ಮತ್ತು ಕ್ಷೇಮ, ಪೌಷ್ಟಿಕತೆ, ಗಿಡಮೂಲಿಕೆ, ಸಾವಯವ ಉತ್ಪನ್ನಗಳು ಈ ಯೋಜನೆ ವ್ಯಾಪ್ತಿಗೆ ಬರುತ್ತವೆ. ಎರಡು ಲಕ್ಷ ಘಟಕಗಳಿಗೆ ಪ್ರಯೋಜನ ದೊರೆಯಲಿದೆ. ಇಂತಹ ಉತ್ಪನ್ನಗಳನ್ನು ಬ್ರಾಂಡ್‌ಗಳಾಗಿ ಬೆಳೆಸಿ, ಜಾಗತಿಕ ಮಾರುಕಟ್ಟೆ ಪಡೆಯುವುದು ಉದ್ದೇಶ. ಮಹಿಳಾ ಉದ್ಯಮಿಗಳು ಮತ್ತು ಮಹಿಳಾ ಕಾರ್ಮಿಕರಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ.

ಗಿಡಮೂಲಿಕೆ ಕೃಷಿಗೆ ₹4,000 ಕೋಟಿ ನೆರವು. 10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಗಿಡಮೂಲಿಕೆ ಬೆಳೆಯುವುದು ಉದ್ದೇಶ. ಗಂಗಾ ನದಿಯ ಎರಡೂ ದಂಡೆಗಳಲ್ಲಿ ಗಿಡಮೂಲಿಕೆ ಕಾರಿಡಾರ್‌ ರೂಪಿಸುವ ಗುರಿ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ: ಮೀನುಗಾರಿಕಾ ದೋಣಿ ಖರೀದಿ ಮತ್ತು ಬಂದರುಗಳ ಅಭಿವೃದ್ಧಿಗೆ ₹20 ಸಾವಿರ ಕೋಟಿ. ದೋಣಿಗಳಿಗೆ ವಿಮೆ ಸೌಲಭ್ಯವೂ ಇದರಲ್ಲಿ ಸೇರುತ್ತದೆ. ಹೊಸ ದೋಣಿಗಳು ಮತ್ತು ಬಂದರು ನಿರ್ಮಾಣದಿಂದಾಗಿ ವಾರ್ಷಿಕ 70 ಲಕ್ಷ ಟನ್‌ ಮೀನು ಹೆಚ್ಚುವರಿಯಾಗಿ ದೊರೆಯಲಿವೆ. ₹20 ಸಾವಿರ ಕೋಟಿಯ ಪೈಕಿ ₹9 ಸಾವಿರ ಕೋಟಿಯನ್ನು ದೋಣಿ, ಬಂದರು ಮತ್ತು ಮಂಡಿಗಳಿಗಾಗಿ ವೆಚ್ಚ ಮಾಡಲಾಗುವುದು. 55 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ನಿರ್ಮಲಾ ಹೇಳಿದ್ದಾರೆ.

ಪಶು ಸಂಗೋಪನೆಯ ಮೂಲಸೌಕರ್ಯ ಅಭಿವೃದ್ಧಿಗೆ ನಿಧಿ. ಅದಕ್ಕಾಗಿ ₹15 ಸಾವಿರ ಕೋಟಿ ವಿನಿಯೋಗ. ಹೈನುಗಾರಿಕೆ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವ ಗುರಿ ಹಾಕಿಕೊಳ್ಳಲಾಗಿದೆ.

ಜೇನು ಹುಳ ಸಾಕಣೆ ಕ್ಷೇತ್ರಕ್ಕೆ ₹500 ಕೋಟಿ. ಹಿತ್ತಲಿಂದ ಜಗದಗಲಕ್ಕೆ (ಲೋಕಲ್‌ ಟು ಗ್ಲೋಬಲ್‌) ಉಪಕ್ರಮದ ಭಾಗ ಇದು.

