ಶೌಚಾಲಯದ ಒಳಗೆ ಏನೇನಿದೆ ಎನ್ನುವುದೆಲ್ಲಾ ಹೊರಗಿನಿಂದ ಲೇ ನೋಡಬಹುದು: ಇದು ಟ್ರಾನ್ಸ್’ಪರೆಂಟ್ ಪಬ್ಲಿಕ್ ಟಾಯ್ಲೆಟ್

0
276

ಹೆಚ್ಚಿನವರು ಸಾರ್ವಜನಿಕ ಶೌಚಾಲಯವನ್ನು ಬಳಸಲು ಹೆದರುತ್ತೇವೆ. ಇದಕ್ಕೆ ಪ್ರಮುಖ ಕಾರಣ ನೈರ್ಮಲ್ಯ ಮತ್ತು ಸ್ವಚ್ಛತೆಯ ಅಂಶ. ಈ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ಟೋಕಿಯೊ ಎರಡು ಸಾರ್ವಜನಿಕ ಉದ್ಯಾನವನಗಳಲ್ಲಿ ಹೊಸ ಶೌಚಾಲಯಗಳನ್ನು ನಿರ್ಮಿಸಿದೆ. ಅದರ ವಿಶೇಷವೇನೆಂದರೆ, ಮೊದಲನೆಯದಾಗಿ ಅವು ವರ್ಣರಂಜಿತವಾಗಿದೆ ಮತ್ತು ಚೆನ್ನಾಗಿ ಹೊಳೆಯುತ್ತವೆ.

ಜಪಾನ್ ದೇಶದ ಟೋಕಿಯೋ ಜಿಲ್ಲೆಯ ಶಿಬುಯಾದಲ್ಲಿ ಟ್ರಾನ್ಸ್’ಪರೆಂಟ್ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಈ ಶೌಚಾಲಯವೀಗ ಎಲ್ಲರ ಗಮನ ಸೆಳೆದಿದ್ದು, ಇದರ ಫೋಟೋಗಳು ವೈರಲ್ ಆಗಿವೆ.

ಈ ಶೌಚಾಲಯದ ನಿರ್ಮಾಣದಲ್ಲಿ ಸ್ಮಾರ್ಟ್ ಗ್ಲಾಸ್ ಅಳವಡಿಸಲಾಗಿದೆ. ವ್ಯಕ್ತಿಯೊಬ್ಬ ಈ ಶೌಚಾಲಯದ ಒಳಗೆ ಹೋಗಿ ಬಾಗಿಲು ಲಾಕ್ ಮಾಡುತ್ತಿದ್ದಂತೆ ಗೋಡೆ ಬದಲಾಗುತ್ತದೆ. ಆಗ ಹೊರಗಿನವರಿಗೆ ಒಳಗಿರುವವರು ಕಾಣುವುದಿಲ್ಲ. ಆದರೆ ಒಳಗೆ ಹೋದವರು ಹೊರಗಿನವರನ್ನು ನೋಡಬಹುದಾಗಿದೆ. ಇದೇ ಈ ಶೌಚಾಲಯದ ವಿಶೇಷವಾಗಿದೆ. ಹೀಗೆ ಶೌಚಾಲಯ ನಿರ್ಮಿಸಲು ಕಾರಣ, ಒಳಗೆ ಶೌಚಾಲಯ ಎಷ್ಟು ಸ್ವಚ್ಛವಾಗಿದೆ ಎಂದು ತಿಳಿದುಕೊಳ್ಳಲು.

ಇಂತಹ ಶೌಚಾಲಯಗಳನ್ನು ನಿಪ್ಫಾನ್ ಫೌಂಡೇಷನ್ ಉದ್ಯಾನವನಗಳಲ್ಲಿ ಸ್ಥಾಪಿಸಲಾಗಿದೆ. ಸದ್ಯ ಎರಡು ಉದ್ಯಾನವನದಲ್ಲಿ ಈ ಬಗೆಯ ಎರಡು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದು ಹೊರಗಿನಿಂದ ನಿಂತು ನೋಡಿದಾಗ ಪಾರದರ್ಶಕದಂತೆ ಕಂಡರೂ ಯಾರಾದರೂ ಈ ವಾಶ್‌ರೂಮ್ ಬಳಕೆಗೆಂದು ಒಳಗೆ ಹೋಗಿ ಬಾಗಿಲು ಮುಚ್ಚಿದ ತಕ್ಷಣ ಗೋಡೆಯ ಗಾಜಿನ ಬಣ್ಣವೂ ಬದಲಾಗಿ ಎಲ್ಲಾ ಮುಚ್ಚಿ ಹೋಗುತ್ತದೆ. ಹೀಗಾಗಿ, ಗಾಜಿನ ಗೋಡೆಯ ಬಣ್ಣ ಬದಲಾಗಿದೆ ಎಂದರೆ ಯಾರಾದರೂ ಈ ವಾಶ್‌ರೂಮ್ ಬಳಸುತ್ತಿದ್ದಾರೆ ಎಂದರ್ಥ. ಶಿಗೇರು ಬಾನ್ ವಿನ್ಯಾಸಕಾರರು ಈ ವಿಶಿಷ್ಟ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿದ್ದಾರೆ.

ಜನರ ಅಗತ್ಯಕ್ಕೆ ತಕ್ಕಂತೆ ಈ ಶೌಚಾಲಯಗಳನ್ನು ಯೆಯೋಗಿ ಫುನಕಮಾಚಿ ಮಿನಿ ಪಾರ್ಕ್ ಮತ್ತು ಹರು-ನೋ-ಒಗಾವಾ ಸಮುದಾಯ ಉದ್ಯಾನವನದಲ್ಲಿ ಸ್ಥಾಪಿಸಲಾಗಿದೆ. ಜನರ ಅಗತ್ಯಕ್ಕೆ ಅನುಗುಣವಾಗಿ ಇದನ್ನು ತಯಾರಿಸಲಾಗಿದೆ. ಪಾರದರ್ಶಕ ಗಾಜಿನ ಗೋಡೆಗಳು ಹೊರಗಿನ ಜನರಿಗೆ ಗೋಚರಿಸುತ್ತವೆ ಮತ್ತು ಅದು ಸ್ವಚ್ಛವಾಗಿದೆಯೇ ಎಂದು ನಿರ್ಧರಿಸಲು ಅವರಿಗೆ ಸಹಾಯ ಮಾಡುತ್ತದೆ. ಶಿಬುಯಾದ ಎರಡು ಉದ್ಯಾನವನಗಳಾದ ಯೊಯೋಗಿ ಫುಕಮಾಚಿ ಮಿನಿ ಪಾರ್ಕ್ ಮತ್ತು ಹರು-ನೋ-ಒಗವಾ ಕಮ್ಯೂನಿಟಿ ಪಾರ್ಕ್‌ನಲ್ಲಿ ಈ ವಿಶಿಷ್ಟ ವಾಶ್‌ರೂಮ್ ನಿರ್ಮಿಸಲಾಗಿದೆ. ಸದ್ಯ ಈ ವಾಶ್‌ರೂಮ್‌ನ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ಈ ವಾಶ್‌ರೂಮ್‌ ನಿರ್ಮಾಣದ ಬಗ್ಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಈ ವಿಶಿಷ್ಟ ಕಲ್ಪನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Also read: ಸಾವಿರಾರು ವರ್ಷಗಳ ಹಿಂದೆ ಹೂತಿಟ್ಟಿದ್ದ 400ಕ್ಕೂ ಹೆಚ್ಚು ಚಿನ್ನದ ನಾಣ್ಯಗಳು ಪತ್ತೆ