ಇಂದು ನಮ್ಮ ಕನ್ನಡ ಸಿನಿಮಾ ಕ್ಷೇತ್ರದ ಮೂರು ದಿಗ್ಗಜರ ಜನುಮದಿನ!!

0
819

ಇಂದು ಸ್ಯಾಂಡಲ್ ವುಡ್ ನಲ್ಲಿ ಮೂರು ತಾರೆಯರ ಜನುಮದಿನ. ಎಲ್ಲ ಅಭಿಮಾನಿಗಳ ಪಾಲಿಗಂತೂ ಇದು ಮರೆಯಲಾಗದ ದಿನ. ಯಾಕಂದ್ರೆ, ಇಂದು ಕನ್ನಡದ ಮೂವರು ತಾರೆಯರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ . ಹೀಗಾಗಿ, ಇಡೀ ದಿನ ಅಭಿಮಾನಿಗಳಂತೂ ತಮ್ಮ ನೆಚ್ಚಿನ ತಾರೆಗಳ ಮನೆ ಬಳಿ ಹೋಗಿ, ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಶುಭ ಕೋರುವ ಮೂಲಕ ಆಚರಿಸುತ್ತಾರೆ. ಮತ್ತೊಂದೆಡೆ ಅವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನ ಕೂಡ ಅಯೋಜಿಸಿ ಅಭಿಮಾನ ಮೆರೆಯುತ್ತಾರೆ.

ಹಾಗಾದರೆ ಬನ್ನಿ ಇಂದು ಯಾವ ಯಾವ ತಾರೆಯರ ಹುಟ್ಟುಹಬ್ಬ ಎಂದು ತಿಳಿಯೋಣ:

ಮೊದಲಿಗೆ ಇಂದು ಸಾಹಸಸಿಂಹ ಡಾ. ವಿಷ್ಣುವರ್ಧನ್‌ ಅವರ 70 ನೇ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳು ಸಹ ನಡೆಯಲಿವೆ. ಸಾಹಸಸಿಂಹ ವಿಷ್ಣುವರ್ಧನ್-ರವರು ನಮಗೆ ನೆನಪು ಮಾತ್ರ, ಅವರು ಇನ್ನೂ ಹೆಚ್ಚು ಕಾಲ ನಮ್ಮ ಜೊತೆ ಇರಬಹುದಿತ್ತೇನೋ ಅಂತ ವಿಷ್ಣು ಅಭಿಮಾನಿಗಳಾದ ನಮಗೆಲ್ಲ ಅನ್ನಿಸದೆ ಇರಲು ಸಾಧ್ಯವೇ ಇಲ್ಲ. ಈ ಬಾರಿಯ ವಿಷ್ಣು ಅವರ ಜಯಂತೋತ್ಸವದ ವಿಶೇಷತೆ ಇನ್ನೂ ಹೆಚ್ಚಾಗಲಿಕ್ಕೆ ಕಾರಣ, ಸ್ಮಾರಕ ನಿರ್ಮಾಣ! ಹೌದು, ಸೆ.15ರಂದು ಮೈಸೂರಿನಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಆ ಮೂಲಕ ಅನೇಕ ದಿನಗಳಿಂದ ಅಭಿಮಾನಿಗಳು ಕಂಡಿದ್ದ ಕನಸು ಈಗ ಈಡೇರುತ್ತಿದೆ.

ರಿಯಲ್ ಸ್ಟಾರ್ ಉಪೇಂದ್ರ ಅವರುಕೂಡ ಇಂದು 52ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರೆ. ಇಷ್ಟು ದಿನ ಸಿನಿಮಾದಲ್ಲಿ ಮಾತ್ರ ತೊಡಗಿಸಿಕೊಂಡಿದ್ದ ಉಪ್ಪಿ, ರಾಜಕೀಯದಲ್ಲಿ ಕಾರ್ಯನಿರತರಾಗಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಅಷ್ಟೇ ಅಲ್ಲ ಉಪೇಂದ್ರ ಅವರ ಬಹು ನಿರೀಕ್ಷಿತ ಕಬ್ಜ ಚಿತ್ರದ ಪೋಸ್ಟರ್ ಕೂಡ ಇಂದು ಬಿಡುಗಡೆಯಾಗಿದೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇಂದು ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ಆರ್ ಚಂದ್ರು ಅವರ ಕಬ್ಜ ಚಿತ್ರ ಅಂಡರ್ ವರ್ಲ್ಡ್ ಡಾನ್ ಗೆ ಸಂಬಂಧಿಸಿದ ಕಥೆಯಾಗಿದೆ.

ಈ ಇಬ್ಬರು ದೊಡ್ಡ ಸ್ಟಾರ್ ನಟರ ಜೊತೆಗೆ ಕನ್ನಡದ ಖ್ಯಾತ ನಟಿ ಶ್ರುತಿ ಅವರು ಕೂಡ ತಮ್ಮ 45ನೇ ಹುಟ್ಟುಹಬ್ಬ ವನ್ನು ಆಚರಿಸಿಕೊಂಡಿದ್ದಾರೆ.