ಆಸ್ಟ್ರೇಲಿಯಾ ನ್ಯೂಜಿಲೆಂಡ್‌ ಗಳಿಗೇನು ಕಡಿಮೆ ಇಲ್ಲದಂತೆ ಇದೆ ನಮ್ಮ ನಾಡಿನ ಈ ಜಾಗಗಳು..

0
1489

Kannada News | Karnataka Temple History

ಚಾರಣ ಪ್ರಿಯರು ಹೊರ ದೇಶಗಳಲ್ಲಿರುವ ಸುಂದರ ಸ್ಥಳಗಳ ಬಗ್ಗೆ ಹೊಗಳುತ್ತಾರೆ.. ಆದರೇ ನಮ್ಮ ನಾಡಿನಲ್ಲೇ ಇರುವ ಈ ಅಧ್ಬುತ ರಮಣೀಯ ಸ್ಥಳಗಳು ಕೆಲವರಿಗೆ ತಿಳಿದೇ ಇರುವುದಿಲ್ಲ.. ಇಲ್ಲಿದೇ ನೋಡಿ ನಮ್ಮ ರಾಜ್ಯದ ರಮಣೀಯ ಸ್ಥಳಗಳು..

ಮುಳ್ಳಯ್ಯನ ಗಿರಿ

ಮುಳ್ಳಯ್ಯನಗಿರಿ ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬಾಬಾ ಬುಡನ್‌ಗಿರಿ ಬೆಟ್ಟಸಾಲಿನಲ್ಲಿರುವ ಒಂದು ಶಿಖರ. ೧೯೩೦ ಮೀಟರ್ (೬೩೧೭ ಅಡಿ) ಎತ್ತರದಲ್ಲಿರುವ ಮುಳ್ಳಯ್ಯನ ಗಿರಿ ಕರ್ನಾಟಕದ ಅತ್ಯುನ್ನತ ಪರ್ವತಶಿಖರವಾಗಿದೆ. ಅಲ್ಲದೆ ಇದು ಹಿಮಾಲಯ ಮತ್ತು ನೀಲಗಿರಿಬೆಟ್ಟಗಳ ನಡುವಣ ಪ್ರದೇಶದಲ್ಲಿನ ಅತಿ ಎತ್ತರದ ಪರ್ವತವು ಸಹ ಹೌದು. ಈ ಬೆಟ್ಟದ ಮೇಲ್ಬಾಗದಲ್ಲಿ ಮುಳ್ಳಯ್ಯ ಸ್ವಾಮಿಗಳ ದೇವಾಲಯವಿದೆ (ಮಠ).

ಬಾಬಾ ಬುಡನ್ ಗಿರಿ

ದತ್ತಗಿರಿ / ಬಾಬಾ ಬುಡನ್‌ಗಿರಿಯು ಭಾರತದ ಪಶ್ಚಿಮ ಘಟ್ಟಗಳ ದತ್ತಗಿರಿ ಬೆಟ್ಟದ ಸಾಲು.  ಕರ್ನಾಟಕದ ಚಿಕ್ಕಮಗಳೂರುಜಿಲ್ಲೆಯಲ್ಲಿ ಸ್ಥಿತವಾದ ದತ್ತಗಿರಿ/ಬಾಬಾ ಬುಡನ್‌ ಗಿರಿಯು ಹಿಂದೂ ಮತ್ತು ಮುಸ್ಲಿಮರಿಬ್ಬರಿಗೂ ಯಾತ್ರಾಸ್ಥಳವಾಗಿರುವ ಅದರ ದೇವಸ್ಥಾನಕ್ಕಾಗಿ ಪರಿಚಿತವಾಗಿದೆ. ಮುಳ್ಳಯ್ಯನಗಿರಿ ಮತ್ತು ದತ್ತಗಿರಿ/ಬಾಬಾ ಬುಡನ್‌ ಗಿರಿ (ಎತ್ತರ ೧೮೯೫ ಮಿ.) ದತ್ತಗಿರಿ/ಬಾಬಾ ಬುಡನ್ ಗಿರಿ ಸಾಲಿನಲ್ಲಿರುವ ಪರ್ವತ ಶಿಖರಗಳು. ಒಟ್ಟಾರೆಯಾಗಿ ಈ ಶಿಖರಗಳು ಅವರು ಸ್ವಾಭಾವಿಕವಾಗಿ ಅರ್ಧ ಚಂದ್ರನ ಆಕಾರವನ್ನು ಹೋಲುವ ಕಾರಣಕ್ಕಾಗಿ, ಇವನ್ನು ‘ಚಂದ್ರದ್ರೋಣ ಪರ್ವತಶ್ರೇಣಿ’ ಎಂದು ಕರೆಯಲಾಗುತ್ತದೆ.

