ಮೋದಿ ತರುತ್ತಿರುವ ದೇಶದ ಅತಿ ವೇಗದ ಟ್ರೈನ್ ಬಗ್ಗೆ ತಿಳಿದುಕೊಳ್ಳಿ, ನಮ್ಮ ದೇಶಾನೂ ಪಾಶ್ಚಾತ್ಯ ದೇಶಗಳಿಗಿಂತ ಕಮ್ಮಿಯಿಲ್ಲ ಅನ್ಸೋಕ್ಕೆ ಶುರು ಆಗುತ್ತೆ!!

0
504

ಸಂಪೂರ್ಣ ದೇಶೀಯ ನಿರ್ಮಿತ ದೇಶದ ಹೈಸ್ಪೀಡ್ ರೈಲು ‘ಟ್ರೈನ್ 18’, ಅಧಿಕೃತವಾಗಿ ದೇಶದ ಅತಿವೇಗದ ರೈಲು ಎಂಬ ಹೆಗ್ಗಳಿಕೆ ಪಡೆದಿದೆ. ಈ ‘ಟ್ರೈನ್ 18’ ಗೆ ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 29ರಂದು ಹಸಿರು ಚಾಲನೆ ನೀಡಲಿದ್ದಾರೆ. 100 ಕೋಟಿ ರೂ ವೆಚ್ಚದಲ್ಲಿ ತಯಾರಾದ ಈ ರೈಲು ವಾರಾಣಸಿಯಿಂದ ಹೊಸದಿಲ್ಲಿಗೆ ಕೇವಲ 4:30 ಗಂಟೆಯಲ್ಲಿ ತಲುಪಲಿದೆ. ಈ ರೈಲು ಮೊದಲ ಎಂಜಿನ್ ರಹಿತ ರೈಲು ಎಂಬ ಖ್ಯಾತಿ ಪಡೆದಿದೆ.

Also read: ಭಾರತೀಯ ರೈಲ್ವೆ ಇಲಾಖೆಯಿಂದ ವಿವಿಧ 14,033 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಮೆಕ್​ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಈ ರೈಲಿನ ಬೋಗಿಗಳನ್ನು ಸಂಪೂರ್ಣ ಭಾರತದಲ್ಲೇ ಸಿದ್ಧಪಡಿಸಲಾಗಿರುವುದು ವಿಶೇಷ. ಹಾಗೆಯೇ ಟ್ರೈನ್​-18 ಪ್ರಾಯೋಗಿಕ ಓಡಾಟದ ವೇಳೆ ಟ್ರೈನ್ 18 ನಿರಂತರವಾಗಿ ಗಂಟೆಗೆ 180 ಕಿ.ಮೀ ವೇಗವನ್ನು ಕಾಯ್ದುಕೊಂಡಿದೆ. ಎಂದು ರೈಲ್ವೇ ಸಚಿವ ಪೀಯೂಷ್ ಗೋಯಲ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದನ್ನು ಮಾಜಿ ಪ್ರಧಾನಿ ದಿವಂಗತ ಅಟಲ್​ ಬಿಹಾರಿ ವಾಜಪೇಯಿ ಜನ್ಮದಿನದ ಸ್ಮರಣಾರ್ಥ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕ್ಷೇತ್ರ ವಾರಾಣಸಿಯಲ್ಲಿ ಡಿಸೆಂಬರ್ 29ರಂದು ಹಸಿರು ನಿಶಾನೆ ತೋರಲಿದ್ದಾರೆ.

ಈ ಹಿಂದೆ ದಿಲ್ಲಿ-ರಾಜಧಾನಿ ಮಾರ್ಗದಲ್ಲಿ ಈ ರೈಲಿನ ಪ್ರಾಯೋಗಿಕ ಓಡಾಟ ನಡೆದಿತ್ತು. 52 ಸೀಟುಗಳ 2 ಎಕ್ಸಿಕ್ಯೂಟಿವ್ ಕಂಪಾರ್ಟ್‌ಮೆಂಟ್‌ ಹಾಗೂ 72 ಸೀಟುಗಳ ಟ್ರೈಲರ್ ಕೋಚ್‌ಗಳನ್ನು ಹೊಂದಿದೆ. ಬೆಳಗ್ಗೆ 6 ಗಂಟೆಗೆ ವಾರಾಣಸಿ ನಿಲ್ದಾಣದಿಂದ ಹೊರಡುವ ರೈಲು ಅದೇ ದಿನ ಬೆಳಗ್ಗೆ 10:30ಕ್ಕೆ ಹೊಸದಿಲ್ಲಿ ತಲುಪಲಿದೆ.

ಟೈನ್​-18 ಎಂದು ಹೆಸರಿಡಲು ಕಾರಣ?

Also read: ಇನ್ಮುಂದೆ ಮೊಬೈಲ್‌ ಫೋನ್‌ಗಳ ಮಾದರಿಯಲ್ಲಿಯೇ ವಿದ್ಯುತ್‌ ಬಳಕೆಗೂ ಬಂತು ಪ್ರೀ ಪೇಯ್ಡ್‌ ರೀಚಾರ್ಜ್‌..

