ಜೀವನದಲ್ಲಿ ಜಿಗುಪ್ಸೆ ಮೂಡಿಸುವಂತಹ ಮೈಗ್ರೇನ್ ತಲೆನೋವಿಗೆ ಇಲ್ಲಿವೆ ಪರಿಹಾರದ ಮಾರ್ಗಗಳು..

0
268

ಸಾಮಾನ್ಯವಾಗಿ ಕಾಡುವ ತಲೆನೋವುಗಳು ವ್ಯಕ್ತಿಯ ಹಾವಭಾವವನ್ನು ಬದಲಾಯಿಸುತ್ತೆ. ಕೆಲಸದಲ್ಲಿ ಆಸಕ್ತಿ ಕಡಿಮೆ ಮಾಡಿ ಜೀವನವೇ ಬೇಸರಗೊಳಿಸುತ್ತೆ, ಅದರಲ್ಲಿ ಈ ಮೈಗ್ರೇನ್ ತಲೆನೋವುನಿಂದ ವಾಕರಿಕೆ, ಕಣ್ಣು ಕತ್ತಲೆ ಬಂದಂತಾಗುವುದು, ಕುತ್ತಿಗೆಯ ಕೆಳಭಾಗದಲ್ಲಿ ವಿಪರೀತ ನೋವು ಇಂತಹ ತೊಂದರೆಗಳು ಕಂಡು ಬರುತ್ತೇವೆ. ಈ ನೋವುಗಳನ್ನು ನೀವು ಅನುಭವಿಸುತ್ತಿರ ಇದು ಹೆಚ್ಚು ಕಂಡು ಬರುವುದು ಒತ್ತಡದ ಮದ್ಯದಲ್ಲಿ ಹಾಗಂತ ಎಲ್ಲ ತಲೆನೋವುಗಳನ್ನು ಮೈಗ್ರೇನ್ ಅಂತ ಕರೆಯಲು ಸಾದ್ಯವಿಲ್ಲ ಕೆಲವೊಂದು ಶೀತ, ಜ್ವರದಿಂದ ಕೂಡ ತಲೆನೋವು ಕಂಡು ಬರುತ್ತೆ. ಇಷ್ಟೊಂದು ಯಾತನೆ ನೀಡುವ ಮೈಗ್ರೇನ್ ದಾಳಿಗಳನ್ನು ತಡೆಯಲು ಇರುವ ಮಾರ್ಗಗಳು ಇಲ್ಲಿವೆ ನೋಡಿ.

Also read: ಯಾವ ಕೆಲಸವನ್ನು ಮಾಡಲು ಬಿಡದ ಮೈಗ್ರೇನ್ ತಲೆನೋವಿನಿಂದ ಮುಕ್ತಿ ಪಡೆಯಲು ಒಮ್ಮೆ ಇಲ್ಲಿ ಭೇಟಿ ನೀಡಿ..

1. ಮಾನಸಿಕ ಒತ್ತಡದ ಕಡಿಮೆ ಮಾಡಿ:

ಮೈಗ್ರೇನ್ನ ನಿವಾರಣೆಗೆ ಒತ್ತಡವನ್ನು ಕಡಿಮೆ ಮಾಡುವುದು ಮುಖ್ಯ ಏಕೆಂದರೆ ಕೆಲವೊಂದು ಸಂಶೋಧನೆಗಳು ತಿಳಿಸುವ ಹಾಗೆ ಮಾನಸಿಕ ಒತ್ತಡವು ಇದಕ್ಕೆ ಕಾರಣವಾಗಿದೆ. ಆದರಿಂದ ವಿಶ್ರಾಂತಿ ಮುಖ್ಯವಾಗಿದೆ. ಇದಕ್ಕೆ ಯಾವುದೇ ಔಷಧಗಳು ಪರಿಣಾಮ ಬೀರುವುದಿಲ್ಲ. ಅವುಗಳೆಲ್ಲ ತಾತ್ಕಾಲಿಕವಾಗಿವೆ. ಅದರಿಂದ ಯೋಗ ಮಾಡುವುದು ಒಳ್ಳೆಯದಾಗಿದೆ. ಯೋಗವು ಮೈಗ್ರೇನ್ ಗೆ ಅತ್ಯುತ್ತಮ ಪರ್ಯಾಯ ಚಿಕಿತ್ಸೆಯಾಗಿದೆ. ಯೋಗ, ದೇಹದ ಜೀವ ರಾಸಾಯನಿಕ ಮತ್ತು ಹಾರ್ಮೋನುಗಳಲ್ಲಿ ಸಮತೋಲನ ತರಬಲ್ಲದು. ಉಸಿರಾಟದ ವ್ಯಾಯಾಮಗಳು ಮತ್ತು ಇತರ ಯೋಗಾಭ್ಯಾಸಗಳು ಮೈಗ್ರೇನ್ ನ್ನು ಗಮನಾರ್ಹವಾಗಿ ಕಡಿಮೆ ಮಾಡಬಲ್ಲವು.

