ಖಾರ ಪ್ರಿಯರಿಗೆ ಇಷ್ಟವಾಗುವ ಆಂಧ್ರ ಶೈಲಿಯ ಟೊಮೆಟೊ ಪಪ್ಪು, ತಯಾರಿಸುವ ವಿಧಾನ..!!

0
976

ಪ್ರತಿದಿನವೂ ಊಟಕ್ಕೆ ಬೇಕಾದ ವೆಜ್ ಅಡುಗೆ ಮಾಡುವುದು ಒಂದು ತರಹದ ಗೊಂದಲವೇ ಆಗಿದೆ ಏಕೆಂದರೆ ದಿನದ ಮೂರು ಹೊತ್ತಿನ ಅಡುಗೆಗೆ ಬೇರೆ ಬೇರೆಯ ತರದಲ್ಲಿ ಮಾಡುವ ಅಡುಗೆಯನ್ನು ಮನೆಯಲ್ಲಿ ಇಷ್ಟಪಡುತ್ತಾರೋ ಇಲ್ಲೋ ಎಂಬ ಭಯವಿರುತ್ತೆ ಕಷ್ಟಪಟ್ಟು ಮಾಡಿದ ಅಡುಗೆಗೆ ಮೆಚ್ಚುಗೆ ಬರದೆ ಇದ್ದಾಗೆ ಬೇಜಾರು ಆಗುವುದು ಸಾಮಾನ್ಯವಾಗಿದೆ. ಪ್ರತಿಯೊಂದು ಅಡುಗೆಗೆ ಸಾಮಾನ್ಯವಾಗಿ ಬೇಕಾಗಿರುವ ತರಕಾರಿ ಅಂದ್ರೆ ಟೊಮೆಟೊ ಇದರಿಂದ ಹಲವಾರು ತರಹದ ಅಡುಗೆಯನ್ನು ತಯಾರಿಸಬಹುದು. ಅದರಲ್ಲಿ ಒಂದ್ದಾದ ಆಂಧ್ರದಲ್ಲಿ ಹೆಸರು ಮಾಡಿದ ಟೊಮೆಟೊ ಪಪ್ಪು, ಖಾರ ಪ್ರಿಯರಿಗೆ ಇಷ್ಟವಾಗುವುದು. ಈ ಅಡುಗೆ ಬೇಳೆ ಸಾರಿನಷ್ಟೇ ಸುಲಭವಾಗಿ ಮಾಡಬಹುದಾದ ಆಹಾರವಾಗಿದೆ. ಈ ಅಡುಗೆಯನ್ನು 2 ರೀತಿಯಲ್ಲಿ ತಯಾರಿಸಬಹುದು. ಬೇಳೆಯನ್ನು ಕುಕ್ಕರ್ ನಲ್ಲಿ ಹಾಕಿ ಬೇಯಿಸಿ ನಂತರ ಟೊಮೆಟೊ ಹಾಕಿ ಮಾಡಬಹುದು ಅಥವಾ ಬೇಳೆ ಮತ್ತು ಟೊಮೆಟೊವನ್ನು ಜೊತೆಯಲ್ಲಿ ಹಾಕಿ ಬೇಯಿಸಿ ನಂತರ ಒಗ್ಗರಣೆ ಕೊಟ್ಟು ಈ ಸಾರು ತಯಾರಿಸಬಹುದು.

Also read: ವಿಶ್ವದ ನಾಲ್ಕನೇ ಅತಿದೊಡ್ಡ ಆಹಾರ ಬೆಳೆಯಾಗಿರುವ ಸ್ಪೆಷಲ್ ಬೇಬಿ ಆಲೂ ಫ್ರೈ ಮಾಡುವ ವಿಧಾನ..!!

ಬೇಕಾಗುವ ಪದಾರ್ಥಗಳು:

 • ಒಂದು ಈರುಳ್ಳಿ
 • ಒಂದು ಇಂಚಿನಷ್ಟಿರುವ ಶುಂಠಿ
 • 4-5 ಹಸಿ ಮೆಣಸಿನಕಾಯಿ
 • ಮೂರು ಟೊಮೆಟೊ
 • ಅರ್ಧ ಚಮಚ ಅರಿಶಿಣ ಪುಡಿ
 • ಎರಡು ಚಮಚ ಎಣ್ಣೆ

Also read: ರುಚಿ ರುಚಿಯಾದ ಪನ್ನೀರ್- ಚಿಕನ್ ಗ್ರೇವಿ ಮಾಡುವ ವಿಧಾನ..!!

 • ರುಚಿಗೆ ತಕ್ಕಷ್ಟು ಉಪ್ಪು
 • ಸ್ವಲ್ಪ ಕೊತ್ತಂಬರಿ ಸೊಪ್ಪು
 • 4 ಒಣ ಮೆಣಸು ಒಗ್ಗರಣೆಗೆ
 • ಒಂದು ಚಮಚ ಸಾಸಿವೆ
 • ಒಂದು ಚಮಚ ಜೀರಿಗೆ
 • ನಾಲ್ಕು ಎಸಳು ಬೆಳ್ಳುಳ್ಳಿ
 • ಚಿಟಿಕೆಯಷ್ಟು ಇಂಗು
 • ಒಂದು ಚಮಚ ತುಪ್ಪ

Also read: ನಿಮ್ಮ ಮಕ್ಕಳು ಸರಿಯಾಗಿ ಊಟ ಮಾಡುತ್ತಿಲ್ಲ ಎಂಬ ಚಿಂತೆ ಬಿಟ್ಟು.. ರಾಗಿ-ಅಕ್ಕಿ ದೋಸೆ ಮಾಡಿ ಕೊಡಿ..!!

ತಯಾರಿಸುವ ವಿಧಾನ:

 • ಬೇಳೆಯನ್ನು ಕುಕ್ಕರ್ ನಲ್ಲಿ ಹಾಕಿ 3 ವಿಶಲ್ ಬರುವವರೆಗೆ ಬೇಯಿಸಿ.
 • ಈಗ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಸಾಸಿವೆಯನ್ನು ಹಾಕಿ. ಸಾಸಿವೆ ಚಟಾಪಟ ಅಂತ ಶಬ್ದ ಮಾಡುವಾಗ ಜೀರಿಗೆ ಹಾಕಿ ಅದಕ್ಕೆ ಒಣ ಮೆಣಸನ್ನು ಮುರಿದು ಹಾಕಿ
 • ನಂತರ ಬೆಳ್ಳುಳ್ಳಿ ಹಾಕಬೇಕು. ಶುಂಠಿಯನ್ನು ಜಜ್ಜಿ ಹಾಕಿ.
 • ನಂತರ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಹಸಿ ಮೆಣಸಿನ ಕಾಯಿ ಹಾಕಿ ಸ್ವಲ್ಪ ಹೊತ್ತು ಹುರಿದು ಅದಕ್ಕೆ ಉಪ್ಪು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಸೌಟ್ ನಿಂದ ಅಡಿಸಿ.
 • ನಂತರ ಬೇಳೆ ಹಾಕಿ, ಅರಿಶಿಣ ಪುಡಿ ಹಾಕಿ, ಅರ್ಧ ಕಪ್ ನೀರು ಸೇರಿಸಿ ಸಾರನ್ನು ಕುದಿಸಿ.
 • ನಂತರ ಉಪ್ಪು ನೋಡಿ, ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಟೊಮೆಟೊ ಪಪ್ಪು ರೆಡಿ.