ಟ್ರಾಫಿಕ್ ಪೋಲೀಸರ ಎಡವಟ್ಟು; ರೈತರ ಎತ್ತಿನ ಬಂಡಿಗೆ ವಿಮೆ ಮಾಡಿಸದ ವಾಹನವೆಂದು 1 ಸಾವಿರ ರೂ. ದಂಡ.!

0
212

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೋಟಾರ್ ವಾಹನ ಕಾಯ್ದೆ ಜಾರಿಯಾದ ಬಳಿಕ ಟ್ರಾಫಿಕ್ ಪೊಲೀಸರನ್ನು ಕಂಡರೆ ಜನ ಹೆದರುವಂತೆ ಆಗಿದೆ. ಏಕೆಂದರೆ ಎಲ್ಲ ದಾಖಲೆಗಳು ಇದ್ದರೂ ಯಾವುದಾದರು ಒಂದು ನೆಪಹೇಳಿ ದಂಡ ವಸೂಲಿ ಮಾಡುತ್ತಾರೆ ಎನ್ನುವುದು ವಾಹನ ಸವಾರರಿಗೆ ಭಯಹುಟ್ಟಿಸಿದೆ. ಏಕೆಂದರೆ ಹವಾಯಿ ಚಪ್ಪಲಿ, ಲುಂಗಿ ಹಾಕಿದರು ದಂಡ ಹಾಕುವ ಟ್ರಾಫಿಕ್ ಪೊಲೀಸರು ಜನರಿಗೆ ಹೊಸ ನಿಯಮವನ್ನು ಹೇಳಿ ಬೆಚ್ಚಿ ಬೀಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು, ಈಗ ರೈತರ ಚಕ್ಕಡಿ ಬಂಡಿಗೂ ದಂಡ ವಿಧಿಸಿದ್ದು ದೇಶಾದ್ಯಂತ ವೈರಲ್ ಆಗಿದೆ.

Also read: ಬಿಗ್ ಬ್ರೇಕಿಂಗ್; ಸಂಚಾರಿ ನಿಯಮ ಉಲ್ಲಂಘನೆ ದಂಡಕ್ಕೆ ಮುಕ್ತಿ, ರಾಜ್ಯದಲ್ಲೂ ಟ್ರಾಫಿಕ್ ದಂಡಕ್ಕೆ ಬ್ರೇಕ್’ ಎಷ್ಟೊಂದು ಕಡಿತ ಇಲ್ಲಿದೆ ನೋಡಿ ಮಾಹಿತಿ .!

ರೈತರ ಎತ್ತಿನ ಬಂಡಿಗೂ ವಿಮೆ?

ಹೌದು ನೂತನ ಸಂಚಾರಿ ನಿಯಮದಲ್ಲಿ ಪೊಲೀಸರು ಕೂಡ ಗೊಂದಲದಲ್ಲಿದ್ದು ರಸ್ತೆಯಲ್ಲಿ ಯಾವುದೇ ವಸ್ತುಗಳನ್ನು ನೋಡಿದರು ಮೊದಲು ದಂಡ ಹಾಕಲು ಮುಂದಾಗುತ್ತಿದ್ದಾರೆ. ಅದರಂತೆ ಹೊಸ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಉತ್ತರ ಪ್ರದೇಶದ ಬಿಜನೌರ್ ಜಿಲ್ಲೆಯ ಸಾಹಸಪುರ ಗ್ರಾಮದಲ್ಲಿ ಎತ್ತಿನ ಬಂಡಿಗೆ ಪೊಲೀಸರು 1 ಸಾವಿರ ರೂ. ದಂಡ ವಿಧಿಸಿದ್ದಾರೆ. ರೈತ ರಿಯಾಜ್ ಹಸನ್ ತಮ್ಮ ಜಮೀನಿನ ಪಕ್ಕದಲ್ಲಿ ಬಂಡಿಯನ್ನು ನಿಲ್ಲಿಸಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಸಬ್‍ಇನ್ ಸ್ಪೆಕ್ಟರ್ ಪಂಕಜ್ ಕುಮಾರ್ ಮತ್ತು ಅವರ ತಂಡ ರಸ್ತೆ ಬದಿ ನಿಲ್ಲಿಸಿದ ಎತ್ತಿನ ಬಂಡಿ ನೋಡಿದ್ದಾರೆ. ಬಂಡಿ ಬಳಿ ಯಾರು ಇಲ್ಲದಿದ್ದನ್ನು ಕಂಡು ಗ್ರಾಮಸ್ಥರಿಗೆ ಕೇಳಿದಾಗ, ಅದು ರಿಯಾಜ್ ಹಸನ್ ಅವರದೆಂದು ತಿಳಿದಿದೆ.

