ತಂಬಾಕಿನಿಂದ ಬಂದ ಬಾಯಿ ಕ್ಯಾನ್ಸರ್-ನಿಂದ ನರಳಾಡುತ್ತಿರುವ ನೈಜ ಕತೆ!!

0
1751

ಸಿಗರೇಟ್ ಪಫ್ ಮತ್ತು ತಂಬಾಕು ಬಿಟ್ ತುಂಬ ಸಂತೋಷ ಕೊಡುತ್ತದೆ.ಆದರೆ,ಈ ಇದು ಚಿರಕಾಲಿಕ,ಈ ನಿಕೋಟಿನ್ ದೇಹವನ್ನು ಪ್ರವೇಶಿಸಿ ಅಂಗಗಳ ಮೇಲೆ ಪ್ರಭಾವ ಬೀರುತ್ತದೆ,ನಿಧಾನವಾಗಿ ಆರೋಗ್ಯ ಹದಗೆಡುತ್ತದೆ.ತಂಬಾಕು ಉಪಯೋಗ ಸಾರ್ವಜನಿಕ ಆರೋಗ್ಯಕ್ಕೆ ಮಾರಕ.WHO ವರದಿಯ ಪ್ರಕಾರ, ತಂಬಾಕು ಪ್ರತಿ ವರ್ಷ 6 ದಶಲಕ್ಷ ಜನರನ್ನು ಕೊಲ್ಲುತ್ತದೆ.ತಂಬಾಕು ಸೇವಿಸುವುದು ಒಂದು ವ್ಯಕ್ತಿ ಆದರೆ ನರಳುವದು ಇಡೀ ಕುಟುಂಬ .

ತಂಬಾಕು ಬಳಕೆದಾರರ ಗಮನಕ್ಕೆ! ಇಲ್ಲಿದೆ ನೋಡಿ ತಂಬಾಕು ಎಂಬ ಜೀವ ನಾಶಕನ ನೈಜ ಕಥೆ !

Image may contain: 2 people

ಅವನ ಹೆಸರು ಶ್ರೀ ಪೂರ್ಣ ಚಂದ್ರ . ಅವನು ಟ್ಯಾಕ್ಸಿ ಚಾಲಕ . ಅವನಿಗೆ ನಿಯಮಿತವಾಗಿ ಗುಟ್ಕಾ ತಿನ್ನುವ ಅಭ್ಯಾಸವಿತ್ತು . ಸ್ವಲ್ಪ ವರ್ಷಗಳ ನಂತರ ಅವನ ಬಾಯಿಯ ಒಳಗೆ ಬಿಳಿ ಕಲೆಗಳು ಕಾಣಿಸಿಕೊಳ್ಳಲಾರಂಭಿಸಿದವು .ಅದು ನಂತರ ಬಾಯಿನ ಕ್ಯಾನ್ಸರ್ ಆಗಿ ಪರಿವರ್ತನೆ ಆಯಿತು .ಈಗ ಅವನು ಚಿಕಿತ್ಸೆ ತೆಗೆದು ಕೊಳ್ಳುತ್ತಿದ್ದಾನೆ , ಅವನ ಒಂದು ಬದಿಯ ಕೆನ್ನೆಯನ್ನು ಕತ್ತರಿಸಲಾಗಿದೆ . ಅವನಿಗೆ ೪ ಚಿಕ್ಕ ಮಕ್ಕಳಿದ್ದಾರೆ , ಅವರನ್ನು ಅನಾಥಾಶ್ರಮಕ್ಕೆ ಸೇರಿಸುವ ಬಗ್ಗೆ ಅವರು ಯೋಚಿಸುತ್ತಿದ್ದಾರೆ , ಏಕೆಂದರೆ ಅವರಿಗೆ ಅವರನ್ನ ಸಾಕಲು ಶಕ್ತಿ ಇಲ್ಲ. ಈಗ ಸದ್ಯಕ್ಕೆ ಅವನು ಮನೆಯಲ್ಲಿಯೇ ಇರುತ್ತಾನೆ , ಅವನ ಹೆಂಡತಿ ಹೊರಗೆ ಕೆಲಸಕ್ಕೆ ಹೋಗಿ ಮನೆಯಲ್ಲಿರುವ ೫ ಜನಕ್ಕೆ ಊಟ ಹಾಕುತ್ತಿದ್ದಾಳೆ . ಇವರ ಮನೆಯ ಹತ್ತಿರದಲ್ಲಿರುವ ಒಬ್ಬ ಸಮಾಜ ಸೇವಕ ರಾಜೇಶ್ ಕುಮಾರ್ ಇವರ ಕಥೆಯನ್ನು ಮಾಧ್ಯಮಗಳ ಮೂಲಕ ಬೆಳಕಿಗೆ ತಂದು , ಧನ ಸಹಾಯವನ್ನು ಈ ಕುಟುಂಬಕ್ಕೆ ಕೊಡಿಸಿದ್ದಾನೆ .

ಹೀಗೆ ಎಷ್ಟೋ ಮಂದಿ ಈ ತಂಬಾಕು ಪಿಡುಗಿನಿಂದ ಬೀದಿಗೆ ಬಂದಿದ್ದಾರೆ , ಚಿಕಿತ್ಸೆ ಕೊಡಿಸಿದರು , ರೋಗಿಗಳನ್ನು ಉಳಿಸಿಕೊಳ್ಳಲಾಗದೆ ಮನೆ ಮಠ ಕಳೆದುಕೊಂಡಿದ್ದಾರೆ .

ತಂಬಾಕು ಎಂಬುವುದು ಒಬ್ಬ ಮನುಷ್ಯನ ಚಟವಲ್ಲ , ಅವನ ಕುಟುಂಬದ ವ್ಯಥೆ .