ಕರ್ನಾಟಕದ ಈ ಒಂಬತ್ತು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದರೆ, ನಿಮ್ಮೆಲ್ಲಾ ಕಷ್ಟಗಳು ಶೀಘ್ರವೇ ಪರಿಹಾರವಾಗುತ್ತೆ, ನೀವು ಎಷ್ಟಕ್ಕೆ ಭೇಟಿ ಕೊಟ್ಟಿದ್ದೀರ?

0
3058

Kannada News | Karnataka Temple History

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ, ಒಂದಿಲ್ಲಾ ಒಂದು ಸಮಸ್ಯೆಗೆ ಸಿಲುಕಿರುತ್ತಾನೆ. ಸತಿಪತಿ ಕಲಹ ಸಾಲಣಣಣದ ಬಾದೆ. ಪ್ರೀತಿಯಲ್ಲಿ ಮೋಸ ಹೋಗಿದ್ದರೆ, ಇಷ್ಟಪಟ್ಟವರು ದೂರವಾಗಿದ್ದರೆ ಸಾಲದ ಬಾಧೆ, ಬಿಸಿನೆಸ್-ನಲ್ಲಿ ನಷ್ಟ ಇನ್ನು ಯಾವುದೇ ತರಹದ ಸಮಸ್ಯೆಗಳಿದ್ದರೆ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ನೀಡಿ ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳನ್ನು ಕೇವಲ ಐದೇ ದಿನದಲ್ಲಿಯೇ ನೆರವೇರಿಸಿ ಕೊಡುತ್ತಾರೆ ಇವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರುಇಂದಿಗೂ ಸಹ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಗೂರೂಜಿಯವರನ್ನು

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಕರ್ನಾಟಕದಲ್ಲಿ ನೆಲೆನಿಂತಿರುವ ಧರ್ಮಸ್ಥಳ, ಪಟ್ಟದಕಲ್ಲು, ಗೋಕರ್ಣ, ಉಡುಪಿ, ಶ್ರಾವಣಬೆಳಗೊಳ, ಶೃಂಗೇರಿ, ಮುರುಡೇಶ್ವರನಂತಹ ಅಸಂಖ್ಯಾತ ಪವಿತ್ರ ಯಾತ್ರ ಸ್ಥಳಗಳು ನಾವು ನೋಡಬಹುದು. ಕರ್ನಾಟಕದ ಮಡಿಲಲ್ಲಿ ಸಾಮ್ರಾಜ್ಯ ಕಟ್ಟಿ ಮೆರೆದ ಮೌರ್ಯರು, ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ ಇತ್ಯಾದಿ ಆಡಳಿತಗಾರರು ತಮ್ಮ ಹಿಂದೆ ತಾವು ಕಟ್ಟಿಸಿದ ಕೆಲವು ಸುಂದರವಾದ ವಾಸ್ತಿಶಿಲ್ಪಗಳನ್ನು ನಮ್ಮ ಹಿಂದೆ ಬಿಟ್ಟು ಹೋಗಿದ್ದಾರೆ. ಅವುಗಳು ಇಂದು ಪ್ರಸಿದ್ದ ಯಾತ್ರಾ ಸ್ಥಳಗಳಾಗಿ ಗುರುತಿಸಲ್ಪಡುತ್ತಿವೆ. ಆ ಸ್ಥಳಗಳಿಗೆ ತಮ್ಮದೇ ಆದ ಮಹತ್ವ ವಿರುವುದರಿಂದ ಅಲ್ಲಿ ಭೇಟಿ ಕೊಟ್ಟಾಗಲೆಲ್ಲಾ ಅಲ್ಲಿಯ ಮಹಾತ್ಮೆ ವೈಭವ ನೋಡಿದಾಗ ತನುಮನದ ಕಣಕಣದಲ್ಲೂ ತಾನಾಗಿಯೇ ತುಂಬಿಕೊಳ್ಳುತ್ತದೆ ಭಕ್ತಿಭಾವ. ಈ ತೀರ್ಥಕ್ಷೇತ್ರಗಳು ನಮ್ಮ ನಾಡಿಗೆ ಕಳಶವಿಟ್ಟಂತೆ. ಅಂತಹ ಕ್ಷೇತ್ರ ದರ್ಶನಮಾಡದವನ ಜನ್ಮವೇ ವ್ಯರ್ಥ, ಅಪೂರ್ಣ ಎಂದರೆ ತಪ್ಪಾಗಲಾರದು.

