ರೈಲಿನ ಚಾಲಕನ ಕಣ್ಣಿಗೆ ಕಾರದಪುಡಿ ಹಾಕಿದ ದುಷ್ಕರ್ಮಿಗಳು; ಕಣ್ಣಿನ ಉರಿಯಲ್ಲೇ 18 ರೈಲು ಓಡಿಸಿ 2000 ಪ್ರಯಾಣಿಕರನ್ನು ಕಾಪಾಡಿದ ಚಾಲಕ..

0
643

ದುಷ್ಕರ್ಮಿಗಳು ರೈಲುಗಳ ಮೇಲೆ ನಡೆಸುತ್ತಿರುವ ಕೃತ್ಯೆಗಳು ಹೆಚ್ಚು ಹೆಚ್ಚು ಕೇಳಿಬರುತ್ತಿದ್ದು, ದೇಶದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ಇತ್ತ ದೇಶದ ವೇಗದ ರೈಲಿನ ಮೇಲೆ ಕಲ್ಲು ತೂರಾಟ ನಡೆದರೆ, ಮುಂಬೈನಲ್ಲಿ ಚಲಿಸುತ್ತಿರುವ ರೈಲಿನಲ್ಲಿ ಚಾಲಕನ ಕಣ್ಣಿಗೆ ಕಾರದಪುಡಿ ಎರಚಿದ್ದಾರೆ. ಚಾಲಕ ಕಣ್ಣಿನ ಉರಿಯಲ್ಲೇ ರೈಲಿನ ನಿಯಂತ್ರಣವನ್ನು ಕಾಪಾಡಿಕೊಂಡು ಸುಮಾರು 18 ಕಿ.ಮೀ ದೂರದ ವರೆಗೆ ರೈಲು ಚಲಾಯಿಸಿ ಪ್ರಯಾಣಿಕರ ಜೀವ ಕಾಪಾಡಿದ್ದಾನೆ.

Also read: ನರೇಂದ್ರ ಮೋದಿ ಸರ್ಕಾರದಿಂದ ಕೇಂದ್ರ ನೌಕರರಿಗೆ ಗುಡ್ ನ್ಯೂಸ್: ಶೇ. 3ರಷ್ಟು ತುಟ್ಟಿ ಭತ್ಯೆ ಹೆಚ್ಚಳ..

ಏನಿದು ಸುದ್ದಿ?

ಫೆಬ್ರವರಿ 16, 2019 ರಂದು ಮುಂಬೈ ನಿಂದ ಹೊರಡುವ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಲೋಕಲ್ ಟ್ರೈನ್-ನಲ್ಲಿ ಸುಮಾರು 2000 ಜನರು ಪ್ರಯಾಣಿಸುತ್ತಿದ್ದರು ಈ ರೈಲು ತಿವಾಲಾ ನಿಲ್ದಾಣ ಕಲ್ವಾ ನಿಲ್ದಾಣವನ್ನು ಬಿಟ್ಟುಹೋದ ನಂತರ ಅಪರಿಚಿತ ವ್ಯಕ್ತಿಗಳು ಚಾಲಕನ ಮೇಲೆ ಕಾರದಪುಡಿ ಎರಚಿದ್ದಾರೆ. ಈ ಸಮಯದಲ್ಲಿ ಹೆದರದ 48 ವರ್ಷದ ಚಾಲಕ ಲಕ್ಷ್ಮಣ್ ಸಿಂಗ್ ಅವರು ಕಣ್ಣಿನಲ್ಲಿ ಕಾರದಪುಡಿ ಬಿಳ್ಳುತ್ತಿದ್ದಂತೆ, ಕಣ್ಣಿನಲ್ಲಿ ಉರಿ ಪ್ರಾರಂಭವಾಗಿದೆ. ರೈಲು ನಿಲ್ಲಿಸಿದರೆ ದುಷ್ಕರ್ಮಿಗಳು ಪ್ರಯಾಣಿಕರಿಗೆ ಅಪಾಯ ಮಾಡುತ್ತಾರೆ ಎಂದು ತಿಳಿದ ಲಕ್ಷ್ಮಣ್ ಸಿಂಗ್ ರೈಲಿನ ವೇಗವನ್ನು ಕೂಡ ಕಡಿಮೆಮಾಡದೆ 95 ಕಿಮೀ ವೇಗದಲ್ಲಿ ಸುಮಾರು 18 ಕಿ. ಮೀ ವರೆಗೆ ರೈಲು ಓಡಿಸಿ ಅಪಾಯವನ್ನು ತಪ್ಪಿಸಿದ್ದಾರೆ.

