`ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರ ಮಾಹಿತಿ ನೀಡಿದರೆ ಸಿಗಲಿದೆ ಆಕರ್ಷಕ ಬಹುಮಾನ..

0
152

ದೇಶದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಸಂಚಾರಿ ನಿಯಮ ಉಲ್ಲಂಘನೆಯನ್ನು ಕೂಡ ಜನರು ಹೆಚ್ಚು ಮಾಡುತ್ತಿದ್ದಾರೆ. ಇದಕ್ಕಾಗಿ ಪೊಲೀಸ್ ಇಲಾಖೆ ಹಲವು ಹರಸಾಹಸ ಪಡುತ್ತಿದ್ದರು ನಿಯಮವನ್ನು ಗಾಳಿಗೆ ತೂರುತ್ತಿರುವ ಸಂಖ್ಯೆ ಕಡಿಮೆಯಾಗುತ್ತಿಲ್ಲ, ಇದಕ್ಕಾಗಿ ಪೊಲೀಸ್ ಇಲಾಖೆ ಮುಳ್ಳನ್ನು ಮುಳ್ಳಿನಿಂದಲೇ ತಗೆಯಬೇಕು ಎಂದು ಉಪಾಯ ಒಂದನ್ನು ಮಾಡಿದ್ದು, ಸಂಚಾರ ನಿಯಮ ಉಲ್ಲಂಘಿಸಿದವರ ಬಗ್ಗೆ ಮಾಹಿತಿ ನೀಡಿದರೆ ತಕ್ಕ ಬಹುಮಾನ ನೀಡುತ್ತಿದ್ದಾರೆ ಇದನ್ನೇ ಹಲವರು ಬಿಸಿನೆಸ್‌ ಸಾವಿರಾರು ರೂ. ಹಣ ಪಡೆಯುತ್ತಿದ್ದಾರೆ.

ಏನಿದು ಪೊಲೀಸ್ ಬಹುಮಾನ?

ಹೌದು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಪೊಲೀಸರು ದಂಡ ವಸೂಲಿ ಮಾಡುವುದು ಸರ್ವೇ ಸಾಮಾನ್ಯ. ಆದಾಗ್ಯೂ ಜನರು ಸಂಚಾರ ನಿಯಮ ಉಲ್ಲಂಘಿಸುತ್ತಲೇ ಇರುತ್ತಾರೆ. ಇದಕ್ಕೆ ಕಡಿವಾಣ ಹಾಕುವ ಪ್ರಯತ್ನವಾಗಿ ಗೋವಾ ಪೊಲೀಸರು, ಸಂಚಾರ ನಿಯಮ ಗಾಳಿಗೆ ತೂರುವವರ ಕುರಿತು ಸಾರ್ವಜನಿಕರಿಂದಲೇ ಮಾಹಿತಿ ಪಡೆಯುವ, ಮಾಹಿತಿದಾರರಿಗೆ ಬಹುಮಾನ ನೀಡುವ ಯೋಜನೆಯೊಂದನ್ನು ಜಾರಿಗೊಳಿಸಿದ್ದು, ಸೂಪರ್‌ಹಿಟ್‌ ಆಗಿದ್ದು, ಈವರೆಗೆ 7000 ಜನರ ನೋಂದಣಿ, .38 ಲಕ್ಷ ಬಹುಮಾನ ವಿತರಣೆ ಮಾಡಲಾಗಿದೆ.

ಹೇಗಿದೆ ಈ ನಿಯಮ?