ಈ ಹೊಸ ರೈಲನ್ನು ವಿನ್ಯಾಸಗೊಳಿಸಲು 18 ತಿಂಗಳನ್ನು ತೆಗೆದುಕೊಳ್ಳಲಾಗಿತ್ತು. 2018 ರಲ್ಲೇ ಈ ಹೊಸ ಮಾದರಿಯ ರೈಲು ಲೋಕಾರ್ಪಣೆ ಆಗುತ್ತಿರುವುದರಿಂದ ಇದಕ್ಕೆ ಟ್ರೈನ್​-18 ಎಂದು ಹೆಸರಿಡಲಾಗಿದೆ. ಭಾರತದ ಅತಿ ವೇಗದ ರೈಲು ಎಂದು ಖ್ಯಾತಿ ಪಡೆದಿರುವ ಶತಾಬ್ಧಿ ರೈಲಿನ ವೇಗಕ್ಕಿಂತ ಟ್ರೈನ್​-18 ಅತಿ ವೇಗದಿಂದ ಚಲಿಸಲಿದೆ. ಇದರಿಂದ ಪ್ರಯಾಣದ ಸಮಯ ಶೇ.15 ರಷ್ಟು ಕಡಿಮೆಯಾಗುತ್ತದೆ ಎಂದು ರೈಲು ಅಧಿಕಾರಿ ತಿಳಿಸಿದ್ದಾರೆ.

ಟೈನ್​-18 ವಿಶೇಷತೆಗಳೇನು?

Also read: ರೈಲ್ವೆ ಸುರಕ್ಷಾ ದಳ; RPF ಕಾನ್ಸ್ ಟೇಬಲ್ ಹುದ್ದೆಗೆ ನೇಮಕಾತಿ ಪ್ರಕಟಣೆ..

  • ಸಂಪೂರ್ಣ ದೇಶೀಯ ನಿರ್ಮಿತ ಸೆಮಿ ಹೈಸ್ಪೀಡ್ ರೈಲು, ಮೊದಲ ಎಂಜಿನ್ ರಹಿತ ರೈಲಾಗಿದೆ.
  • ಟ್ರೈನ್ 18 ಒಟ್ಟು 16 ಕೋಚ್‌ಗಳನ್ನು ಹೊಂದಿದ್ದು ಏಕಕಾಲಕ್ಕೆ 1,128 ಪ್ರಯಾಣಿಕರನ್ನು ಕರೆದೊಯ್ಯಬಲ್ಲದು.
  • ಟ್ರೈನ್ 18 ಸ್ವಯಂಚಾಲಿತ ಬಾಗಿಲುಗಳು, ಮಡಚುವ ಮೆಟ್ಟಿಲುಗಳನ್ನು ಹೊಂದಿದೆ.
  • ರೈಲಿನ ಒಂದು ಬೋಗಿಗಳಲ್ಲಿ 78 ಆಸನಗಳ ವ್ಯಸಸ್ಥೆಗಳಿದ್ದರೆ, ಟ್ರೈನ್​-18 ನಲ್ಲಿ 52 ಸುಖಾಸನ ಸೀಟುಗಳನ್ನು ಹೊಂದಿದೆ.
  • ಇನ್ಫೋಟೈನ್‌ಮೆಂಟ್‌, ಬಯೋ-ವ್ಯಾಕ್ಯೂಮ್ ಶೌಚಾಲಯಗಳು ಹೊಂದಿದೆ.
  • ಪ್ರತಿಯೊಂದು ಬೋಗಿಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳು, ವೈಫೈ ಸೌಲಭ್ಯ ನೀಡಲಾಗಿದೆ.
  • ಮನರಂಜನೆಗೆ ಬೇಕಾದ ವ್ಯವಸ್ಥೆ, ಹೊಸ ತಂತ್ರಜ್ಞಾನದ ಮೊಬೈಲ್​ ಚಾರ್ಜಿಂಗ್ ಆಯ್ಕೆಗಳು ಇದರಲ್ಲಿದೆ.
  • ಟ್ರೈನ್​ನ ನಡುವೆ ಎರಡು ಎಕ್ಸಿಕ್ಯೂಟಿವ್​ ಕಂಪಾರ್ಟ್ಮೆಂಟ್​ ಇರಲಿದೆ.
  • ಪ್ರಯಾಣಿಕರು ಡ್ರೈವರ್​ ಕ್ಯಾಬಿನ್​ನನ್ನು ಒಳಗಿದಂಲೇ ನೋಡಬಹುದಾದಗಿದೆ.
  • ಜಿಪಿಎಸ್ ಆಧರಿತ ಮಾಹಿತಿ ವ್ಯವಸ್ಥೆ ಸೇರಿದಂತೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒಳಗೊಂಡಿದೆ.