ಹಿಂದೂ ಮಂತ್ರಗಳ ಅರ್ಥ ಮತ್ತು ಅದರಿಂದಾಗುವ ಲಾಭಗಳನ್ನು ತಿಳಿದುಕೊಂಡರೆ, ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯಾಗುತ್ತೆ…

0
5572

ಮಂತ್ರವೆಂದರೆ ಕೆಲವರಿಂದ ಮನೋವೈಜ್ಞಾನಿಕ ಹಾಗು ಆಧ್ಯಾತ್ಮಿಕ ಶಕ್ತಿ ಹೊಂದಿರುವುದೆಂದು ನಂಬಲಾದ ಒಂದು ಪವಿತ್ರ ಹೇಳಿಕೆ. ಅತ್ಯಂತ ಮುಂಚಿನ ಮಂತ್ರಗಳನ್ನು ಭಾರತದಲ್ಲಿನ ಹಿಂದೂಗಳಿಂದ ವೈದಿಕ ಕಾಲದಲ್ಲಿ ರಚಿಸಲಾಯಿತು, ಮತ್ತು ಅವು ಕನಿಷ್ಠ ೩೦೦೦ ವರ್ಷಗಳಷ್ಟು ಹಳೆಯದ್ದಾಗಿವೆ. ಅತ್ಯಂತ ಕಷ್ಟ ಕಾಲದಲ್ಲಿ ಮನಸ್ಸಿನ ಸಮತೋಲನ ಮತ್ತು ವಿಶ್ವಾಸವನ್ನು ಮರಳಿ ತರಲು ಪ್ರಬಲ ಮಂತ್ರಗಳು ಸಹಾಯ ಮಾಡುತ್ತವೆ. ಇದರಿಂದಾಗಿ ಸಮಸ್ಯೆಯನ್ನು ಎದುರಿಸುವ ಧೈರ್ಯ ನಿಮ್ಮಲ್ಲಿ ಮೂಡುತ್ತದೆ

ಇಂದಿನ ಲೇಖನದಲ್ಲಿ ಕಷ್ಟದ ಸಮಯದಲ್ಲಿ ಯಾವಯಾವ ದೇವರನ್ನು ಸ್ತುತಿಸುವ ಮಂತ್ರವನ್ನು ಪಠಿಸುವುದರ ಮೂಲಕ ನಿಮಗೆ ಖಿನ್ನತೆಯಿಂದ ಹೊರಬರಬಹುದಾಗಿದೆ. ಆ ಮಂತ್ರಗಳು ಹೀಗಿವೆ…

 

ಸಂಕಟ ನಾಶಂ ಗಣೇಶ ಮಂತ್ರ:

ವಿಘ್ನಗಳನ್ನು ನಿವಾರಿಸುವವರು ಏಕದಂತ ಗಣೇಶ ಎಂದೆನಿಸಿದ್ದಾರೆ. ಭಕ್ತರಿಗೆ ಉತ್ತಮ ಆರೋಗ್ಯ ಮತ್ತು ಅದೃಷ್ಟವನ್ನು ದಯಪಾಲಿಸುವ ಮೂಲಕ ಗಣೇಶನನ್ನು ‘ಸಂಕಟ ನಾಶಕ’ ಅಥವಾ ‘ಸಂಕಟ ಮೋಚಕ’ ಎಂದಾಗಿ ಕರೆಯುತ್ತಾರೆ. ಇದರಿಂದಾಗಿ ಮನಸ್ಸಿನ ಸಮತೋಲನ ಸ್ಥಿತಿಯನ್ನು ಕಾಯ್ದು ಕೊಳ್ಳಬಹುದು, ಈ ಮಂತ್ರ ಸುಲಭವಾಗಿ ನೋವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

|| ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||

source: teluguone.com

ಸರಸ್ವತೀ ಮಂತ್ರ :

ತಾಯಿ ಸರಸ್ವತಿ ವಿದ್ಯೆ ಮತ್ತು ಬುದ್ಧಿವಂತಿಕೆಯ ದೇವತೆ. ಸರಸ್ವತಿ ದೇವೀ ಸರ್ವರಕ್ಷಕಳು, ಸಾಮರ್ಥ್ಯಸಂಪನ್ನೆಯೂ ಆಗಿರುವಳು ಮತ್ತು ಲೋಕಕ್ಕೆ ಅನ್ನ ನೀರು ಪೂರೈಸುವವಳು. ದಾನ ಮಾಡುವವರಿಗೆ ಉತ್ತಮವಾಗಿ ವರದಾನ ಮಾಡುವವಳು.
ಕಷ್ಟ ಕಾಲದಲ್ಲಿ ಸರಸ್ವತಿ ಮಂತ್ರ ಪಠಣ ಮಾಡಿದರೆ ನಮಗೆ ಚಿಂತನೆಯ ಸ್ಪಷ್ಟತೆ ಮತ್ತು ಸರಿಯಾದ ನಿರ್ಧಾರ ತೆಗೆದುಕೊಂಡು ಸುಲಭವಾಗಿ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿಯನ್ನು ನೀಡುತ್ತದೆ.

ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ
ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||
ಯಾ ಕುಂದೇಂದು ತುಷಾರಹಾರ ಧವಲಾ ಯಾ ಶುಭ್ರ ವಸ್ತ್ರಾವೃತಾ |
ಯಾ ವೀಣಾವರದಂಡಮಂಡಿತಕರಾ ಯಾ ಶ್ವೇತಪದ್ಮಾಸನಾ ||
ಯಾ ಬ್ರಹ್ಮಾಚ್ಯುತಶಂಕರಪ್ರಭ್ರೃತಿಭಿಃ ದೇವೈ: ಸದಾ ಪೂಜಿತಾ |
ಸಾ ಮಾಂ ಪಾತು ಸರಸ್ವತೀ ಭಗವತೀ ನಿಃಶೇಷ ಜಾಡ್ಯಾಪಹಾ ||

source: 68.media.tumblr.com

 

ಶಿವನ ಮಂತ್ರ :

ಕಾಶಕಾಲದಲ್ಲಿ ಶಿವನನ್ನು ಕಾಲದಲ್ಲಿ ನೆನೆದರೆ ಕಷ್ಟಗಳು ದೂರವಾಗುತ್ತವೆ, ಸ್ಪಷ್ಟ ಗ್ರಹಿಕೆ ಮತ್ತು ಎಲ್ಲಾ ತೊಂದರೆಗಳನ್ನು ಮುಕ್ತಗೊಳಿಸಲು ಜೀವನದ ತೊಂದರೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ಶಿವ ಪೂಜೆ ಮಾಡುವಾಗ ಪಂಚಾಕ್ಷರಿ ಮಂತ್ರ ಪಠಿಸಬೇಕು. ಓಂ ನಮಃ ಶಿವಾಯ ಎಂದು ಶಿವನನ್ನು ಪ್ರಾರ್ಥಿಸಬೇಕು. ಇದರಿಂದ ಶಿವನ ಕೃಪೆಗೆ ಪಾತ್ರರಾಗಿ ಜೇವನದಲ್ಲಿ ಬರುವ ಕಷ್ಟಗಳು ದೂರವಾಗುತ್ತವೆ.

ಪಂಚಾಕ್ಷರಿ ಮಂತ್ರ : ಓಂ ನಮಶಿವಾಯ —- ರುದ್ರ ಮಂತ್ರ : ಓಂ ನಮೋ ಭಗವತೇ ರುದ್ರಾಯ — ಶಿವ ಗಾಯತ್ರಿ : ಓಂ ತತ್ಪುರುಷಾಯ ವಿದ್ಮಹೇ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಹ್ ಪ್ರಚೋದಯಾತ್ ||

ಮಹಾಮೃತ್ಯುಂಜಯ ಮಂತ್ರ: ಓಂ ತ್ರ್ಯಂಬಕಂ ಯಜಾಮಹೆ ಸುಗಂಧಿ ಪುಷ್ಟಿ ವರ್ಧನಂ ಊರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷಿಯ ಮಾಮೃತಾತ್ ||

source: pinterest.com

ಗಾಯತ್ರಿ ಮಂತ್ರ:

ಬ್ರಹ್ಮ ಪವಿತ್ರವಾದ ಸೂರ್ಯ ನಾರಾಯಣನಿಂದ ಉದ್ಭವಿಸಲ್ಪಟ್ಟ ಗಾಯತ್ರಿ ಮಂತ್ರ ಅತ್ಯಂತ ಪ್ರಭಾವಶಾಲಿಯಾದುದು. ಈ ಮಂತ್ರವು “ನನಗೆ ತೇಜಸ್ಸನ್ನು ಕೊಡು, ನನ್ನ ಬುದ್ಧಿಶಕ್ತಿಯನ್ನು ಅರಳಿಸು ಮತ್ತು ಚಿತ್ತವೃತ್ತಿ ಯನ್ನು ಪಾವನಗೊಳಿಸುವಲ್ಲಿ ಸಹಾಯಮಾಡುತ್ತದೆ. ಗಾಯತ್ರಿ ಕಾಮಧೇನು ಅಥರ್ವವೇದದಲ್ಲಿ ಗಾಯತ್ರಿ ಮಂತ್ರ-ಶಕ್ತಿ, ಧನ ಸಂಪತ್ತು ಮತ್ತು ಬ್ರಹ್ಮತೇಜಸ್ಸನ್ನು ನೀಡುವ ಮಹಾಮಾತೆ ಎಂದಿದ್ದಾರೆ.

ಓಂ ಭೂರ್ಭುವಃ ಸ್ವಃ ತತ್ಸವಿತುರ್ ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ, ಧಿಯೋ ಯೋ ನ ಪ್ರಚೋದಯಾತ್ ||

source: soundcloud.com