ಕಾಲು–ಬಾಯಿ ರೋಗಕ್ಕೆ ಲಸಿಕೆ: ಜಾನುವಾರುಗಳಿಗೆ ಶೇ ನೂರರಷ್ಟು ಲಸಿಕೆ ಹಾಕಿಸುವುದಕ್ಕಾಗಿ ₹13,343 ಕೋಟಿಯ ಯೋಜನೆ ಹಾಕಿಕೊಳ್ಳಲಾಗಿದೆ. 53 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕಿಸಲಾಗುವುದು. ಜನವರಿವರೆಗೆ 1.5 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕಿಸಲಾಗಿದೆ. ಲಾಕ್‌ಡೌನ್‌ ತೆರವಾದ ಬಳಿಕ ಯೋಜನೆ ಮುಂದುವರಿಯಲಿದೆ.

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಲಾಕ್‌ಡೌನ್‌ ಅವಧಿಯಲ್ಲಿ ಅಸ್ತವ್ಯಸ್ತಗೊಂಡಿರುವ ಪೂರೈಕೆ ಸರಪಣಿ ಸುಧಾರಣೆಗೆ ₹500 ಕೋಟಿ. ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಗೆ ಸೀಮಿತವಾಗಿ ಈ ಯೋಜನೆ ಜಾರಿಯಲ್ಲಿ ಇತ್ತು. ಈಗ ಇತರ ತರಕಾರಿಗಳನ್ನೂ ಇದರಲ್ಲಿ ಸೇರಿಸಲು ಉದ್ದೇಶಿಸಲಾಗಿದೆ. ಉತ್ಪನ್ನಗಳ ಸಾಗಾಟಕ್ಕೆ ಶೇ 50 ಮತ್ತು ಸಂಗ್ರಹಕ್ಕೆ ಶೇ 50ರಷ್ಟು ಸಹಾಯಧನ ದೊರೆಯಲಿದೆ.

ಇನ್ನು ಆಡಳಿತ ಸುಧಾರಣೆಯ ಮೂರು ಕ್ರಮಗಳನ್ನು ಜಾರಿಗೆ ತರುವ ಬಗ್ಗೆಯೂ ಅವರು ಮಾತನಾಡಿದ್ದಾರೆ. ಆರೂವರೆ ದಶಕ ಹಳೆಯದಾದ, ಅಗತ್ಯ ವಸ್ತು ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದೆ. ಏಕದಳ ಧಾನ್ಯಗಳು, ಖಾದ್ಯತೈಲ, ಎಣ್ಣೆ ಬೀಜ, ದ್ವಿದಳ ಧಾನ್ಯಗಳು, ಈರುಳ್ಳಿ ಮತ್ತು ಆಲೂಗಡ್ಡೆ ಸೇರಿ ವಿವಿಧ ಉತ್ಪನ್ನಗಳನ್ನು ನಿಯಂತ್ರಣದಿಂದ ಹೊರಗೆ ಇರಿಸುವುದು ಇದರ ಉದ್ದೇಶ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಈ ಉತ್ಪನ್ನಗಳ ಮೇಲಿನ ಸಂಗ್ರಹ ಮಿತಿಯು ರದ್ದಾಗಲಿದೆ. ರಾಷ್ಟ್ರೀಯ ವಿಕೋಪ, ಬರಗಾಲದಂತಹ ಸಂದರ್ಭದಲ್ಲಿ ಮಾತ್ರ ಮಿತಿ ಹೇರುವುದಕ್ಕೆ ಅವಕಾಶ ಇರುತ್ತದೆ. ಸಂಸ್ಕರಣೆಗಾರರು ಅಥವಾ ಉತ್ಪನ್ನಗಳ ಮೌಲ್ಯವರ್ಧಿತ ಸರಪಣಿಯ ಭಾಗವಾಗಿರುವವರಿಗೆ ಸಂಗ್ರಹ ಮಿತಿ ಇರುವುದಿಲ್ಲ. ಮಾರಾಟದ ಆಯ್ಕೆಯನ್ನು ರೈತರಿಗೇ ನೀಡುವುದಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ನೀತಿಯ‌ನ್ನು ಬದಲಾಯಿಸಲಾಗುವುದು. ಎಪಿಎಂಸಿಯಲ್ಲಿ ಪರವಾನಗಿ ಪಡೆದಿರುವವರಿಗೆ ಮಾತ್ರ ರೈತರು ಉತ್ಪನ್ನಗಳನ್ನು ಮಾರಾಟ ಮಾಡಲು ಈಗ ಅವಕಾಶ ಇದೆ. ಬೇರೆ ಯಾವುದೇ ಕೈಗಾರಿಕಾ ಉತ್ಪನ್ನಕ್ಕೆ ಇಂತಹ ನಿರ್ಬಂಧ ಇಲ್ಲ. ಸಂಗ್ರಹಕ್ಕೆ ಇರುವ ಮಿತಿ ಕೂಡ ರೈತರಿಗೆ ಪ್ರತಿಕೂಲವೇ ಆಗಿದೆ. ಇಂತಹ ನಿರ್ಬಂಧಗಳು ಕೃಷಿ ಉತ್ಪನ್ನಗಳ ಮುಕ್ತ ಸಾಗಾಟಕ್ಕೆ ತಡೆ ಒಡ್ಡುತ್ತವೆ. ಪರಿಣಾಮವಾಗಿ ರೈತರಿಗೆ ಕಡಿಮೆ ಬೆಲೆ ದೊರೆಯುತ್ತಿದೆ ಎಂದು ನಿರ್ಮಲಾ ವಿವರಿಸಿದ್ದಾರೆ.

