ಈರುಳ್ಳಿ ಮತ್ತು ಆಲೂಪರೋಟಾನ ಸಾಮಾನ್ಯವಾಗಿ ನೀವು ತಿಂದಿರುತ್ತೀರಿ…ಆದರೆ ಟೊಮೆಟೊ ಪರೋಟಾ ರುಚಿನೇ ಬೇರೆ…

0
1315

ಸಾಮಗ್ರಿ:

  • ಕತ್ತರಿಸಿದ ಟೊಮೆಟೊ-1 ಕಪ್,
  • ಗೋಧಿ ಹಿಟ್ಟು-3 ಕಪ್,
  • ಗರಮ್ ಮಸಾಲೆ-2 ಟೀ ಚಮಚ,
  • ಕತ್ತರಿಸಿದ ಕೊತ್ತಂಬರಿ ಸೊಪ್ಪು-2 ಟೀ ಚಮಚ,
  • ಉಪ್ಪು-ರುಚಿಗೆ ತಕ್ಕಷ್ಟು,
  • ಎಣ್ಣೆ-5 ಟೀ ಚಮಚ.

tomato parota
ವಿಧಾನ: ಕತ್ತರಿಸಿದ ಟೊಮೆಟೊ, ಕೊತ್ತಂಬರಿ ಸೊಪ್ಪು, ಗರಮ್ ಮಸಾಲೆ, ಉಪ್ಪುಗಳನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಗೋಧಿಹಿಟ್ಟಿಗೆ, ರುಬ್ಬಿದ ಟೊಮೆಟೊ ಮಿಶ್ರಣ, ಸ್ವಲ್ಪ ಎಣ್ಣೆ ಬೆರೆಸಿ ಚಪಾತಿ ಹದಕ್ಕೆ ಕಲೆಸಿ, ಒಂದು ಗಂಟೆ ನೆನೆಸಿ.

ಈ ಮೊದಲು ಕಲೆಸಿದ ಗೋಧಿ ಹಿಟ್ಟಿನಿಂದ ಸಣ್ಣ ಉಂಡೆಯನ್ನು ತೆಗೆದು ಚಪಾತಿಯ ಆಕಾರದಲ್ಲಿ ಲಟ್ಟಿಸಿ ಕಾಯಿಸಿದ ತವಾದ ಮೇಲೆ ಎಣ್ಣೆ ಸವರಿ ಹರಡಿ. ಎರಡೂ ಬದಿಯನ್ನು ಬೇಯಿಸಿ ತೆಗೆದರೆ ರುಚಿಯಾದ ಟೊಮೆಟೊ ಪರೋಟಾ ಸವಿಯಲು ಸಿದ್ಧ. ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲು ಬಲು ರುಚಿ.