ನಮ್ಮ ಕರ್ನಾಟಕದ ಪುಣ್ಯಕ್ಷೇತ್ರಗಳೇ ಹಾಗೆ. ಸುಂದರ ಪ್ರಕೃತಿ ಇರುವಲ್ಲೇ ತೀರ್ಥಕ್ಷೇತ್ರಗಳು. ತೀರ್ಥಕ್ಷೇತ್ರಗಳು ಇರುವಲ್ಲೇ ಸುಂದರ ಪ್ರಕೃತಿ. ಅಂತ ಸ್ಥಳಗಳು ಇಂದು ಪ್ರಸಿದ್ದ ಯಾತ್ರಾ ಸ್ಥಳಗಳಾಗಿ ಗುರುತಿಸಲ್ಪಡುತ್ತಿವೆ. ಪ್ರತೀ ವರ್ಷ ಸಾವಿರಾರು ಯಾತ್ರಿಗಳು ಇಂತಹ ಸ್ಥಳಗಳಿಗೆ ಭೇಟಿಕೊಡಲು ಯೋಜಿಸುತ್ತಾರೆ. ಇಂತಹ ತೀರ್ಥಕ್ಷೇತ್ರಗಳು ಅಲ್ಲಿರುವ ಭಕ್ತರು ಮತ್ತು ಸಾಧುಸಂತರ ಅನುಗ್ರಹದಿಂದ ಪವಿತ್ರವಾಗಿಯೇ ಉಳಿಯುತ್ತವೆ. ಮನುಷ್ಯನ ಧಾರ್ಮಿಕ ಹಸಿವಿನ ಜೊತೆ ಜೊತೆಗೆ ಅವನ ಸೌಂದರ್ಯಾರಾಧನೆಗೂ ಅವಕಾಶವೀಯುತ್ತವೆ ಈ ಸ್ಥಳಗಳು. ಈ ಸ್ಥಳಗಳಿಗೆ ಬೇರೆ ಬೇರೆ ಕಡೆಗಳಿಂದ ಬರುವ ಜನರಿಗೆ ಸ್ಥಳೀಯ ನಿವಾಸಿಗಳ ಪರಿಚಯ ಮಾಡಿಕೊಟ್ಟು ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಸಹಬಾಳ್ವೆಯ ಪಾಠವನ್ನೂ ಪರೋಕ್ಷವಾಗಿಯೇ ನೀಡುತ್ತವೆ.

೧. ಧರ್ಮಸ್ಥಳ

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ. ಮಂಜುನಾಥಸ್ವಾಮಿ ದೇವಾಲಯವಿರುವ ಈ ಊರು ಬಹಳ ಪ್ರಸಿದ್ಧ. ಶ್ರವಣ ಬೆಳಗೊಳದಂತೆ ಬಾಹುಬಲಿಯ ಪ್ರತಿಮೆ ಕೂಡ ಇರುವುದು. ಸುಮಾರು ಏಳು ನೂರು ವರುಷಗಳ ಇತಿಹಾಸ ಇರುವ ಇದು ನೇತ್ರಾವತಿ ನದಿಯ ದಡದಲ್ಲಿದೆ. ಧರ್ಮಸ್ಥಳದಲ್ಲಿ ಪ್ರತಿವರ್ಷ ನಡೆಯುವ ಲಕ್ಷದೀಪೋತ್ಸವ ತುಂಬಾ ಅದ್ದೂರಿಯಾಗಿ ನಡೆಯುತ್ತದೆ. ಆಗ ದೇಶ ವಿದೇಶಗಳಿಂದ ಆಗಮಿಸಲಿರುವ ಲಕ್ಷಾಂತರ ಮಂದಿ ಬಂದು ಇಲ್ಲಿ ಸೇರುತ್ತಾರೆ. ಇಲ್ಲಿನ ಇನ್ನೊಂದು ವಿಶೇಷವೇನೆಂದರೆ ಈ ದೇವಸ್ಥಾನದಲ್ಲಿ ಸಮಾಜ ಸೇವೆಯ ಭಾಗವಾಗಿ ನಾಲ್ಕು ಧಾನಗಳನ್ನು ಅನಾದಿ ಕಾಲದಿಂದಲೂ ತಪ್ಪದೇ ನಡೆಸಿಕೊಂಡು ಬರುತಿದ್ದಾರೆ. ಆ ನಾಲ್ಕು ಧಾನಗಳು ಅನ್ನ ಧಾನ, ಔಷಧ ಧಾನ, ವಿದ್ಯಾ ಧಾನ, ಅಭಯ ಧಾನ.