2. ಪ್ರತಿ ರಾತ್ರಿ 7-9 ಘಂಟೆ ನಿದ್ರೆ ಮಾಡಿ:

ನಿದ್ರೆಯ ಅಭಾವ ಅಥವಾ ಕೆಲವೊಮ್ಮೆ ನಿದ್ರೆಯ ಮಾದರಿಯ ಬದಲಾವಣೆಯು ಮೈಗ್ರೇನ್ ದಾಳಿಯನ್ನು ಪ್ರಚೋದಿಸಬಹುದು, ತಲೆನೋವುಗಳ ತೀವ್ರತೆ ಮತ್ತು ಆವರ್ತನದ ಮೇಲೆ ನಿದ್ರೆಯ ಮಾದರಿ ಬದಲಾವಣೆ ಪರಿಣಾಮವನ್ನು ನಿರ್ದಿಷ್ಟವಾಗಿ ಅರ್ಥಮಾಡಿಕೊಳ್ಳಲು ನಡೆಸಿದ ಒಂದು ಅಧ್ಯಯನದಲ್ಲಿ, 1283 ಮೈಗ್ರೇನ್ ಮತ್ತು 1480 ತಲೆನೋವು ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದಾಗ 75% ರಷ್ಟು ಜನರಿಗೆ ಕಡಿಮೆ ನಿದ್ದೆ ಸಮಸ್ಯೆಯಿಂದ ಮೈಗ್ರೇನ್ ಕಂಡು ಬಂದಿರುವುದು ಪತ್ತೆಯಾಗಿದೆ.

3. ಈ ಆಹಾರಗಳನ್ನು ಸೇವಿಸಬೇಡಿ:

ಚಾಕಲೇಟ್, ಗಟ್ಟಿ ಬೀಜಗಳು, ಪ್ರಿಜ್-ಗಳಲ್ಲಿಟ್ಟ ಆಹಾರಗಳು ಮೈಗ್ರೇನ್ ಗೆ ಕಾರಣವಾಗಿವೆ. ಅಂತಹ ಆಹಾರಗಳನ್ನು ಬಿಡಲು ಸಾದ್ಯ ವಿಲ್ಲದಿದ್ದರೆ ಅವುಗಳ ಬಳಕೆಯನ್ನು ಮಿತವ್ಯಯಗೊಳಿಸಿ.

4. ಅಧಿಕ ಕೆಫೀನ್

ಅಧಿಕವಾಗಿ ಕೆಫೀನ್ ಪ್ರಮಾಣವಿರುವ ಬ್ಲ್ಯಾಕ್ ಕಾಫಿ, ಮೈಗ್ರೇನ್ ನೋವನ್ನು ಭಾಗಶಃ ಕಡಿಮೆಗೊಳಿಸುತ್ತದೆ.

