ಟಾಯ್ಲೆಟ್‍ನಲ್ಲಿ ಕಾಣಿಸಿದ್ದು 1 ಹಾವು, ಮನೆಯಲ್ಲೇ ಪತ್ತೆಯಾದ್ವು 24 ಹಾವುಗಳು! ಮೈಜುಮ್ಮೆನಿಸುವ ಘಟನೆ

0
1288

ಬೆಳಿಗ್ಗೆ ಎದ್ದು ಕಾಫಿ ಮಾಡಲು ಅಡುಗೆ ಮನೆಗೆ ಹೋದಾಗ ಬುಸುಗುಡುವ ನಾಗರಹಾವು ಸ್ವಾಗತ ಕೋರಿದರೆ, ಬಟ್ಟೆ ತೊಳೆಯಲು ವಾಷಿಂಗ್‌ ಮಷಿನ್‌ ಹೆಡೆಬಿಚ್ಚಿ ನಿಂತ ನಾಗಪ್ಪ ಕಂಡರೆ, ನಿತ್ಯಕರ್ಮ ಮುಗಿಸಲು ಶೌಚಗೃಹಕ್ಕೆ ಹೋದಾಗ ಕಮೋಡ್‌ನಲ್ಲಿ ಹಾವು ಕಂಡರೆ…ಇಂತಹ ಘಟನೆಗಳು ನೀವು ಕೇಳಿದ್ದೀರಿ. ಒಂದೇ ಮನೆಯಲ್ಲಿ ಬೇರೆ ಬೇರೆ ಕಡೆ ರಾಶಿ ರಾಶಿ ಹಾವುಗಳು ಕಾಣಿಸಿಕೊಂಡ್ರೆ ನಿಮ್ಮ ರಿಯಾಕ್ಷನ್ ಹೇಗಿರುತ್ತೆ? ಒಂದು ಸಲ ಊಹಿಸಿ ನೋಡಿ…

ಅಮೆರಿಕದ ಟೆಕ್ಸಾಸ್‍ನ ಜೋನ್ಸ್ ಕೌಂಟಿಯ ಮನೆಯೊಂದರಲ್ಲಿ ಟಾಯ್ಲೆಟ್ ಕಮೋಡ್‍ನಲ್ಲಿ ಒಂದು ಹಾವು ಕಾಣಿಸಿಕೊಂಡಿದೆ. ಕೊಡಲೇ ಮನೆಯವರು ಬಿಗ್ ಕಂಟ್ರಿ ಸ್ನೇಕ್ ರಿಮೂವಲ್ ಎಂಬ ಕೀಟ ನಿಯಂತ್ರಕ ಸಂಸ್ಥೆಗೆ ಕರೆ ಮಾಡಿ ವಿಷಯ ತಿಳಿಸಿ ಬರಹೇಳಿದ್ದಾರೆ ನಂತರ ಉರಗ ತಜ್ಞರು ಮನೆಗೆ ಬಂದಾಗ ಮನೆಯವರೆಲ್ಲರಿಗೂ ಒಂದು ಶಾಕ್ ಕಾದಿತ್ತು. ಮುಂದೆ ಓದಿ ನಿಮಗೆ ಗೊತ್ತಾಗುತ್ತೆ.