೨. ಗೋಕರ್ಣ

ಗೋಕರ್ಣ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದ ಒಂದು ಊರು. ಭೂಕೈಲಾಸ ಎಂದೇ ಪ್ರಸಿದ್ಧಿಹೊಂದಿರುವ ಈ ಊರು ಕಾರವಾರದಿಂದ ಸುಮಾರು ೬೫ ಕಿ.ಮಿ. ದೂರದಲ್ಲಿದೆ. ಗೋಕರ್ಣ ಕ್ಷೇತ್ರ ಶಿವನ ಪಂಚ ಕ್ಷೇತ್ರಗಳಲ್ಲಿ ಒಂದು. ಇಲ್ಲಿ ಮಹಾಗಣಪತಿ ದೇವಾಲಯ, ಶಿವ (ಮಹಾಬಲೇಶ್ವರ) ದೇವಾಲಯಗಳು ಇದ್ದು. ದೇವಾಲಯಗಳ ಸಮೀಪದಲ್ಲಿಯೇ ಸುಂದರ ಕಡಲ ತೀರವಿದ್ದು ನೋಡಲು ತುಂಬಾ ಆಕಷ೯ಣೀಯವಾಗಿದೆ. ಇದೊಂದು ಪ್ರವಾಸಿಗರ ತಾಣವಾಗಿದ್ದು ದೇಶ-ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಾರೆ. ಗೋಕರ್ಣ ಧಾರ್ಮಿಕ ಕ್ಷೇತ್ರವಷ್ಟೇ ಅಲ್ಲ. ಸಂಸ್ಕೃತ ಅಧ್ಯಯನ ಕೇಂದ್ರವೂ ಹೌದು. ಇಲ್ಲಿಯೂ ಕೂಡ ಧರ್ಮಸ್ಥಳದಂತೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ದೇವಸ್ಥಾನದಲ್ಲಿ ಅನ್ನದಾನ ನಡೆಯುತ್ತದೆ.

೩. ಕುಕ್ಕೆ ಸುಬ್ರಮಣ್ಯ

ಕುಕ್ಕೆ ಸುಬ್ರಹ್ಮಣ್ಯ ನಾಗಗಳ ವಾಸಸ್ಥಾನವಾಗಿದೆ. ಇಲ್ಲಿ ಶ್ರೀ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುವುದು. ಹಾಗಾಗಿ ಈ ಸ್ಥಳವು ಎಲ್ಲಾ ತರಹದ ನಾಗದೋಷಗಳ ಪರಿಹಾರ ಸ್ಥಳವಾಗಿ ನಂಬಲಾಗಿದೆ. ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷಬಲಿ ಹಾಗೂ ಇತರ ಪೂಜಾದಿಗಳನ್ನು ಸಲ್ಲಿಸಲು ಭಕ್ತಾದಿಗಳು ಬರುತ್ತಿರುತ್ತಾರೆ. ಸರ್ಪದೋಷ ಪೀಡಿತರಾಗಿ ಔಷಧಗಳಿಂದ ಶಮನವಾಗದಂತಹ ರೋಗಗಳಿಂದ ನರಳುವವರು ಹಾಗೂ ಸಂತಾನವಿಲ್ಲದೆ ಇರುವವರು ಶ್ರೀ ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಸೇವಾ ಕೈಂಕರ್ಯಗಳನ್ನು ನೆರವೇರಿಸಿ ಸಕಲಾಭೀಷ್ಠ ಸಿದ್ಧಿಯನ್ನು ಹೊಂದುತ್ತಿರುವುದು ಪ್ರಸಿದ್ಧವಾಗಿದೆ. ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವಗಳ ಕಾಲದಲ್ಲಿ ಭಕ್ತಾದಿಗಳು ತಮ್ಮ ಅನೇಕ ದೈಹಿಕ ಹಾಗೂ ಮಾನಸಿಕ ಸಂಕಷ್ಟಗಳ ನಿವಾರಣೆಗಾಗಿ ಹೇಳಿಕೊಂಡಿರುವ ಹರಕೆ “ಬೀದಿ ಮಡೆಸ್ನಾನ” (ಉರುಳು ಸೇವೆ) ಮಾಡುತ್ತಿರುವುದನ್ನು ಕಾಣಬಹುದು.