5. ಅರೋಮಾಥೆರಪಿ

ಅರೋಮಾಥೆರಪಿ ನ ಮೈಗ್ರೇನ್ ದಾಳಿಗೆ ಸೂಕ್ತವಾದ ಚಿಕಿತ್ಸೆ ನೀಡಬಲ್ಲದು. ವಿವಿಧ ಪರಿಮಳದ ದ್ರವ್ಯಗಳು ನಿಮ್ಮ ದೇಹದ ಮೇಲೆ ಹಿತವಾದ ಪರಿಣಾಮ ಬೀರಿ ನೀವು ಮೈಗ್ರೇನ್ ನಿಂದ ಬಳಲುತ್ತಿದ್ದಾಗ ಸಹಾಯಮಾಡಬಲ್ಲದು. ಪುದೀನಾ, ನೀಲಗಿರಿ ಮೊದಲಾದವುಗಳಿಂದ ತಯಾರಿಸಲ್ಪಟ್ಟ ಪರಿಮಳ ದ್ರವ್ಯಗಳನ್ನು ಬಳಸುವುದು ಸೂಕ್ತ. ಅಲ್ಲದೇ ಮೈಗ್ರೇನ್ ಹೋಗಲಾಡಿಸಲು ನಿಮಗೆ ಸರಿಹೊಂದುವಂತಹ ಗಿಡಮೂಲಿಕೆಗಳನ್ನೂ ಬಳಸಬಹುದು.

6. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ:

ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದು ಮತ್ತು ಉಪವಾಸ ಮಾಡುವುದು ಮೈಗ್ರೇನ್ ತಲೆ ನೋವಿಗೆ ಕಾರಣವಾಗಬಹುದು. ಅಥವಾ ಕೆಲವು ಬಾರಿ ಹೆಚ್ಚಿನ ಕೆಲವು ಬಾರಿ ಕಡಿಮೆ ಊಟದ ಕ್ರಮವು ಮೈಗ್ರೇನ್ ಗೆ ಕಾರಣವಾಗಿದೆ. ಆದರಿಂದ ಸರಿಯಾದ ಊಟದ ನಿಮ್ಮ ತಲೆ ನೋವನ್ನು ಕಡಿಮೆ ಮಾಡುತ್ತೆ.

7. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ

ದೇಹದಲ್ಲಿ ಇರುವ ಬೊಜ್ಜು ಮತ್ತು ಅಧಿಕ ತೂಕವನ್ನು ಹೊಂದಿರುವ ಜನರಲ್ಲಿ ಮೈಗ್ರೇನ್ ಕಂಡು ಬರುವುದು ಸಾಮಾನ್ಯ ಕಡಿಮೆ ತೊಕವು ಕೂಡ ಅಷ್ಟೇ ಪರಿಣಾಮವನ್ನು ಬಿರುತ್ತೆ ಎಂದು ಸಂಶೋಧನೆಗಳು ತಿಳಿಸಿವೆ.

8. ಸಾಕಷ್ಟು ನೀರು ಕುಡಿಯಿರಿ:

ದೇಹಕ್ಕೆ ಅವಶ್ಯಕ ಇರುವಷ್ಟು ನೀರು ಕುಡಿಯುವುದು ಒಳ್ಳೆಯದು ಏಕೆಂದರೆ ಕೆಲವೊಂದು ಕರಿದ ಮತ್ತು ಒಣ ಆಹಾರ ಸೇವಿಸಿದಾಗ ನೀರು ಕುಡಿಯುವುದು ಮುಖ್ಯವಾಗಿದೆ. ಈ ವಿಷಯವಾಗಿ ಸಂಶೋಧನೆ ತಿಳಿಸುವ ಹಾಗೆ 95 ರಷ್ಟು ಮೈಗ್ರೇನ್ ರೋಗಿಗಳಲ್ಲಿ 35% ಜನರು ನೀರು ಕುಡಿಯದೆ ತೊಂದರೆಗೆ ಸಿಲುಕಿದ್ದಾರೆ.

9. ಹೆಚ್ಚು ಪ್ರಕಾಶಮಾನ ಬೆಳಕನ್ನು ನೋಡಬೇಡಿ:

