ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್

0
1032

ಕಟ್ಟುನಿಟ್ಟಾಗಿ ನಿಯಮ ಪಾಲಿಸುವ ಪೊಲೀಸರು ಕಟುಕರಲ್ಲ, ಅವರಲ್ಲೂ ಟ್ರಾಫಿಕ್ ಪೊಲೀಸರ ಹೃದಯವಂತಿಕೆ ಮನೆಮಾಡಿರುತ್ತದೆ ಎಂಬುದಕ್ಕೆ ಈ ವಿಡಿಯೋದಲ್ಲಿನ ನಡೆದ ಘಟನೆ ಸಾಕ್ಷಿಯಾಗಿದೆ.

ಫೇಸ್ ಬುಕ್ ಪುಟದ ಮೇಲೆ ಹರಿದಾಡುತ್ತಿರುವ ಈ ವಿಡಿಯೋ ನೋಡಿದ ನಂತರ ನಿಮಗೆ ಗೊತ್ತಾಗುತ್ತೆ ಒಂದು ಕ್ಷಣ ಈ ಟ್ರಾಫಿಕ್ ಪೊಲೀಸ್ ಎಚ್ಚೆತ್ತುಕೊಳ್ಳದಿದ್ದರೆ ಒಂದು ಹುಡುಗಿಯ ಜೀವ ಹೋಗುತ್ತಿತ್ತು.. ಈ ಘಟನೆಯು ಟ್ರಾಫಿಕ್ ನಲ್ಲಿ ಅಳವಡಿಸಲಾದ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಒಂದು ಬಸ್ ಸ್ಕೂಲ್ ಗೆ ಸೈಕಲ್ ನಲ್ಲಿ ಹೋಗುತ್ತಿರುವ ಹುಡುಗಿಯನ್ನು ಡಿಕ್ಕಿ ಹೊಡೆದಿದಲ್ಲದೆ ಬಸ್ ಚಾಲಕ ತಾನು ತಪ್ಪೇ ಮಾಡಿಲ್ಲವೆಂದು ಟ್ರಾಫಿಕ್ ಪೊಲೀಸ್ ಮತ್ತು ಜನರ ಜೊತೆ ವಾದಿಸುತ್ತಿದ್ದಾನೆ. ಅದೃಷ್ಟವಶಾತ್ ಟ್ರಾಫಿಕ್ ಪೊಲೀಸ್ ಸಮಯ ಪ್ರಜ್ಞೆ ಯಿಂದಾಗಿ ಹುಡುಗಿಯನ್ನು ಪ್ರಾಣಾಪಾಯದಿಂದ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಂಥ ಪೊಲೀಸರನ್ನು ಮುಕ್ತಕಂಠದಿಂದ ಫೇಸ್ ಬುಕ್ ಪುಟದ ಕಾಮೆಂಟ್ ಗಳಲ್ಲಿ ಜನರು ಹೊಗಳಿದ್ದಾರೆ.