ವಿಶ್ವಕ್ಕೆ ಟ್ರಂಪ್ ಸರ್ಜರಿ: ವಿದೇಶಿ ರಾಯಭಾರಿಗಳಿಗೆ ಗೇಟ್ ಪಾಸ್

0
932

ವಾಷಿಂಗ್ಟನ್: ವಿದೇಶಿ  ರಾಯಭಾರಿಗಳಿಗೆ ಗೇಟ್ ಪಾಸ್ ನೀಡುವ ನಿರ್ಧಾರ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಟ್ರಂಪ್ ಕೈಗೊಂಡ ಎರಡನೇ ವಿವಾದಾತ್ಮಕ ತೀರ್ಮಾನವಾಗಿದೆ.

ಗ್ಲೋಬಲ್ ರನ್ನಿಂಗ್ ಕಂಪನಿ ಸಿಇಒ  ರೆಕ್ಸ್ ಟಿಲ್ಲರ್ ಸನ್ ಅವರನ್ನು ಟ್ರಂಪ್ ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದು ತೀವ್ರ ಟೀಕೆಗೆ ಗುರಿಯಾಗಿತ್ತು.

ನೇರ-ನಿಷ್ಠುರ ನುಡಿ, ಅನಿಸಿದ್ದನ್ನೇ ಹುಂಬತನದ ವೈದ್ಯಗಳ ಖ್ಯಾತಿ-ಕುಖ್ಯಾತಿಯಿಂದಲೇ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಅಧಿಕಾರುಕ್ಕೇರುವ ಮುನ್ನವೇ ಅಮೆರಿಕಾದ ಹಾಲಿ ರಾಯಭಾರಿಗಳಿಗೆ ಗೇಟ್ ಪಾಸ್ ಸೂಚನೆ ಕೊಟ್ಟಿದ್ದಾರೆ.

ap_donald_trump_jt_151021_16x9_992

ನೂತನ ಅಧ್ಯಕ್ಷರು ಅಧಿಕಾರ ಸ್ವೀಕರಿಸಿದ ಬಳಿಕ ರಾಯಭಾರಿಗಲು ರಾಜಿನಾಮೆ ಸಲ್ಲಿಸುವುದು ಸಂಪ್ರದಾಯ. ಆದರೆ ಜ.20 ರಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನವೇ ಟ್ರಂಪ್, ಒಬಾಮಾ ಆಡಳಿತಾವಧಿಯಲ್ಲಿ ನೇಮಕಗೊಂಡಿರುವ ಎಲ್ಲ ದೇಶಗಳ ರಾಯಭಾರಿಗಳಿಗೂ ಕನಿಷ್ಠ ಕಾಲಾವಕಾಶವನ್ನೂ ನೀಡದೆ  ತೆರೆವುಗೊಳಿಸಲು  ತಾಕೀತು  ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ರಾಯಭಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸದೆಯೇ ಟ್ರಂಪ್ ತಂಡ ಈ ಆದೇಶ ಹೊರಡಿಸಿದೆ. ತಾವು ನಿಯೋಜಿಸಿದ ರಾಯಭಾರಿ ಅಧಿಕಾರ ಸ್ವೀಕರಿಸಿದ ನಂತರವೇ ಅಲ್ಲಿನ ಅಧಿಕಾರಿಯನ್ನು ತೆರೆವುಗೊಳಿಸಿದ್ದರು. ಅವರು ಅವರು ಕುಟುಂಬ ಸಮೇತ ದೇಶಕ್ಕೆ ವಾಪಸಾಗಲು ಸಾಕಷ್ಟು ಕಾಲಾವಕಾಶವನ್ನೂ ಕೊಟ್ಟಿದ್ದರು, ಆದರೆ ಟ್ರಂಪ್ ಅಶಿಕಾರಿಗಳಿಗೆ ತ್ವರಿವಾಗಿ ತೆರವುಗೊಳಿಸುವಂತೆ ಆದೇಶ ಸೂಚಿಸಿದ್ದಾರೆ.