ಸಂಚಾರ ಕಾವಲುಗಾರ ಯೋಜನೆಯ ನಿಯಮದಂತೆ ಸಾರ್ವಜನಿಕರು ಹೆಸರು ನೋಂದಾಯಿಸಿಕೊಳ್ಳಬಹುದು. ಯಾರಾದರೂ ಸಂಚಾರ ನಿಯಮ ಉಲ್ಲಂಘಿಸಿದಾಗ ಆ ಕುರಿತ ಫೋಟೋ ಅಥವಾ ವಿಡಿಯೋ ಸೆರೆ ಹಿಡಿದು ವಾಟ್ಸ್‌ಆ್ಯಪ್‌, ಇ-ಮೇಲ್‌, ಫೇಸ್‌ಬುಕ್‌ ಪೇಜ್‌ ಮೂಲಕ ಪೊಲೀಸರಿಗೆ ರವಾನಿಸಬೇಕು. ಈ ವಿಡಿಯೋ ಫೋಟೋದಲ್ಲಿ ವಾಹನ ನೋಂದಣಿ ಸಂಖ್ಯೆ, ದಿನಾಂಕ, ಸಮಯ, ಸ್ಥಳ, ನಿಯಮ ಉಲ್ಲಂಘನೆಯ ವಿವರ ಇರಬೇಕು. ಪ್ರತಿ ನಿಯಮ ಉಲ್ಲಂಘನೆ ಪತ್ತೆ ಹಚ್ಚಿದಾಗ 10 ಅಂಕಗಳನ್ನು ಪೊಲೀಸರು ನೀಡುತ್ತಾರೆ. ಅದು 100 ಅಂಕಗಳಾದಾಗ 1000 ರು. ಬಹುಮಾನ ನೀಡುತ್ತಾರೆ. ಈ ಯೋಜನೆ ಈಗಾಗಲೇ ಭಾರಿ ಯಶಸ್ವಿಯಾಗಿದ್ದು, 7000 ಮಂದಿ ಸೆಂಟಿನೆಲ್‌ಗಳಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈವರೆಗೆ ಗೋವಾ ಪೊಲೀಸರು 37.81 ಲಕ್ಷ ರು. ಬಹುಮಾನ ರೂಪದಲ್ಲಿ ಕೊಟ್ಟಿದ್ದಾರೆ. 29.91 ಲಕ್ಷ ರು. ಬಹುಮಾನವನ್ನು ಇನ್ನೂ ಪಾವತಿಸಬೇಕಾಗಿದೆ.

ಹಾಗೆಯೇ ಈ ನಿಯಮಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಜನರು ಪೊಲೀಸ್ ಇಲ್ಲ ಅಂತ ಬೇಕಾಬಿಟ್ಟಿ ವಾಹನ ಓಡಿಸುವುದು ಕಡಿಮೆ ಮಾಡಿದ್ದಾರೆ. ಇದರಿಂದ ಅಪಘಾತದ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ರಾಜ್ಯದಲ್ಲಿವೂ ಕೂಡ ಹೊಸ ರೂಲ್ಸ್ ಜಾರಿಗೆ ಬಂದಿದೆ, ಇನ್ಮಂದೆ ನೀವೇನಾದ್ರೂ ರೂಲ್ಸ್ ಬ್ರೇಕ್ ಮಾಡಿದ್ರೆ ಇನ್ಶ್ಯೂರೆನ್ಸ್ ಇಲ್ಲದಿದ್ದರೆ 1000ರೂ ಕಟ್ಟಲೇ ಬೇಕು. ಇನ್ನು ನಿಗದಿಗಿಂತ ವೇಗದಲ್ಲಿ ಗಾಡಿ ಓಡಿಸಿದ್ರೆ 300ರೂ ಬದಲು ಇನ್ಮುಂದೆ 1000ರೂ ಕಟ್ಟಬೇಕಾಗುತ್ತೆ ಹುಷಾರ್, ಇದರ ಜೊತೆಯಲ್ಲಿ ನೋ ಪಾರ್ಕಿಂಗ್ ನಲ್ಲಿ ಗಾಡಿ ನಿಲ್ಲಿಸಿದ್ರೆ 100ರೂ ಬದಲು ಸಾವಿರ ರೂ ಕಟ್ಟಬೇಕು ಜೊತೆಗೆ ಟೋಯಿಂಗ್ ಚಾರ್ಚ್ ಕಟ್ಟಲೇ ಬೇಕು. ಇನ್ನು ಗಾಡಿಯ ಫಿಟ್ ನೆಸ್ ಟೆಸ್ಟ್ ಮಾಡಿಸದೇ ಹೋದ್ರೆ 300ರೂ ಬದಲು 2000 ನಂತರದಲ್ಲಿ 5000ರೂ ನಿಮ್ಮ ತಲೆ ಮೇಲೆ ಬರುತ್ತೆ ಒಟ್ಟಿನಲ್ಲಿ ನೀವೇನಾದ್ರೂ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.