ನೀವು ಟೂತ್ ಪೇಸ್ಟ್ ಕೊಳ್ಳುವ ಮುನ್ನ ಇದನ್ನು ಓದಲೇ ಬೇಕು!!!

0
3228

ವಿವಿಧ ಉತ್ಪನ್ನಗಳ ಪ್ಯಾಕಿಂಗ್ ಮೇಲೆ ಬಣ್ಣದ ಚೌಕಗಳು ಕಂಡುಬರುತ್ತವೆ ಈ ವಿವಿಧ ಬಣ್ಣಗಳು ಉತ್ಪನ್ನದ ರಾಸಾಯನಿಕ ಅಂಶವನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ ಇದು ತಪ್ಪು

ನಿಮ್ಮ ಟೂತ್ ಪೇಸ್ಟ್ ನ ಮೇಲಿರುವ ಬಣ್ಣದ ಚೌಕಗಳು ಏನನ್ನು ಪ್ರತಿನಿಧಿಸುತ್ತವೆ ?

unnamed

ಟೂತ್ ಪೇಸ್ಟ್ ನ ಮೇಲೆ ಉತ್ಪನ್ನ ಸಂಬಂಧಿ ಮಾಹಿತಿಯನ್ನು ಒದಗಿಸಲಾಗುತ್ತದೆ ಹಾಗೂ ಗ್ರಾಹಕರ ಬಳಕೆಯ ಸಲಹೆ ಮತ್ತು ಸೂಚನೆಗಳ ಜೊತೆ ಜೊತೆಗೆ ಬಣ್ಣದ ಚೌಕವು ಇರುತ್ತದೆ

ಟೂತ್ಪೇಸ್ಟ್ ಬಣ್ಣ ಕೋಡ್ ಬಗೆಗಿನ ವದಂತಿಗಳು :

ನೀಲಿ- ನೈಸರ್ಗಿಕ + ಔಷಧ

ಹಸಿರು – ನೈಸರ್ಗಿಕ

ಕೆಂಪು -ನೈಸರ್ಗಿಕ + ರಾಸಾಯನಿಕ ಸಂಯೋಜನೆ

ಕಪ್ಪು -ಶುದ್ಧ ರಾಸಾಯನಿಕ

ನಿಜ ಸಂಗತಿ ಏನು ?

ಬಣ್ಣದ ಚೌಕಗಳಿಗು ಹಾಗೂ ರಾಸಾಯನಿಕ ಅಂಶಗಳಿಗೂ ಯಾವುದೇ ಸಂಬಂಧ ಇಲ್ಲ

ಟೂತ್ಪೇಸ್ಟ್ ತಯಾರಿಕೆ ಪ್ರಕ್ರಿಯೆಯಲ್ಲಿ ಇವನ್ನು ಬಣ್ಣದ ಗುರುತುಗಳು ಅಥವಾ ಕಣ್ಣಿನ ಗುರುತುಗಳು ಎಂದು ಕರೆಯಲಾಗುತ್ತದೆ. ಈ ಗುರುತುಗಳು ಪ್ಯಾಕೆಟ್ ಗಳು ಮಡಿಚಬಹುದೇ ಅಥವಾ ಹೆಚ್ಚಿನ ವೇಗದಲ್ಲಿ ಯಂತ್ರಗಳು ಮೂಲಕ ಬೆಳಕಿನ ಕಿರಣದ ಸಂವೇದಕಗಳನ್ನು ಬಳಸಿ ಪ್ಯಾಕೆಟ್ಗಳನ್ನು ಕತ್ತರಿಸುವ ಪ್ರಕ್ರಿಯೆಯಲ್ಲಿ ಬೆಳಕಿನ ಕಿರಣಗಳು ಬಣ್ಣಗಳನ್ನು ಸೆನ್ಸ್ ಮಾಡಿ ಸರಿಯಾದ ಜಾಗದಲ್ಲಿ ಕತ್ತರಿಸಲು ಇವುಗಳನ್ನು ಬಳಸುತ್ತಾರೆ