ಟೊಮೆಟೊ ಚಟ್ನಿ

1
5279

ಬೇಕಾಗುವ ಸಾಮಗ್ರಿ: ಕತ್ತರಿಸಿದ ಟೊಮೆಟೊ ಹಣ್ಣು-2 ಕಪ್, ಕತ್ತರಿಸಿದ ಈರುಳ್ಳಿ-1/2 ಕಪ್, ಬಿಳಿ ಎಳ್ಳು-2 ಟೀ ಚಮಚ, ಕರಿಬೇವಿನ ಎಲೆಗಳು-8, ಒಣಮೆಣಸಿನಕಾಯಿ-6, ಉಪ್ಪು-ರುಚಿಗೆ ತಕ್ಕಷ್ಟು, ತೆಂಗಿನತುರಿ-1 ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು-3 ಟೀ ಚಮಚ, ಎಣ್ಣೆ-3 ಟೀ ಚಮಚ, ಸಾಸಿವೆ-1/2 ಟೀ ಚಮಚ,
ಇಂಗು-1/4 ಟೀ ಚಮಚ.

Tamoto chatni

ಮಾಡುವ ವಿಧಾನ:

ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ, ಬಿಳಿ ಎಳ್ಳು, ಟೊಮೆಟೊ, ಈರುಳ್ಳಿ, ಒಣಮೆಣಸಿನಕಾಯಿ, ಕರಿಬೇವಿನ ಎಲೆಗಳನ್ನು ಬೇರೆಬೇರೆಯಾಗಿ ಹುರಿದಿಟ್ಟುಕೊಳ್ಳಿ. ನಂತರ,
ಹುರಿದಿರಿಸಿದ ಟೊಮೆಟೊ, ಈರುಳ್ಳಿ, ಒಣಮೆಣಸಿನಕಾಯಿ, ಬಿಳಿ ಎಳ್ಳು, ಕರಿಬೇವಿನ ಎಲೆಗಳನ್ನು ತೆಂಗಿನಕಾಯಿ ತುರಿ, ಉಪ್ಪು, ಕೊತ್ತಂಬರಿ ಸೊಪ್ಪಿನೊಂದಿಗೆ ಸೇರಿಸಿ ರುಬ್ಬಿಕೊಳ್ಳಿ. ರುಬ್ಬಿದ
ಮಿಶ್ರಣಕ್ಕೆ, ಸಾಸಿವೆ-ಇಂಗಿನ ಒಗ್ಗರಣೆ ಸೇರಿಸಿದರೆ, ರುಚಿಯಾದ ಟೊಮೆಟೊ ಚಟ್ನಿ ರೆಡಿ. ಚಪಾತಿಗೆ ಇಲ್ಲವೆ ಅನ್ನದೊಂದಿಗೆ ತಿನ್ನಬಹುದು.