ಶಿವ ಎಂದರೆ ಸಾಕು ಭಕ್ತರಿಗೆ ವರ ನೀಡುವ ನಮ್ಮ ನಾಡಿನ ಪ್ರಸಿದ್ಧ 5 ಶಿವ ದೇವಾಲಯಗಳು ಇಲ್ಲಿವೆ ನೋಡಿ

0
1765

Kannada News | Karnataka Temple History

ಶಿವ ಎಂದರೆ ಸಕಲ ಕಷ್ಟಗಳು ದೂರ ಎನ್ನುತ್ತದೆ ಪುರಾಣ.. ನಮ್ಮ ನಾಡಿನಲ್ಲಿಯೇ ಇರುವ ಪ್ರಸಿದ್ಧ 5 ಶಿವನ ಕ್ಷೇತ್ರಗಳು ಇಲ್ಲಿವೆ ನೋಡಿ.. ಸಾಧ್ಯವಾದರೆ ಜೀವನದಲ್ಲೊಮ್ಮೆ ಈ ಕ್ಷೇತ್ರಗಳ ದರ್ಶನ ಮಾಡಿ..

ಧರ್ಮಸ್ಥಳ ಮಂಜುನಾಥ

 

ಧರ್ಮಸ್ಥಳದ ಮಂಜುನಾಥ ಎಂದರೆ ಒಂದು ಕ್ಷಣ ಎಲ್ಲರಿಗೂ ಮೈ ರೋಮಾಂಚನವಾಗುವುದು ಸಹಜ.. ಏಕೆಂದರೆ ಆ ತಂದೆಯ ಲೀಲೆಯೇ ಅಂತಹುದು.. ಬೇಡಿ ಬಂದ ಭಕ್ತರಿಗೆ ಅಭಯವಾಗಿ ನಿಲ್ಲುವ ಮಂಜುನಾಥನ ಮಹಿಮೆ ತಿಳಿದವರೇ ಬಲ್ಲರು.

ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ. ಸುಮಾರು ಏಳು ನೂರು ವರ್ಷಗಳ ಇತಿಹಾಸ ಇರುವ ಇದು ನೇತ್ರಾವತಿ ನದಿಯ ದಡದಲ್ಲಿದೆ. ಈ ದೇವಾಲಯವು ದಾನ ಧರ್ಮಕ್ಕೆ ಪ್ರಸಿದ್ಧವಾಗಿ ಮತ್ತು ಭಕ್ತರಿಗೆ ನೈತಿಕ ಸಾಂಸ್ಕೃತಿಕ ಕೇಂದ್ರವಾಗಿದೆ..

ನಂಜನಗೂಡಿನ ನಂಜುಂಡೇಶ್ವರ

ನಂಜನಗೂಡಿನ ನಂಜುಂಡೇಶ್ವರನನ್ನು ಶ್ರೀಕಂಠೇಶ್ವರ ಎಂದೂ ಕರೆಯುವುದು ಉಂಟು.. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಶ್ರೀಮಂತ ದೇವಸ್ಥಾನವಿದು.. ನಂಜನಗೂಡಿನ ನೀರು ಮಣ್ಣು ಪ್ರತಿಯೊಂದರಲ್ಲಿಯೂ ಔಷಧೀಯ ಗುಣವಿದೆ ಎನ್ನುವುದು ನಂಬಿಕೆ.. ಇಲ್ಲಿ ಹರಿಯುವ ಕಪಿಲಾ ನದಿಯಲ್ಲಿ ಸ್ನಾನ ಮಾಡಿ ನಂಜುಂಡೇಶ್ವರನಲ್ಲಿ ಭಕ್ತಿ ಇಂದ ಬೇಡಿಕೊಂಡರೆ ಸಕಲ ರೋಗಗಳು ದೂರವಾಗುತ್ತವೆ..

ಮಲೆ ಮಹದೇಶ್ವರ..

ಮಹದೇಶ್ವರ ಬೆಟ್ಟ ಕರ್ನಾಟಕದ ದಕ್ಷಿಣ ತುದಿಯ ಗಡಿಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಬಹು ಮುಖ್ಯ ಶ್ರದ್ಧಾಭಕ್ತಿ ಕೇಂದ್ರ. ದೇವಸ್ಥಾನವು ಬೆಟ್ಟಗಳಿಂದ ಸುತ್ತುವರಿದಿರುವ ಕಾರಣ ಮಹದೇಶ್ವರ ಬೆಟ್ಟವೆಂದು ಕರೆಯಲಾಗುತ್ತದೆ.