Also read: 12ನೇ ಆವೃತ್ತಿ IPL ವೇಳಾಪಟ್ಟಿ ಪ್ರಕಟ; 2019 ರ ಐಪಿಎಲ್ ಹಬ್ಬಕೆ ತಿಂಗಳಷ್ಟೇ ಬಾಕಿ, ನಿಮ್ಮ ನೆಚ್ಚಿನ ಪದ್ಯ ಯಾವದಿನ ಇದೆ ನೋಡಿ..

ರೈಲ್ವೆ ಅಧಿಕಾರಿಗಳ ಹೇಳುವಹಾಗೆ:

ರೈವಲ್ ಕಲ್ವಾ ನಿಲ್ದಾಣವನ್ನು ಬಿಟ್ಟ ನಂತರ ಸುಮಾರು 3.35 ಕ್ಕೆ ಚಾಲಕನ ಮೇಲೆ ಪುಡಿ ಎರಚಿದ್ದಾರೆ. ಕಾರದ ಪುಡಿ ಕಣ್ಣಿನಲ್ಲಿ ತೀವ್ರವಾಗಿ ಉರಿಯುತ್ತ ನೋವನ್ನು ವುಂಟುಮಾಡಿದೆ. ಈ ವೇಳೆ ರೈಲು 95 ಕಿ.ಮೀ ವೇಗದಲ್ಲಿ ಚಲಾಯಿಸುತ್ತಿತ್ತು ಆದರೆ ಚಾಲಕ ತುರ್ತು ಬ್ರೇಕ್-ಗಳನ್ನು ಉಪಯೋಗ ಮಾಡದೆ. ಅವರು ಕೂಡಲೇ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿ ದುಷ್ಕರ್ಮಿಗಳು ಪ್ರಯಾಣಿಕರಿಗೆ ಅಪಾಯ ಮಾಡಬಹುದು ಎಂದು ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಮುಂದಿನ ನಿಲ್ದಾಣದಲ್ಲಿ ಇಳಿದು ಕಣ್ಣುಗಳನ್ನು ತೊಳೆದುಕೊಂಡಿದ್ದಾರೆ. ಡಿವೈ ಈ ವೇಳೆ ಸ್ಟೇಷನ್ ಸೂಪರಿಂಟೆಂಡೆಂಟ್ ಅವರು ಸಹಾಯ ಮಾಡಿದ್ದಾರೆ. ಆದರು ರೈಲನ್ನು ನಿಲ್ಲಿಸದೆ ನಂತರ ಲಕ್ಷ್ಮಣ 4:12 ಘಂಟೆಯ ವೇಳೆಗೆ ಸುರಕ್ಷಿತವಾಗಿ ರೈಲು ನಿಲ್ದಾಣವನ್ನು ಸೇರಿದ್ದಾರೆ.

Also read: ಬಿಡದ ತಲೆನೋವಿಗೆ ಪದೇ ಪದೇ ಮಾತ್ರೆ ತಗೊಳ್ಳೋ ಬದಲು, ತಲೆ ನೋವಿನ ಹಿಂದಿನ ಈ ಕಾರಣಗಳನ್ನು ತಿಳಿದು ಸುಲಭವಾಗಿ ನೋವಿನಿಂದ ಹೊರಬನ್ನಿ!!

ಕಲ್ಯಾಣ್ ಗೆ ತಲುಪಿದ ಬಳಿಕ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಹೋಗಿದ್ದಾರೆ. ಇದನ್ನು ನೋಡಿದ ವ್ಯದ್ಯರು ಬಹಳಷ್ಟು ಕಾರದ ಪುಡಿ ಕಣ್ಣಲ್ಲಿ ಹೋಗಿದೆ ಎಂದು ಚಿಕಿತ್ಸೆ ಮಾಡಿದ್ದಾರೆ, ಇದನ್ನು ತಿಳಿದ ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್ಒ) ಸುನಿಲ್ ಉದಾಸಿ ಡಿಆರ್ ಎಮ್ ಕೇಂದ್ರೀಯ ರೈಲ್ವೇಸ್ ನಲ್ಲಿ ಸಾಹಸದ ಕೆಲಸ ಮಾಡಿದ ಲಕ್ಷ್ಮಣ ಅವರಿಗೆ ಸನ್ಮಾನಮಾಡಿ ಸರ್ವಾನುಮತದ ಸೇವೆಗಾಗಿ ಸರ್ಟಿಫಿಕೇಟ್ ಮತ್ತು ನಗದು ಬಹುಮಾನವನ್ನು ಸೇವೆಗಾಗಿ ನೀಡಿದ್ದಾರೆ. ಈ ಅಪರಾಧ ಪ್ರಕರಣಗಳ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.