೪. ಉಡುಪಿ

ಉಡುಪಿಯ ಕೃಷ್ಣ ದೇಗುಲವು ದಕ್ಷಿಣ ಭಾರತದಲ್ಲೇ ತುಂಬಾ ಪವಿತ್ರವಾದ ದೇಗುಲ. ಈ ದೇವಸ್ಥಾನವು ಸುಮಾರು 1,500 ವರ್ಷಗಳ ಇತಿಹಾಸವನ್ನು ಹೊಂದಿದೆ. ಉಡುಪಿಯನ್ನು ಕೃಷ್ಣನ ಅಂತಿಮ ವಿಶ್ರಾಂತಿ ಸ್ಥಳವೆಂದು ಪರಿಗಣಿಸಲಾಗಿದೆ. ಈ ದೇವಸ್ಥಾನದ ಪ್ರಮುಖ ಆಕರ್ಷಣೆಯೆಂದರೆ, ಕನಕನ ಕಿಂಡಿ. ಕಿಂಡಿಯಲ್ಲಿರೊ ಒಂಭತ್ತು ರಂಧ್ರಗಳಿಂದ ಕೃಷ್ಣನ ದರ್ಶನ ಪಡೆಯಬಹುದು. ಕನಕನ ಕಿಂಡಿಯಲ್ಲಿರೊ ನವರಂಧ್ರಗಳಿಂದ ಕೃಷ್ಣನ ದರ್ಶನ ಪಡೆದರೆ ಪುಣ್ಯ ಬರುತ್ತದೆ ಎಂದು ನಂಬಲಾಗಿದೆ. ಶ್ರೀಕೃಷ್ಣ ದೇವಾಲಯದ ಹೊರತಾಗಿ ಉಡುಪಿ-ಚಂದ್ರೇಶ್ವರ ಮತ್ತು ಅನಂತೇಶ್ವರದಲ್ಲಿ ಎರಡು ದೇವಾಲಯಗಳಿವೆ. ಪ್ರತಿ ಎರಡು ವರ್ಷಗಳಲ್ಲಿ, ಉಡುಪಿಯಲ್ಲಿ ‘ಪ್ಯಾರಿಯಯೋತ್ಸವ’ ಎಂಬ ಹೆಸರಿನ ಭವ್ಯವಾದ ಉತ್ಸವ ನಡೆಯುತ್ತದೆ.

೫. ಹೊರನಾಡು

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಪಶ್ಚಿಮ ಘಟ್ಟಗಳ ಮಡಿಲಲ್ಲಿ, ಭದ್ರಾ ನದಿಯ ಹರಿಯುವ ಹೊರನಾಡು ಒಂದುಸುಂದರ ಸ್ಥಳ. ಹೊರನಾಡು ಕ್ಷೇತ್ರ ಅನ್ನದಾನದ ಆತಿಥ್ಯಕ್ಕೆ ಹೆಸರುವಾಸಿ. ಅನ್ನಪೂಣೇಶ್ವರಿ ಕ್ಷೇತ್ರದ ಅಧಿದೇವತೆ. ಅನ್ನದಾನ ಹಾಗೂ ಆತಿಥ್ಯ ಈ ಕ್ಷೇತ್ರದ ವಿಶೇಷ. ಅನ್ನಪೂರ್ಣೇಶ್ವರಿ ಸನ್ನಿಧಿಗೆ ಬರುವ ಪ್ರತಿಯೊಬ್ಬ ಭಕ್ತನೂ ಇಲ್ಲಿ ‘ಪ್ರಸಾದ’ ಸ್ವೀಕರಿಸುವುದು ಈ ಕ್ಷೇತ್ರದ ವಿಶೇಷ.

೬. ಪಟ್ಟದಕಲ್ಲು

ಚಾಲುಕ್ಯರ ಗತಕಾಲದ ವ್ಯೆಭವದ ವಿರೂಪಾಕ್ಷ ದೇವಾಲಯ ಪಟ್ಟದಕಲ್ಲು. ಮಲಪ್ರಭ ನದಿಯ ದಂಡೆಯಲ್ಲಿರುವ ಇಲ್ಲಿನ ದೇವಾಲಯಗಳ ಭಿತ್ತಿಗಳಲ್ಲಿ (ಗೋಡೆ) ಪುರಾಣದ ಕತೆಗಳ ಕೆತ್ತನೆಗಳಿವೆ. ಬಿಜಾಪುರದಿಂದ 134 ಕಿ.ಮೀಟರ್‌ಗಳ ದೂರದಲ್ಲಿದೆ. ಸುಮಾರು 7ನೇ ಹಾಗೂ 8 ನೇ ಶತಮಾನದಲ್ಲಿ ಆಳಿದ ಚಾಲುಕ್ಯ ಸಾಮ್ರಾಜ್ಯರ ಅರಸರುಗಳು ಈ ನಗರದಲ್ಲಿ ಸುಮಾರು ಒಂಬತ್ತು ಹಿಂದೂ ದೇವಾಲಯಗಳು ಹಾಗೂ ಜೈನ ಬಸದಿಗಳನ್ನು ನಿರ್ಮಿಸಿದ್ದಾರೆ. ಈ ದೇವಾಲಯಗಳಲ್ಲಿರುವ ಅತ್ಯಂತ ಸುಂದರವಾದ ವಾಸ್ತುಶಿಲ್ಪ ಹಾಗೂ ಶಿಲ್ಪ ಕಲೆಯು ಬಹಳ ಮಹತ್ವವುಳ್ಳದ್ದಾಗಿದ್ದು ದೇವಾಲಯಗಳಿರುವ ಇಡೀ ಪ್ರದೇಶ ಯುನೆಸ್ಕೋದಿಂದ ವಿಶ್ವ ಪಾರಂಪರಿಕ ಸ್ಥಳ ಎಂಬುದಾಗಿ ಗುರುತಿಸಲ್ಪಟ್ಟಿದೆ.

೭. ಶೃಂಗೇರಿ

ಶೃಂಗೇರಿ ಪ್ರವಾಸಿಗರು ‘ನೋಡಲೇಬೇಕಾದ’ ಸ್ಥಳ ಶಾರದಾಂಬ ದೇವಸ್ಥಾನವೆಂದೇ ಖ್ಯಾತವಾಗಿರುವ ಶಾರದಾ ದೇವಸ್ಥಾನ. ಸಂಸ್ಕೃತಿ ಸಂಸ್ಕಾರಗಳ ನೆಲೆವೀಡು. ಧರ್ಮಮಾತ್ರಮಾರ್ಗವಾಗಿರುವ ಒಂದು ಅದ್ವಿತೀಯ ಸಂಸ್ಥಾನ ನಮ್ಮ ಶೃಂಗೇರಿ ಶಾರದಾಪೀಠ. ಕಲಿಕೆ ಮತ್ತು ಪಾಂಡಿತ್ಯಕ್ಕೆ ಅಧಿದೇವತೆಯಾದ ಶಾರದಾಂಬ ಮಾತೆಗೆ ಅರ್ಪಿತವಾಗಿರುವ ‘ದಕ್ಷಿಣಂನಾಯ ಪೀಠ’ ವನ್ನು ಆಚಾರ್ಯ ಶ್ರೀ ಶಂಕರ ಭಗವತ್ಪಾದರು ಸುಮಾರು ೭ನೇ ಶತಮಾನದಲ್ಲಿ ಪ್ರತಿಷ್ಠಾಪಿಸಿದರು. ಶೃಂಗೇರಿಯ ಅನೇಕ ದೇವಸ್ಥಾನಗಳಲ್ಲಿ ಮುಖ್ಯವಾದದ್ದು ವಿದ್ಯಾಶಂಕರ ದೇವಸ್ಥಾನ ಮತ್ತು ಶಾರದಾಂಬ ದೇವಸ್ಥಾನವನ್ನು ಒಳಗೊಂಡಿದೆ.

೮. ಮುರುಡೇಶ್ವರ

ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನಲ್ಲಿದೆ. ಇಲ್ಲಿರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಪುಣ್ಯ ಸ್ಠಳವಾಗಿದ್ದು, ಐತಿಹಾಸಿಕವಾಗಿ ಪ್ರಖ್ಯಾತಿಯನ್ನು ಹೊಂದಿದೆ. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ಊರು, ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರುವಾಸಿ ಯಾಗಿದೆ. ಮುರುಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ, ಪ್ರವಾಸಿ ತಾಣವೂ ಆಗಿದೆ. ಕಂಡುಕಗಿರಿ ಶಿಖರದಲ್ಲಿ ನೆಲೆಸಿರುವ ಮುರುಡೇಶ್ವರ ದೇವಾಲಯ ಮತ್ತು ರಾಜಗೋಪುರ ಮುರುಡೇಶ್ವರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು ಎಲ್ಲ ಪ್ರವಾಸಿಗರೂ ನೋಡಲೇ ಬೇಕಾದ ಸ್ಥಳ ಇದಾಗಿದೆ.

