ಇನ್ಮುಂದೆ ಯಾವುದೇ ಸ್ಥಳದಲ್ಲಿ ಸಾರ್ವಜನಿಕರು ಶೌಚಾಲಯಕ್ಕೆ ಹೋಗಲು ಪರದಾಡಬೇಕಿಲ್ಲ; ಉಚಿತವಾಗಿ 5 Star Hotel ಗಳಲ್ಲಿವೂ ಶೌಚಾಲಯ ಬಳಕೆ ಮಾಡಬಹುದು!!

0
244

ದೇಶದಲ್ಲಿ ಪ್ರತಿಯೊಂದು ನಗರ, ಹಳ್ಳಿಗಳನ್ನು ಬಯಲು ಶೌಚಮುಕ್ತವಾಗಿ ಮಾಡಲು ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ ಕೆಲವು ಕಡೆಯಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ಇದ್ದು ಜನರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದರು. ಕೆಲವು ಕಡೆಯಲ್ಲಿ ಇದ್ದರೂ ಸರಿಯಾದ ಸ್ವಚತೆ ಇಲ್ಲದೆ ಜನರು ಒಳಗೆ ಹೋಗಲು ಆಗುತ್ತಿರಲಿಲ್ಲ. ಅದರಲ್ಲಿ ಮಹಿಳೆಯರು ಮಕ್ಕಳು ತೊಂದರೆಯನ್ನು ಅನುಭವಿಸುತ್ತಿದ್ದರು, ಇದಕ್ಕಾಗಿ ದೇಶದಲ್ಲಿ ಹಲವು ವ್ಯವಸ್ಥೆಗಳು ಹುಟ್ಟಿಕೊಂಡಿದ್ದು. ಇನ್ಮುಂದೆ ಅಂತಹ ತೊಂದರೆಗಳು ಇರೋದಿಲ್ಲ. ಯಾಕೇ ಅಂತ ಇಲ್ಲಿದೆ ನೋಡಿ ಮಾಹಿತಿ.

Also read: ಹೆಲ್ಮೆಟ್ ಧರಿಸದೇ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಮಾನತ್ತು..

ಹೌದು ಮಹಿಳೆಯರು ಹಾಗೂ ಮಕ್ಕಳು ಕೆಲವು ಸಮಯದಲ್ಲಿ ಸೌಚಾಲಯಕ್ಕೆ ಹೋಗಬೇಕಾಗಿರುತ್ತೆ. ಅದರಲ್ಲಿ ಮಾರುಕಟ್ಟೆ ಪ್ರದೇಶ, ದೂರ ಪ್ರಯಾಣದ ವೇಳೆ ಸಾರ್ವಜನಿಕ ಶೌಚಾಲಯ ಇಲ್ಲದೇ ಬಹಳಷ್ಟು ಪರದಾಡುತ್ತಿದ್ದರು. ಇದನ್ನು ತಿಳಿದ ಗುವಾಹಟಿ ಸರ್ಕಾರ ಯಾವುದೇ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ, ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಶೌಚಾಲಯ ಬಳಕೆಗೆ ನಿರ್ಬಂಧಿಸುವಂತಿಲ್ಲ. ಗ್ರಾಹಕರಲ್ಲದಿದ್ದರೂ ಹಣವನ್ನು ನೀಡದೇ ಶೌಚಾಲಯ ಬಳಕೆ ಮಾಡಬಹುದಾಗಿದೆ. ಸ್ವತಂತ್ರವಾಗಿ ತೆರಳಿ ಬಳಸಲು ಅವಕಾಶ ಒದಗಿಸಲಾಗಿದೆ. ಈ ವ್ಯವಸ್ಥೆ ಸದ್ಯದಲ್ಲೇ ದೇಶದ ತುಂಬೆಲ್ಲ ಜಾರಿಗೆ ಬರಲಿದೆ.