ಏಳು ಮಲೆ ಒಡೆಯನನ್ನು ಪ್ರತಿ ದಿನ ಸಾವಿರಾರು ಭಕ್ತರು ಹೋಗಿ ದರ್ಶನ ಮಾಡುತ್ತಾರೆ… ಜೊತೆಗೆ ಜಾತ್ರೆಗಳು ನಡೆಯುವ ಸಂಧರ್ಭದಲ್ಲಿ ಲಕ್ಷಾಂತರ ಜನ ಸೇರುವುದು ಸ್ವಾಮಿಯ ಶಕ್ತಿಯ ಮಹಿಮೆಯಾಗಿದೆ..

ಮುರುಡೇಶ್ವರ

 

ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ. ಇಲ್ಲಿರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಪುಣ್ಯ ಸ್ಠಳವಾಗಿದ್ದು, ಐತಿಹಾಸಿಕವಾಗಿ ಪ್ರಖ್ಯಾತಿಯನ್ನು ಹೊಂದಿದೆ. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ಊರು, ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರುವಾಸಿ ಯಾಗಿದೆ. ಮುರುಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ, ಪ್ರವಾಸಿ ತಾಣವೂ ಆಗಿದೆ.

ತಲಕಾಡಿನ ಪಂಚಲಿಂಗೇಶ್ವರ

ತಲಕಾಡು,ಮೈಸೂರು ಜಿಲ್ಲೆಯಲ್ಲಿನ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿದೆ. ಇದು ಮೈಸೂರಿನಿಂದ ಸುಮಾರು ೪೫ ಕಿ.ಮೀ ದೂರದಲ್ಲಿದೆ. ಇಲ್ಲಿನ ಅತಿ ಸುಂದರವಾದ ಕಾವೇರಿ ನದಿ, ಮರಳು ಮತ್ತು ಇಲ್ಲಿನ ಪುರಾತನ ದೇವಸ್ಥಾನಗಳು ಜನರನ್ನು ಆಕರ್ಷಿಸುವಲ್ಲಿ ಯಶಸ್ವೀಯಾಗಿವೆ. ಇಲ್ಲಿರುವ ದೇವಾಲಯಗಳು ಗಂಗರ ಕಾಲದ ದೇವಾಲಯಗಳು..
ಇಲ್ಲಿ ನಡೆಯುವ ಪಂಚಲಿಂಗ ದರ್ಶನ ವಿಶೇಷವಾದದ್ದು. ಪಂಚಲಿಂಗ ದರ್ಶನವು 12 ಅಥವಾ 13 ವರ್ಷಗಳಿಗೊಮ್ಮೆ ನಡೆಯುತ್ತದೆ. ಇದು ಐತಿಹಾಸಿಕವಾಗಿ ಹಾಗೂ ಧಾರ್ಮಿಕವಾಗಿ ಪ್ರಸಿದ್ದ ಸ್ಥಳವಾಗಿದೆ. ತಲಕಾಡು ಒಂದು ಕಾಲದಲ್ಲಿ 30 ದೇವಾಲಯಗಳಿಂದ ಕೂಡಿದ ಭವ್ಯ ನಗರವಾಗಿತ್ತು.

ಆದರೆ 16ನೇ ಶತಮಾನದಲ್ಲಿ ಇವುಗಳೆಲ್ಲವು ಮರಳಿನಲ್ಲಿ ಮುಚ್ಚಿ ಹೋದವು. ಪವಿತ್ರವಾದ ತಲಕಾಡು ಕ್ಷೇತ್ರದಲ್ಲಿ ಪಂಚಲಿಂಗ ಸ್ವರೂಪಿಯಾಗಿ ಈಶ್ವರನು ನೆಲಸಿದ್ದಾನೆ. ನಂಜನಗೂಡಿನಂತೆಯೇ ತಲಕಾಡು ಕೂಡ ದಕ್ಷಿಣಕಾಶಿ ಎಂದು ಹೆಸರುವಾಸಿಯಾಗಿದೆ.

ನಮ್ಮ ನಾಡಿನಲ್ಲಿಯೇ ಇರುವ ಶಿವನ ಪುಣ್ಯ ಕ್ಷೇತ್ರಗಳಿವು ಕುಟುಂಬ ಸಮೇತ ಒಮ್ಮೆ ದರ್ಶನ ಮಾಡಿ ಬನ್ನಿ..

Also Read: ಮನೆಯ ಮುಂದೆ ತುಳಸಿ ಕಟ್ಟೆ ಕಟ್ಟುವ ಹಿಂದಿನ ವೈಜ್ಞಾನಿಕ ಸತ್ಯ!!!