rattle-snake-696x571

ಟಾಯ್ಲೆಟ್ ಕಮೋಡ್‍ನಲ್ಲಿ ಕಾಣಿಸಿಕೊಂಡ ಹಾವು ರ್ಯಾಟಲ್ ಸ್ನೇಕ್ ಜಾತಿಯ ಸೇರಿದ್ದು. ಉರಗ ತಜ್ಞರು ಬಂದು ಟಾಯ್ಲೆಟ್ ನಲ್ಲಿ ಕಂಡಂತಹ ಆ ಹಾವನ್ನು ಹಿಡಿದರು. ಮನೆಗೆ ಹೇಗೆ ಆ ಹಾವು ಬಂತು ಎಂದು ಶೋಧಿಸಿದಾಗ ಮುರಿದ ಪೈಪಿನೊಳಗಿಂದ ಆ ಹಾವು ಅಲ್ಲಿಗೆ ಬಂದಿತ್ತು ಎಂದು ತಿಳಿದು ಬಂತು. ಆ ಜಾಗವನ್ನು ಸೂಕ್ಹ್ಮವಾಗಿ ಪರಿಶೀಲಿಸಿ ಮುಂದೆ ಸೆಲ್ಲರ್‍ಗೆ ಹೋದಾಗ ಅಲ್ಲಿ 13 ಹಾವುಗಳಿದ್ದವು. ಅವನ್ನು ಸುರಕ್ಷಿತವಾಗಿ ಹೊರತೆಗೆಯಲಾಯ್ತು. ಅಷ್ಟಕ್ಕೇ ಸುಮ್ಮನಾಗದೆ ಮತ್ತೆ ಮುಂದುವರಿದು ಸೂಕ್ಷ್ಮವಾಗಿ ಪರಿಶೀಲಿಸದಾಗ ಮನೆಯ ಕೆಳಗೆ 5 ಪುಟ್ಟ ಮರಿಗಳು ಸೇರಿದಂತೆ 10 ಹಾವುಗಳನ್ನು ಹಿಡಿದರು. ಅಲ್ಲಿಗೆ ಒಟ್ಟು 24 ಹಾವುಗಳನ್ನಉರಗ ತಜ್ಞರು ಹಿಡಿದಿದ್ದರು.

rattle-snake-3

ಕುಟುಂಬದವರಿಗೆ ಈ ಬಗ್ಗೆ ಆಲೋಚನೆಯೇ ಇರಲಿಲ್ಲ. ಕಾರಣ ಹಲವಾರು ವರ್ಷಗಳಿಂದೀಚೆಗೆ ಆ ಕುಟುಂಬದವರ ತಮ್ಮ ಮನೆಯ ಸುತ್ತಮುತ್ತ ಹಾವು ಕಂಡಿರಲಿಲ್ಲಾ. ಅವರೆಲ್ಲ ಹಾವುಗಳನ್ನು ನೋಡಿದ್ದು ಇದೇ ಮೊದಲು. ಈ ಎಲ್ಲ ಸನ್ನಿವೇಶವನ್ನು ಬಿಗ್ ಕಂಟ್ರಿ ಸ್ನೇಕ್ ರಿಮೂವಲ್ ಸಿಬ್ಬಂದಿ ಈ ಹಾವುಗಳ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು ಎಲ್ಲವನ್ನೂ ವಿವರಿಸಿದ್ದಾರೆ.

ಸಾಮಾನ್ಯವಾಗಿ ರ್ಯಾಟಲ್ ಸ್ನೇಕ್ ಜಾತಿಯ ಹಾವುಗಳು ರಹಸ್ಯ ಸ್ಥಳಗಳಲ್ಲಿರುತ್ತವೆ. ವಾತಾವರಣಕ್ಕೆ ಅನುಗುಣವಾಗಿ ದೇಹದ ಬಣ್ಣವನ್ನು ಬದಲಿಸಿಕೊಂಡು ಬದುಕುತ್ತವೆ. ನೀವು ನೋಡಲಿಲ್ಲ ಎಂದ ಮಾತ್ರಕ್ಕೆ ಅವು ಅಲ್ಲಿಲ್ಲ ಅಂತ ಅರ್ಥವಲ್ಲ ಅಂತ ಪೋಸ್ಟ್ ಹಾಕಿದ್ದಾರೆ.

ಅಬ್ಬಾ! ಇಂಥ ಸನ್ನಿವೇಶಗಳನ್ನು ನೆನೆಸಿಕೊಳ್ಳಲೂ ಭಯಾನಕ. ಓದೋಕೆ ಮೈಜುಮ್ಮೆನಿಸುತ್ತದೆ. ನಿಜವಾಗಿ ಅನುಭವಕ್ಕೆ ಬಂದರೆ ಎಂಥ ಧೈರ್ಯಶಾಲಿಗೂ ಒಂದು ಕ್ಷಣ ಏನೂ ತೋಚದಂತಾಗುತ್ತದೆ.