Also Read:

೯. ಶ್ರವಣಬೆಳಗೊಳ

ಶ್ರವಣಬೆಳಗೊಳಕ್ಕೆ ಪ್ರವಾಸ ಬೆಳೆಸಿದ ಪ್ರತಿಯೊಬ್ಬರೂ ಕೂಡಾ ಗೊಮ್ಮಟೇಶ್ವರ ಮೂರ್ತಿಯನ್ನು ನೋಡಲೇಬೇಕು. ಶ್ರವಣಬೆಳಗೊಳದಲ್ಲೇ ಇದು ಪ್ರಮುಖ ಆಕರ್ಷಣೀಯ ಸ್ಥಳ. ಜಗತ್ತಿನಲ್ಲೇ ಅತಿ ದೊಡ್ಡ ಏಕಶಿಲಾ ವಿಗ್ರಹವಿದು. 17 ಮೀಟರ್ (58 ಅಡಿ) ಎತ್ತರದ ಈ ವಿಗ್ರಹ ಏಕಶಿಲೆಯಿಂದ ನಿರ್ಮಾಣಗೊಂಡಿದ್ದು. ಗಂಗ ಸಾಮ್ರಾಜ್ಯದ ರಾಜಮಲ್ಲ ಮತ್ತು ಆತನ ಜನರಲ್‌ ಚಾಮುಂಡರಾಯನಿಂದ ನಿರ್ಮಾಣಗೊಂಡಿದೆ. ಶ್ರವಣಬೆಳಗೊಳ ಜೈನರ ಕಾಶಿ ಎಂದು ಕರೆಯಲ್ಪಡುವ ಸ್ಥಳ. ಈ ಸ್ಥಳದ ಪ್ರಮುಖ ಆಕರ್ಷಣೆಯೆಂದರೆ ಪ್ರತಮೆಯ ಮಹಾಮಸ್ತಕಭಿಷೇಕ, ಇದು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಉತ್ಸವವಾಗಿದ್ದು. ಈ ಸಮಯದಲ್ಲಿ, ಗೊಮ್ಮಟೇಶ್ವರನ ಪ್ರತಿಮೆಯನ್ನು ಕೇಸರಿ, ತುಪ್ಪ, ಹಾಲು ಇತ್ಯಾದಿಗಳಿಂದ ತಾಜಾವಾಗಿಟ್ಟುಕೊಳ್ಳುವುದಕ್ಕಾಗಿ ಸ್ನಾನ ಮಾಡಿಸಲಾಗುತ್ತದೆ.

Also Read: ಮನಸ್ಸಿಗೆ ನೆಮ್ಮದಿ ಬಯಸುವವರಿಗೆ ಶೃಂಗೇರಿ ಹಾಗು ಸುತ್ತ ಮುತ್ತಲಿನ ಜಾಗ ಹೇಳಿ ಮಾಡಿಸಿದ್ದು..

ದಕ್ಷಿಣ ಭಾರತದ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ದೇಶ, ವಿದೇಶ, ರಾಜ್ಯಾದ್ಯಂತ ಅನೇಕ ಜನರ ಸಮಸ್ಯೆಗಳ ಪರಿಹಾರಕ್ಕೆ ಕಾರಣಕರ್ತರಾಗಿ ಆರಾಧ್ಯ ದೈವರೆಂದೇ ಪ್ರಖ್ಯಾತ ಪಡೆದಿರುವ ಶ್ರೀ ಶ್ರೀ ಬಿ.ಎಚ್ ಆಚಾರ್ಯ ಗೂರೊಜಿಯವರು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಬಲಿಷ್ಟವಾಗಿರಲಿ ಅತೀ ಶೀಘ್ರದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಸಕಲ ಇಷ್ಟಾರ್ಥ ಕಾರ್ಯಗಳನ್ನು ನೆರವೆರಿಸಿಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522