ರೈತರಿಗೆ ಆಯ್ಕೆಗಳನ್ನು ಒದಗಿಸಿಕೊಡಲು, ಆಕರ್ಷಕ ಬೆಲೆ ದೊರಕಿಸಲು, ಉತ್ಪನ್ನಗಳ ಅಂತರ ರಾಜ್ಯ ಮುಕ್ತ ಸಾಗಾಟಕ್ಕೆ ಅನುಕೂಲ ಮಾಡಿಕೊಡಲು, ಇ–ವ್ಯಾಪಾರಕ್ಕೆ ಅವಕಾಶ ನೀಡಲು ಕೇಂದ್ರವು ಕಾನೂನು ರೂಪಿಸಲಿದೆ. ಕೃಷಿ ಉತ್ಪನ್ನ ಬೆಲೆ ಬೆಂಬಲ ವ್ಯವಸ್ಥೆ– ಬೆಳೆಗೆ ಯಾವ ಬೆಲೆ ದೊರೆಯಲಿದೆ ಎಂಬುದನ್ನು ರೈತರಿಗೆ ತಿಳಿಸುವ ವ್ಯವಸ್ಥೆ ಈಗ ಇಲ್ಲ. ತಮ್ಮ ಉತ್ಪನ್ನಕ್ಕೆ ಯಾವ ಬೆಲೆ ದೊರೆಯಲಿದೆ ಎಂಬುದನ್ನು ರೈತರು ಅರಿತುಕೊಳ್ಳುವ ವ್ಯವಸ್ಥೆಗೆ ಬೇಕಾದ ಕಾನೂನಾತ್ಮಕ ಮತ್ತು ತಾಂತ್ರಿಕ ವ್ಯವಸ್ಥೆಯನ್ನು ಸರ್ಕಾರ ರೂಪಿಸಲಿದೆ ಎಂದು ಅವರು ಹೇಳಿದ್ದಾರೆ.

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

Also read: ಮೋದಿ ಸರ್ಕಾರ ಪದೇ ಪದೇ ಸುಳ್ಳುಗಳನ್ನೇ ಹೇಳಿ ಜಯಿಸುತ್ತಿರುವುದೇಕೆ?? ಪ್ರತಿಪಕ್ಷಗಳ ಬಲಹೀನತೆಯಿಂದಲೇ ಹೀಗೆ ಆಗುತ್ತಿದ್ಯ?? ನಾಗರೀಕರಾಗಿ ನಾವೇನು ಮಾಡಬಹುದು??