ಟೊಮೆಟೊ-ಸೌತೆಕಾಯಿ ರೈತ

0
1665

ಬೇಕಾಗು ಸಾಮಗ್ರಿಗಳು:

ಕತ್ತರಿಸಿದ ಟೊಮೆಟೊ-2 ಕಪ್,

ತುರಿದ ಸೌತೆಕಾಯಿ-1 ಕಪ್,

ಮೊಸರು-2 ಕಪ್,

ಸಣ್ಣಗೆ ಹೆಚ್ಚಿದ ಪುದಿನಾ ಎಲೆಗಳು-1 ಟೀ ಚಮಚ,

ಒಣಮೆಣಸಿನಕಾಯಿ-4,

ಕಡಲೆಕಾಯಿ ಬೀಜದ ಪುಡಿ-3 ಟೀ ಚಮಚ,

ತೆಂಗಿನತುರಿ-3 ಟೀ ಚಮಚ,

ಎಣ್ಣೆ-3 ಟೀ ಚಮಚ,

ಸಾಸಿವೆ-1 ಟೀ ಚಮಚ,

ಇಂಗು-1/4 ಟೀ ಚಮಚ,

ಜೀರಿಗೆ ಪುಡಿ-1 ಟೀ ಚಮಚ,

ಉಪ್ಪು ರುಚಿಗೆ ತಕ್ಕಷ್ಟು,

ಕತ್ತರಿಸಿದ ಕೊತ್ತಂಬರಿ ಸೊಪ್ಪು-2 ಟೀ ಚಮಚ.

tomato-raita-recipe
ವಿಧಾನ:

ಪಾತ್ರೆಯೊಂದರಲ್ಲಿ ಮೊಸರು, ಕತ್ತರಿಸಿದ ಟೊಮೆಟೊ ಹೋಳುಗಳು, ಉಪ್ಪು ಹಾಗೂ ಸೌತೆಕಾಯಿ ತುರಿಗಳನ್ನು ಸೇರಿಸಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ-ಇಂಗು-ಜೀರಿಗೆಗಳ ಒಗ್ಗರಣೆ ಮಾಡಿ, ಒಣಮೆಣಸಿನ ಕಾಯಿ, ಪುದಿನಾ ಎಲೆಗಳನ್ನು ಸೇರಿಸಿ ಬಾಡಿಸಿ. ಒಗ್ಗರಣೆ ಮಿಶ್ರಣ, ಕಡಲೇಕಾಯಿ ಬೀಜದ ಪುಡಿಗಳನ್ನು ಟೊಮೆಟೊ ಮಿಶ್ರಣಕ್ಕೆ ಸೇರಿಸಿ ಕಲಕಿ. ತೆಂಗಿನ ತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ರುಚಿಯಾದ ಟೊಮೆಟೊ ರಾಯತ ರೆಡಿ. ಚಪಾತಿಯೊಂದಿಗೆ ತಿನ್ನಲು ಬಲು ರುಚಿ.

raita5