“ಅಮೆರಿಕನ್ನರ ಉದ್ಯೋಗಗಳನ್ನು ಬೆಂಗಳೂರಿಗರು ಕಸಿಯುತ್ತಿದ್ದಾರೆ : ಟ್ರಂಪ್

0
1966

ವಾಷಿಂಗ್ಟನ್‌: ಭಾರತದ ಐಟಿ ವಲಯ ಎಚ್‌1ಬಿ ವೀಸಾ ಕುರಿತು ತಲೆಕೆಡಿಸಿಕೊಳ್ಳುತ್ತಿರುವಾಗಲೇ, ಈ ವೀಸಾಕ್ಕೆ ಸಂಬಂಧಿಸಿದಂತೆ ಅಮೆರಿಕ ಈ ಶಾಕ್‌ ನೀಡಿದೆ.

“ಅಮೆರಿಕನ್ನರ ಉದ್ಯೋಗಗಳನ್ನು ಬೆಂಗಳೂರಿಗರು ಕಸಿಯುತ್ತಿದ್ದಾರೆ’ ಎಂದು ಈ ಹಿಂದೆ ಒಬಾಮ ಹೇಳಿದ್ದರು. ಚುನಾವಣಾ ಪ್ರಚಾರದ ವೇಳೆ ಡೊನಾಲ್ಡ್‌ ಟ್ರಂಪ್‌ ಕೂಡ ಅದನ್ನೇ ವಾಗ್ಧಾಳಿಗೆ ಬಳಸಿಕೊಂಡರು. ಆದರೆ, ಟ್ರಂಪ್‌ ಈಗ ಒಂದು ಹೆಜ್ಜೆ ಮುಂದೆ ಹೋಗಿ ಬೆಂಗಳೂರಿಗೆ ಶಾಕ್‌ ನೀಡಿದ್ದಾರೆ. ಹೊರಗುತ್ತಿಗೆ ಸಂಬಂಧಿಸಿದಂತೆ ಮಹತ್ವದ ಮಸೂದೆ ಜಾರಿಯ ಮೂಲಕ ಅಮೆರಿಕ ಸದ್ದಿಲ್ಲದೆ ಈ ಆಘಾತ ನೀಡಿದೆ!

ಎಚ್‌1ಬಿ ವೀಸಾ ಹೊಂದಿದವರಿಗೆ ವಾರ್ಷಿಕ ವೇತನ ಕನಿಷ್ಠ 87 ಲಕ್ಷ ರೂ. (1,30,000 ಡಾಲರ್‌) ನೀಡಬೇಕೆಂಬ ಮಸೂದೆ ಮಂಡನೆಗೆ ಈಗಾಗಲೇ ಸಿದ್ಧತೆ ನಡೆದಿದೆ.  ಆದರೆ, ರಿಪಬ್ಲಿಕನ್‌ ಸರ್ಕಾರದ ಸಂಸದರು ಇದಕ್ಕೂ ವಿರೋಧ ಹೊಂದಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶಿಸಿರುವ ವಲಸೆ ವಿರೋಧಿ ನೀತಿ ಈಗ ಕಾನೂನಿನ ಬಲೆಯಲ್ಲಿ ಸಿಲುಕಲು ಆರಂಭಿಸಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕೋರ್ಟ್‌ ಮೊರೆ ಹೋಗುವುದಾಗಿ ಎಚ್ಚರಿಸಿದ್ದ ಬೆನ್ನಲ್ಲೇ, ಇಲ್ಲಿನ ಜಿಲ್ಲಾ ನ್ಯಾಯಾಧೀಶರೊಬ್ಬರು ಈ ನೀತಿಗೆ ತಡೆಯಾಜ್ಞೆ ತಂದಿದ್ದಾರೆ.