ಈ ಮುನಿಸಿಪಲ್ ಕಾರ್ಪೊರೇಷನ್ ಕಮಿಷನರ್ ದೆಬೇಶ್ವರ್ ಮಲಕರ್ ಈ ಬಗ್ಗೆ ನಿರ್ದೇಶನವನ್ನು ನೀಡಿ. ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದ್ದು, 33 ಬಯೋ ಶೌಚಾಲಯಗಳಿವೆ. ಇಲ್ಲಿನ ಜನಸಂಖ್ಯೆಗೆ ಇವುಗಳು ಅತೀ ಕಡಿಮೆ. ಈ ನಿಟ್ಟಿನಲ್ಲಿ ಪಂಚತಾರಾ ಹೋಟೆಲ್ ಗಳನ್ನು ಸಾರ್ವಜನಿಕರು ಮುಕ್ತವಾಗಿ ಬಳಸಬಹುದು ಎಂದಿದ್ದಾರೆ. ಒಂದು ವೇಳೆ ಈ ನಿರ್ದೇಶನಕ್ಕೆ ಯಾವುದೇ ಶಾಪಿಂಗ್ ಮಾನ್, ಹೋಟೆಲ್ ಗಳು ಶೌಚಾಲಯ ಬಳಕೆಗೆ ಅವಕಾಶ ನಿರಾಕರಿಸಿದಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಕಮಿಷನರ್ ಎಚ್ಚರಿಸಿದ್ದಾರೆ. ಇದೆ ನಿಯಮವನ್ನು ಈಗಾಗಲೇ ದಿಲ್ಲಿ ಸೇರಿದಂತೆ ಕೆಲ ನಗರಗಳಲ್ಲಿ ಈ ರೀತಿ ಶೌಚಾಲಯ ಬಳಕೆಗೆ ಮುಕ್ತ ಅವಕಾಶವನ್ನು ಕೆಲ ವರ್ಷಗಳ ಹಿಂದೆಯೇ ನೀಡಲಾಗಿದೆ. ಇದೀಗ ಗುವಾಹಟಿಯಲ್ಲಿಯೂ ಕೂಡ ಶೌಚಾಲಯ ಬಳಕೆಗೆ ನಿರ್ಬಂಧ ವಿಧಿಸುವಂತಿಲ್ಲ ಎಂದು ಆದೇಶ ನೀಡಲಾಗಿದೆ.

Also read: ಕೇಂದ್ರ ಸರ್ಕಾರದಿಂದ ಮತ್ತೆ ಬಿಗ್ ಶಾಕ್; ವಾಹನಗಳ ನೋಂದಣಿ ಶುಲ್ಕ ಹೆಚ್ಚಿಸಲು ಮುಂದಾದ ಸರ್ಕಾರ, ಯಾವ ವಾಹನಗಳಿಗೆ ಎಷ್ಟು ಹೆಚ್ಚಳ??

ಅದರಂತೆ ದೇಶದಲ್ಲಿ ಪ್ರತಿಯೊಂದು ಮನೆಗೆ ಒಂದು ಸೌಚಾಲಯದ ವ್ಯವಸ್ಥೆ ಇರಬೇಕು ಎನ್ನುವುದು ಪ್ರಧಾನಿ ಮೋದಿಯವ ಸ್ವಚ ಭಾರತದ ಕನಸ್ಸಾಗಿದ್ದು, ದೇಶದ ಆರೋಗ್ಯದ ವಿಚಾರವಾಗಿ ಅನಾರೋಗ್ಯಕ್ಕೆ ಔಷಧೋಪಚಾರ, ಉಚಿತ ಚಿಕಿತ್ಸೆ ಕೊಡುವುದಷ್ಟೇ ಅಲ್ಲದೇ ಅನಾರೋಗ್ಯಕ್ಕೆ ಕಾರಣವಾಗುವ ಮಾಲಿನ್ಯವನ್ನು ತಡೆಗಟ್ಟಿ ನಿರ್ಮಲೀಕರಣದೆಡೆಗೆ ಹೆಜ್ಜೆ ಇಡುವುದೂ ಸರ್ಕಾರದ ಕರ್ತವ್ಯ. ದೇಶದ ಆರೋಗ್ಯದಲ್ಲಿ ಸ್ವಚ್ಛ ಭಾರತದ ಪಾತ್ರವೂ ಅಷ್ಟೇ ಇದೆ. ಅದಕ್ಕೆ ಎರಡರ ಯಶಸ್ಸನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಎಂದು ಸಾರಿ ಹೇಳಿದ್ದಾರೆ. ಅದರಂತೆ ಈಗ ಜಾರಿ ಮಾಡಲಾದ ವ್ಯವಸ್ಥೆಯಿಂದ ಸಾಕಷ್ಟು ಅನುಕೂಲವಾಗುತ್ತೆ. ಇದು ಆದಷ್ಟು ಬೇಗ ಎಲ್ಲ ರಾಜ್ಯಗಳಲ್ಲಿ ಬರಲಿ ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ.