ಹಸಿ ಟೊಮೇಟೊದಿಂದ ಏನೆಲ್ಲಾ ಅರೋಗ್ಯ ಲಾಭಗಳು ಆಗುತ್ತವೆ ಗೊತ್ತ??

0
1561

ಹಣ್ಣು, ತರಕಾರಿ, ಧಾನ್ಯಗಳು ನಮ್ಮ ಆರೋಗ್ಯ, ಶಕ್ತಿಯನ್ನು ಹೆಚ್ಚಿಸುತ್ತವೆ. ಇವುಗಳಲ್ಲಿ ವಿಫುಲವಾದ ಪೌಷ್ಟಿಕಾಂಶ ಗುಣಗಳಿರುತ್ತವೆ. ಇವುಗಳಲ್ಲಿ ಕೆಲವು ತರಕಾರಿ-ಹಣ್ಣು ಎರಡೂ ಗುಣಗಳನ್ನು ಹೊಂದಿರುತ್ತವೆ. ನಿತ್ಯ ಅಡುಗೆಗೆ ಬಳಸುವ ಟೊಮ್ಯಾಟೋ ಕೂಡ ಇಂತಹುದೇ ಗುಂಪಿಗೆ ಸೇರಿದ್ದು. ಇದನ್ನು ಪ್ರಮುಖವಾಗಿ ತರಕಾರಿ ಎಂದು ಪರಿಗಣಿಸುವುದರಿಂದ ಹಾಗೆಯೇ ಬಳಸುತ್ತೇವೆಯೇ ವಿನಃ ಅದರಲ್ಲಿರುವ ಇತರ ಅಂಶಗಳನ್ನು ಪರಿಗಣಿಸುವುದಿಲ್ಲ.

Image result for tomato
Image Credits: Modern Farmer

ಟೊಮ್ಯಾಟೋವನ್ನು ಹಸಿಯಾಗಿ ಸೇವಿಸುವುದರಿಂದ ಬೇಯಿಸಿದ್ದಕ್ಕಿಂತ ಹೆಚ್ಚಿನ ಪೌಷ್ಟಿಕಾಂಶ, ಪೋಷಕಾಂಶ ದೊರೆಯುತ್ತದೆ. ದಿನಕ್ಕೊಂದು ಅಥವಾ ಎರಡು ಟೊಮ್ಯಾಟೋವನ್ನು ಹಸಿಯಾಗಿ ತಿನ್ನುವುದರಿಂದ ನಿತ್ಯದ ಅಗತ್ಯದ ಅರ್ಧದಷ್ಟು ವಿಟಮಿನ್ ಎ ದೊರೆಯುತ್ತದೆ. ಬೇಯಿಸುವುದರಿಂದ ಇದರಲ್ಲಿರುವ ವಿಟಮಿನ್ ನಷ್ಟವಾಗುವುದರಿಂದ ಹಸಿಯಾಗಿಯೇ ತಿನ್ನುವುದು ಒಳಿತು.
ಹಸಿಯಾಗಿ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರದಲ್ಲಿರುವುದರಿಂದ ಮಧುಮೇಹಿಗಳೂ ಟೊಮ್ಯಾಟೋವನ್ನು ಹಸಿಯಾಗಿ ಸೇವಿಸಬಹುದು. ಮಧುಮೇಹ ಇಲ್ಲದವರಿಗೆ ಅದರ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.ಅಧಿಕ ಪ್ರಮಾಣದ ವಿಟಮಿನ್ ಎ ಇರುವುದರಿಂದ ಕಣ್ಣು ಮತ್ತು ಚರ್ಮಕ್ಕೆ ಅತ್ಯುತ್ತಮ. ಕೆಂಪು ಬಣ್ಣಕ್ಕೆ ಕಾರಣವಾಗುವ ಲೈಕೋಪಿನ್ ಮತ್ತು ಕ್ಯಾಲ್ಸಿಯಂ ಮೂಳೆಗಳನ್ನು ದೃಢವಾಗಿಸಲು ನೆರವಾಗುತ್ತದೆ.

Image result for tomato
Image Credits: Tomato Dirt

ಹಾಗಾಗಿ ಮೂಳೆಗಳಲ್ಲಿ ಗಾಳಿಗುಳ್ಳೆಗಳಿಗೆ ಕಾರಣವಾಗುವ ಆಸ್ಟಿಯೊಪೊರೋಸಿಸ್‍ನಿಂದ ದೂರವಾಗಬಹುದು. ಟೊಮ್ಯಾಟೋದ ಪೋಷಕಾಂಶಗಳು ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಕಡಿಮೆಗೊಳಿಸುವುದರಿಂದ ಹೃದಯ ಸ್ಥಂಭನ ಮುಂತಾದ ಹೃದಯದ ತೊಂದರೆಗಳಿಂದ ಬಚಾವಾಗಬಹುದು. ಮೂಳೆಗಳು ಶಕ್ತಿಹೀನವಾಗಿದ್ದರೆ ಹಸಿ ಟೊಮ್ಯಾಟೋ ನ್ನುವುದರಿಂದ ಈ ಸಮಸ್ಯೆಯಿಂದ ಹೊರಬರಬಹುದು.

ಜೊತೆಗೆ ಇದರಲ್ಲಿರುವ ಲೈಕೋಪಿನ್ ಮೂಳೆಗಳ ಸಾಂದ್ರತೆ ಹೆಚ್ಚಿಸುತ್ತದೆ. ಹಸಿಯಾಗಿ ತಿನ್ನುವುದು ಬೇಡವೆಂದರೆ ಜ್ಯೂಸ್ ಮಾಡಿ ಕುಡಿಯಬಹುದು. ಉರಿಯೂತ ಮತ್ತು ಸಂಧಿವಾತಕ್ಕೆ ಕಾರಣವಾಗುವ ಟಿಎನ್‍ಎಫ್-ಆಲ್ಫಾ ಎಂಬ ಕಣಗಳ ಮಟ್ಟ ಕಡಿಮೆ ಮಾಡುವ ಶಕ್ತಿ ಟೊಮ್ಯಾಟೋಗಿದೆ.ಟೊಮ್ಯಾಟೋದಲ್ಲಿರುವ ವಿಟಮಿನ್ ಎ ಕಣ್ಣು, ತ್ವಚೆ ಮತ್ತು ಮೂಳೆಗಳಿಗೆ ಅತ್ಯುತ್ತಮ. ಆಹಾರ ತಜ್ಞರಂತೂ ಉತ್ತಮ ಆರೋಗ್ಯಕ್ಕಾಗಿ ನಿತ್ಯ ಒಂದು ಕಪ್‍ನಷ್ಟು ಹಸಿ ಟೊಮ್ಯಾಟೋ ಹೋಳುಗಳನ್ನು ತಿನ್ನುವುದು ಉತ್ತಮ ಎನ್ನುತ್ತಾರೆ.

Image result for tomato
Image Credits: Modern Farmer

ಊಟದ ಜೊತೆಯಲ್ಲಿ ಒಂದಿಷ್ಟು ಹೋಳುಗಳನ್ನು ಸೇವಿಸುವುದರಿಂದ ರಕ್ತದಲ್ಲಿ ಥಟ್ಟನೆ ಸಕ್ಕರೆ ಪ್ರಮಾಣ ಏರದಂತೆ ಎಚ್ಚರಿಕೆ ವಹಿಸಬಹುದು. ಅಷ್ಟೇ ಅಲ್ಲ, ದಿನದ ಯಾವುದೇ ಸಮಯದಲ್ಲಾದರೂ ಹಸಿ ಟೊಮ್ಯಾಟೋ ಸೇವಿಸಬಹುದು ಅದರೆ ಯಾವಾಗಲಾದರೂ ಸರಿ ಟೊಮ್ಯಾಟೋ ಸೇವಿಸುವಾಗ ಬೀಜಗಳನ್ನು ತೆಗೆದೇ ತಿನ್ನುವುದು ಒಳ್ಳೆಯದು.