ಟೊಮೆಟೊ ಸಾರು

0
3159

ಸಾಮಗ್ರಿ: ಕತ್ತರಿಸಿದ ಟೊಮೆಟೊ-2 ಕಪ್, ಹುರಿದ ಒಣಮೆಣಸಿನಕಾಯಿ-4, ತೆಂಗಿನತುರಿ-1 ಕಪ್, ಕಾಳುಮೆಣಸಿನ ಪುಡಿ-1/2 ಟೀ ಚಮಚ, ಜೀರಿಗೆ ಪುಡಿ-1 ಟೀ ಚಮಚ, ತುಪ್ಪ-3 ಟೀ ಚಮಚ, ಸಾಸಿವೆ-1 ಟೀ ಚಮಚ, ಇಂಗು-1/4 ಟೀ ಚಮಚ, ಕರಿಬೇವಿನ ಎಲೆಗಳು-8, ಉಪ್ಪು-ರುಚಿಗೆ ತಕ್ಕಷ್ಟು, ಬೆಲ್ಲದ ತುರಿ-1 ಟೀ ಚಮಚ.

how-to-make-tomato-rasam
ವಿಧಾನ: ಕತ್ತರಿಸಿದ ಟೊಮೆಟೊ, ಒಣಮೆಣಸಿನಕಾಯಿ ಹಾಗೂ ತೆಂಗಿನಕಾಯಿ
ತುರಿಗಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ, ಸಾಸಿವೆ-ಇಂಗಿನ ಒಗ್ಗರಣೆ ಮಾಡಿ, ಕರಿಬೇವಿನ ಎಲೆಗಳನ್ನು ಹಾಕಿ ಬಾಡಿಸಿ. ತಯಾರಿಸಿದ ಒಗ್ಗರಣೆಗೆ, ರುಬ್ಬಿದ ಟೊಮೆಟೊ ಮಿಶ್ರಣ, ಜೀರಿಗೆ, ಕಾಳುಮೆಣಸಿನ ಪುಡಿ, ಉಪ್ಪು, ಬೆಲ್ಲ ಹಾಕಿ ಕುದಿಸಿದರೆ
ರುಚಿಯಾದ ಟೊಮೆಟೊ ಸಾರು ರೆಡಿ. ಅನ್ನದೊಂದಿಗೆ ಇಲ್ಲವೇ ಕುಡಿಯಲು ಬಲು ರುಚಿ.

ಅಥವ

ಟೊಮೆಟೊ ಸಾರು ಅಥವಾ ರಸಂ ಮಾಡುವುದು ಹೇಗೆ? * ತೊಗರಿ ಬೇಳೆಗೆ ಚಿಟಿಕೆ ಅರಿಶಿನ, ಬೆಳ್ಳುಳ್ಳಿ ಎಸಳು ಮತ್ತು ಒಂದೆರಡು ಹನಿ ಎಣ್ಣೆ ಬೆರೆಸಿ ಕುಕ್ಕರ್ ನಲ್ಲಿ ಚೆನ್ನಾಗಿ ಬೇಯಿಸಬೇಕು. * ಒಂದು ಪಾತ್ರೆಗೆ ಒಂದು ಗ್ಲಾಸ್ ನೀರು ಹಾಕಿ ಕತ್ತರಿಸಿದ ಟೊಮೆಟೊ, ರಸಂ ಪುಡಿ, ಉಪ್ಪು, ಹುಣಸೆ ರಸ, ಕರಿಬೇವು, ಕೊತ್ತಂಬರಿ, ಬೆಲ್ಲ ಎಲ್ಲವನ್ನೂ ಸೇರಿಸಿ ಇದು ಚೆನ್ನಾಗಿ ಕುದಿಯುವವರೆಗೂ ಕಾಯಬೇಕು. * ನಂತರ ಬೆಂದ ಈ ಮಿಶ್ರಣಕ್ಕೆ ಚೆನ್ನಾಗಿ ಬೆಂದ ತೊಗರಿ ಬೇಳೆ ಬೆರೆಸಿ ಚೆನ್ನಾಗಿ ಮಸೆದು ತಿರುಗಿಸಿ ಸಣ್ಣನೆಯ ಕಾವಿನಲ್ಲಿ ಒಲೆಯ ಮೇಲಿಡಬೇಕು. ನಿಮ್ಮ ಅಗತ್ಯಕ್ಕೆ ತಕ್ಕಂತೆ ಸಾರಿಗೆ ಇನ್ನೂ ನೀರನ್ನು ಬೆರೆಸಿಕೊಳ್ಳಬಹುದು. * ಈಗ ಚಿಕ್ಕ ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಕರಿಬೇವು ಮತ್ತು ಇಂಗಿನಿಂದ ಒಗ್ಗರಣೆ ಹಾಕಿಕೊಂಡು ಸಾರಿಗೆ ಬೆರೆಸಿ ಕುದಿಸಬೇಕು. ಈಗ ರುಚಿಕರ ಮತ್ತು ಮಸಾಲೆ ಭರಿತವಾದ ಟೊಮೆಟೊ ಸಾರು ತಿನ್ನಲು ಸಿದ್ಧವಾಗಿದೆ. ಅನ್ನದೊಂದಿಗೆ ತುಪ್ಪ ಬೆರೆಸಿ ಟೊಮೆಟೊ ಸಾರಿನ ರುಚಿ ಸವಿಯಬಹುದು.