ಸಾಮಾನ್ಯವಾಗಿ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಪ್ರಯಾಣ ಬೆಳೆಸುವುದು ಸಹಜ.. ನಮ್ಮ ರಾಜ್ಯದವರಷ್ಟೇ ಅಲ್ಲ ಬೇರೆ ರಾಜ್ಯದ ಯುವಕ ಯುವತಿಯರು ಕೂಡ ನಮ್ಮ ರಾಜಧಾನಿ ಬೆಂಗಳೂರಿಗೆ ಕೆಲಸಕ್ಕಾಗಿ ಬರುತ್ತಾರೆ.. ಹಾಗಾದರೆ ಯಾವ ಯಾವ ಕಂಪನಿಯಲ್ಲಿ ಎಷ್ಟು ಸಂಬಳ ಇದೆ ಎಂದು ನೋಡೋಣ ಬನ್ನಿ..
ಮೈಕ್ರೋಸಾಫ್ಟ್
ಅತಿ ಹೆಚ್ಚು ಸಂಬಳ ಕೊಡುವ ಕಂಪನಿಗಳಲ್ಲಿ ಟಾಪ್ ನಲ್ಲಿ ಬರುವುದು ಮೈಕ್ರೋಸಾಫ್ಟ್.. ಸಾಫ್ಟ್ ವೇರ್ ಡೆವಲಪ್ಮೆಂಟ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರುವ ಫ್ರೆಶರ್ ಗೆ ಈ ಕಂಪನಿಯಲ್ಲಿ ವಾರ್ಷಿಕ 11 ರಿಂದ 21 ಲಕ್ಷ ಸಂಬಳವನ್ನು ನೀಡುತ್ತಿದೆ..ನೀವೂ ಟ್ರೈ ಮಾಡುವುದಿದ್ದರೆ ಮಾಡಿ..
ಅಮೆಜಾನ್
ಮೈಕ್ರೋಸಾಫ್ಟ್ ನ ನಂತರದ ಸ್ಥಾನದಲ್ಲಿ ಬರುವುದು ಅದು ಅಮೆಜಾನ್ ಕಂಪನಿ.. ಅಮೆಜಾನ್ ಕಂಪನಿಯಲ್ಲಿ ಸಾಫ್ಟ್ವೇರ್ ಡೆವಲಪ್ಮೆಂಟ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರುವ ಫ್ರೆಶರ್ ಗಳಿಗೆ ವಾರ್ಷಿಕವಾಗಿ 7 ರಿಂದ 18 ಲಕ್ಷ ಸಂಬಳ ಸಿಗುತ್ತದೆ.
ಫ್ಲಿಪ್ ಕಾರ್ಟ್
ಮೂರನೆಯ ಸ್ಥಾನ ಫ್ಲಿಪ್ ಕಾರ್ಟ್ ನದ್ದು.. ಈ ಕಂಪನಿ ಹೊಸದಾಗಿ ಸೇರುವ ಸಾಫ್ಟ್ವೇರ್ ಡೆವಲಪ್ಮೆಂಟ್ ಇಂಜಿನಿಯರ್ ಗಳಿಗೆ ವಾರ್ಷಿಕವಾಗಿ 12 ಲಕ್ಷ ಸಂಬಳವನ್ನು ನೀಡುತ್ತಿದೆ..
ಇಂಟ್ಯೂಟ್.
ಹೆಚ್ಚು ಸಂಬಳ ಕೊಡುವ ಕಂಪನಿಗಳ ಪೈಕಿ ಇಂಟ್ಯೂಟ್ ನ ಸ್ಥಾನ 4ನೇಯದ್ದು.. ಇಲ್ಲಿನ ಸಾಫ್ಟ್ವೇರ್ ಇಂಜಿನಿಯರ್ ಗಳಿಗೆ ವಾರ್ಷಿಕವಾಗಿ ಸಿಗುತ್ತಿರುವ ಸಂಬಳ 8 ರಿಂದ 20 ಲಕ್ಷ ರೂಪಾಯಿಗಳು..
ಸ್ನ್ಯಾಪ್ ಡೀಲ್
ಸ್ನ್ಯಾಪ್ ಡೀಲ್ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಗಳಿಗೆ ವಾರ್ಷಿಕವಾಗಿ 7 ರಿಂದ 16 ಲಕ್ಷ ರೂಪಾಯಿಗಳ ಸಂಬಳ ನೀಡುತ್ತಿದೆ..
ಲಿಂಕೆಡಿನ್
ಇನ್ನು ಲಿಂಕೆಡಿನ್ ವಿಷಯಕ್ಕೆ ಬಂದರೆ ಈ ಕಂಪನಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇರುವ ಫ್ರೆಶರ್ ಗಳಿಗೆ ವಾರ್ಷಿಕವಾಗಿ 12.5 ರಿಂದ 15 ಲಕ್ಷ ಸಂಬಳ ನೀಡುತ್ತದೆ..
ಗೂಗಲ್
ಗೂಗಲ್ ಕಂಪನಿಯಲ್ಲೂ ಕೂಡ ಒಳ್ಳೆಯ ಸಂಬಳ ಸಿಗುತ್ತಿದೆ.. ಇಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರುವ ಫ್ರೆಶರ್ ಗಳಿಗೆ ವಾರ್ಷಿಕವಾಗಿ 6 ರಿಂದ 10 ಲಕ್ಷ ರೂಪಾಯಿಗಳನ್ನು ನೀಡುತ್ತಿದೆ..
ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ.. ಇತರರಿಗೂ ಉಪಯೋಗವಾದರೂ ಆದೀತು..