ಕೆಮ್ಮಣ್ಣುಗುಂಡಿ

ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಒಂದು ಗಿರಿಧಾಮ. ಸಮುದ್ರ ಮಟ್ಟದಿಂದ ೧೪೩೪ ಮೀ ಎತ್ತರದಲ್ಲಿರುವ ಈ ಊರು, ಬೆಂಗಳೂರಿನಿಂದ ಸುಮಾರು ೨೫೦ ಕಿ.ಮೀ ದೂರದಲ್ಲಿ ಹಾಗು ಚಿಕ್ಕಮಗಳೂರಿನಿಂದ ೫೫ ಕಿಲೋ ಮೀಟರ್ ದೂರದಲ್ಲಿದೆ.. ಇದು ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರ ಬೇಸಿಗೆ ತಾಣವಾಗಿದ್ದರಿಂದ ಇದನ್ನು “ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ” ಎಂದೂ ಕರೆಯುತ್ತಾರೆ. ಇಲ್ಲಿನ ಸುಂದರ ಉದ್ಯಾನಗಳು, ಹಸಿರು ಪ್ರಕೃತಿ, ನೀರಿನ ಅಬ್ಬಿಗಳು ಮತ್ತು ಪಶ್ಚಿಮ ಘಟ್ಟಗಳ ಮನೋಹರವಾದ ಪರ್ವತಗಳು ಈ ಸ್ಥಳವನ್ನು ಆಕರ್ಷಣೀಯವಾಗಿ ಮಾಡಿವೆ. ಪರ್ವತಾರೋಹಣ ಮೊದಲಾದ ಚಟುವಟಿಕೆಗಳಿಗೆ ಕೆಮ್ಮಣ್ಣುಗುಂಡಿಯ ಸುತ್ತಮುತ್ತಲಿನ ಗಿರಿಬೆಟ್ಟಗಳಲ್ಲಿ ಅವಕಾಶವಿದೆ.

ಹೆಬ್ಬೆ ಜಲಪಾತ

ರಾಜ ಭವನದಿಂದ ಸುಮಾರು ೮ ಕಿಮೀ ದೂರದಲ್ಲಿರುವ ಜಲಪಾತ. ಇಲ್ಲಿ ನೀರು ೧೬೮ ಮೀ ಎತ್ತರದಿಂದ ಎರಡು ಹಂತಗಳಲ್ಲಿ (ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ) ಬೀಳುತ್ತದೆ.

ಶಾಂತಿ ಜಲಪಾತ

ಇಲ್ಲಿರುವ ಮತ್ತೊಂದು ಜಲಪಾತವೆಂದರೆ ಶಾಂತಿ ಫಾಲ್ಸ್. ರುದ್ರರಮಣೀಯ ಪ್ರಪಾತಗಳನ್ನು ನೋಡುತ್ತ ಇಲ್ಲಿನ ಶಾಂತಿ ಫಾಲ್ಸ್ ಗೆ ಭೇಟಿ ನೀಡುವ ಪ್ರವಾಸಿಗರು ಮನಸೋಲುವಂತಾಗುತ್ತದೆ. ಎತ್ತರದ ಬೆಟ್ಟದಿಂದ ರಭಸದಿಂದ ಬೀಳುವ ನೀರನನ್ನು ನೋಡುವ ಪ್ರವಾಸಿಗರಿಗೆ ಇಲ್ಲಿಂದ ಕಾಣುವ ಅನೇಕ ಕಣಿವೆಗಳು ಪ್ರಕೃತಿಯ ವಿಸ್ಮಯವನ್ನು ಮನದಟ್ಟಾಗಿಸುತ್ತವೆ. ಪಶ್ಚಿಮ ಘಟ್ಟದ ಬೆಟ್ಟಗಳ ಸಾಲುಗಳನ್ನು ಇಲ್ಲಿ ನೋಡುತ್ತ ಪ್ರವಾಸಿಗರು ಕೆಮ್ಮಣ್ಣುಗುಂಡಿಯ ಪ್ರವಾಸನ್ನು ಮರೆಯಲಾಗದ ಅನುಭವವಾಗಿಸಿಕೊಳ್ಳಬಹುದು.

Also Read:

ನಮ್ಮ ರಾಜ್ಯದಲ್ಲಿಯೇ ಎಷ್ಟು ಸುಂದರ ಸ್ಥಳಗಳಿವೆ ನೋಡಿ.. ಸಾಧ್ಯವಾದರೆ ಒಮ್ಮೆ ಭೇಟಿಕೊಡಿ..

Also Read: ರೈಲ್ವೆ ಟಿಕೆಟ್ ಬುಕ್ ಮಾಡಬೇಕಾದರೆ ಸೀಟ್ ಆಯ್ಕೆ ಮಾಡಿಕೊಳ್ಳುವ ಅವಕಾಶ ನಿಮಗೆ ಯಾಕೆ ಕೊಡೋಲ್ಲ ಗೊತ್ತಾ?