Also read: ಜನ ಸಾಮಾನ್ಯರಂತೆ ಟ್ರಾಫಿಕ್ ರೂಲ್ಸ್ ಫಾಲೋ ಮಾಡೋ ದೇಶದ ಪ್ರಧಾನಿ ಮೋದಿ; ನಾನೇ ಸಿಎಂ ಎಂದು ರೂಲ್ಸ್ ಬ್ರೇಕ್ ಮಾಡುತ್ತಿರುವ ಯಡಿಯೂರಪ್ಪ.!

ಪೊಲೀಸರು ಎತ್ತಿನ ಬಂಡಿ ತೆಗೆದುಕೊಂಡು ಹಸನ್ ಮನೆಗೆ ಹೋಗಿ ವಿಮೆ ಮಾಡಿಸದ ವಾಹನ ಎಂದು 1 ಸಾವಿರ ರೂ. ದಂಡದ ಬಿಲ್ ನೀಡಿ ಹೋಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರಿಯಾಜ್ ಹಸನ್, ನನ್ನ ಜಮೀನಿನ ಪಕ್ಕದಲ್ಲಿ ಬಂಡಿ ನಿಲ್ಲಿಸಿದ್ದಕ್ಕೆ ಪೊಲೀಸರು ದಂಡ ಹಾಕಿದ್ದಾರೆ. ಮೋಟಾರ್ ವಾಹನ ಕಾಯ್ದೆಯಡಿ ಹೇಗೆ ದಂಡ ಹಾಕಿದ್ರು ಎಂಬುವುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಅಲ್ಲಿನ ಪೊಲೀಸ್ ಅಧಿಕಾರಿಗಳಿಗೆ ಗಸ್ತು ತಿರುಗಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ಹಾಕಬೇಕು ಎಂದು ಸೂಚಿಸಲಾಗಿತ್ತು. ಸಾಹಸಪುರ ಠಾಣಾ ವ್ಯಾಪ್ತಿಯಲ್ಲಿ ಎತ್ತಿನ ಬಂಡಿ ಮೂಲಕವೇ ಮರಳು ಸಾಗಾಟ ಮಾಡಲಾಗುತ್ತದೆ. ಹಸನ್ ಸಹ ಬಂಡಿ ಮೂಲಕ ಮರಳು ಸಾಗಿಸುತ್ತಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಪೊಲೀಸರಿಗೆ ಮೋಟಾರ್ ವಾಹನ ಕಾಯ್ದೆ ಮತ್ತು ಬೇರೆ ಅಪರಾಧಕ್ಕೆ ವಿಧಿಸುವ ದಂಡದ ಬಗ್ಗೆ ಮಾಹಿತಿ ಇರಲಿಲ್ಲ.

Also read: ಟ್ರಾಫಿಕ್ ಪೊಲೀಸ್ ನಿಮ್ಮನ್ನು ಹಿಡಿದರೆ, ನೆನಪಿರಲಿ ಪ್ರತಿಯೊಬ್ಬ ನಾಗರಿಕರಿಗೂ ಈ ಹಕ್ಕುಗಳಿವೆ!!

ಅದಕ್ಕಾಗಿಯೇ ಮೋಟರ ವಾಹನ ಕಾಯ್ದೆಯಡಿಯಲ್ಲಿ ದಂಡ ವಿಧಿಸಿದ್ದಾರೆ ಎಂದು ಸಾಹಸಪುರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಪಿ.ಡಿ.ಭಟ್ಟ ಸ್ಪಷ್ಟನೆ ನೀಡಿದ್ದಾರೆ. ಆದರೆ ಶನಿವಾರ ದಂಡ ಹಾಕಿದ್ದ ಪೊಲೀಸರು ಭಾನುವಾರ ರದ್ದು ಮಾಡಿದ್ದಾರೆ. ವಿಷಯ ತಿಳಿದ ಕೂಡಲೇ ದಂಡ ವಾಪಸ್ ತೆಗೆದುಕೊಂಡಿದ್ದು ಜನರಲ್ಲಿ ಮತ್ತಷ್ಟು ಚರ್ಚೆಗೆ ಸಾಕ್ಷಿಯಾಗಿದೆ. ಏನೇ ಆಗಲಿ ರೈತರ ವಾಹನಗಳಿಗೆ ದಂಡ ವಿಧಿಸಭಾರದು ಎನ್ನುವುದು ತಪ್ಪಲ ಆದರೆ ವಾಹನ ಯಾವುದು ಎನ್ನುವುದು ತಿಳಿದು ದಂಡ ಹಾಕುವುದು ಒಳ್ಳೆಯದು ಎನ್ನುವುದು ಅಲ್ಲಿನ ಜನರ ಮಾತಾಗಿದೆ.