ಸೂರ್ಯನ ಬೆಳಕು ಅಥವಾ ಯಾವುದೇ ಲೈಟ್ ಬೆಳಕನ್ನು ನೇರವಾಗಿ ನೋಡುವುದರಿಂದ ಕಣ್ಣಿನ ನರಗಳು ನೇರವಾಗಿ ತಲೆಯ ಭಾಗಕ್ಕೆ ಸಂಬಂಧ ಹೊಂದಿರುವುದರಿಂದ ಅಧಿಕವಾದ ಬೆಳಕು ನರಗಳಲ್ಲಿ ಒತ್ತಡ ತರುತ್ತೇವೆ. ಬರಿಗಣ್ಣಿನಿಂದ ಕಂಪ್ಯೂಟರ್ ಮತ್ತು ಮೊಬೈಲ್ ಬಳಕೆಯನ್ನು ಹೆಚ್ಚು ಮಾಡಿದರು ಮೈಗ್ರೇನ್ ಕಂಡು ಬರುತ್ತದೆ. ಹೆಚ್ಚು ಪ್ರಕಾಶಮಾನವುಳ್ಳ ಯಾವುದೇ ಬೆಳಕನ್ನು ನೇರವಾಗಿ ವಿಕ್ಷಿದರೆ ಮೈಗ್ರೇನ್ ಕಂಡು ಬರುತ್ತದೆ.

10. ಆಲ್ಕೊಹಾಲ್ ತಪ್ಪಿಸಿ:

ಮದ್ಯಪಾನದಿಂದ ವೇಗವಾಗಿ ಮೈಗ್ರೇನ್ ನೋವು ಕಂಡು ಬರುತ್ತೆ. ಅದರಲ್ಲಿ ರೆಡ್ ವೈನ್ ತ್ವರಿತವಾಗಿ ಹ್ಯಾಂಗೊವರ್ ಮಾಡುತ್ತೆ, ಆದಕಾರಣ ಮದ್ಯಪಾನ ಮಾಡುವುದು
ಮಿತಗೊಳಿಸಿ. ಎಂದು ಸಂಶೋಧನೆ ತಿಳಿಸಿದೆ.

11. ಹೈಡ್ರೋಥೆರಪಿ

ಹೈಡ್ರೋಥೆರಪಿ, ಸಾಕಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಿ ದೇಹದಲ್ಲಿ ರಕ್ತದ ಹರಿವನ್ನು ನಿಯಂತ್ರಿಸಬಲ್ಲದು. ಇದರಿಂದ ಮೈಗ್ರೇನ್ ನೀವು ಶಮನಗೊಳಿಸಲು ಸಾಧ್ಯ. ನೀವು ತಣ್ಣನೆಯ ನೀರಿನಲ್ಲಿ ನಿಮ್ಮ ಪಾದವನ್ನು ಇಳಿಬಿಟ್ಟು ಮತ್ತು ಬಿಸಿ ನೀರಿನ ಬಾಟಲಿಯನ್ನು ತಲೆಯ ಹಿಂದೆ ಇಟ್ಟುಕೊಂಡರೆ ತಲೆನೀವು ಹೇಳಹೆಸರಿಲ್ಲದಂತೆ ಕಡಿಮೆಯಾಗುತ್ತದೆ!

12. ಬಾಡಿ ಮಸಾಜ್

ಅನೇಕ ಬಾರಿ ಅಲ್ಲದಿದ್ದರೂ, ಅಪರೂಪಕ್ಕೊಮ್ಮೆಯಾದರೂ ನಿಮ್ಮ ಕುತ್ತಿಗೆ ಮತ್ತು ಭುಜದ ಭಾಗಗಳ ಸ್ನಾಯುಗಳ ಮಸಾಜ್ ಮಾಡಿಸಿಕೊಳ್ಳುವುದು ಮೈಗ್ರೇನ್ ದಾಳಿಯನ್ನು ಕಡಿಮೆಮಾಡಬಲ್ಲದು. ಇದು ದೇಹಕ್ಕೆ ಆರಾಮದಾಯಕವಾಗುವುದರಿಂದ ಮೈಗ್ರೇನ್ ನೋವು ಕಡಿಮೆಯಾಗುತ್ತದೆ.

Also read: ತಲೆ ನೋವಿಗೆ ಪದೇ ಪದೇ ಮಾತ್ರೆ ತೊಗೊಳ್ಳೋ ಬದಲು ನಾವು ಹೇಳಿರುವಂತೆ ಈ ಜಾಗಗಳಲ್ಲಿ ಒತ್ತಿಕೊಳ್ಳಿ, ತಲೆ ನೋವು ಮಾಯವಾಗುತ್ತೆ..