ಗಂಡು ಮಗುವಿಗೆ ಜನ್ಮ ನೀಡಿದ ತೃತೀಯ ಲಿಂಗಿ; ತಾಯ್ತನ ಅನ್ನೋದು ಕೇವಲ ಹೆಣ್ಣಿಗೆ ಮಾತ್ರ ಸೀಮಿತವಲ್ಲ ಎನ್ನುವ ಕಾಲ ಬಂದಾಯಿತು..

0
637

ತಾಯ್ತನ ಎನ್ನುವುದು ಯಾವ ಬೆಲೆಗೂ ಸಾಟಿಯಾಗದ ಪದವಾಗಿದೆ. ಅದರಂತೆ ಪ್ರತಿಯೊಂದು ಹೆಣ್ಣು ಹೆಣ್ಣಾಗಿ ಹುಟ್ಟಿದ ಮೇಲೆ ಮಗುವಿಗೆ ಜನ್ಮ ನೀಡುವುದು ಜೀವನದಲ್ಲಿ ಅತೀ ಎತ್ತರದ ಸಂಭ್ರಮವಾಗಿದೆ. ಏಕೆಂದರೆ ಈ ಅವಕಾಶ ವಿರುವುದು ಬರಿ ಹೆಣ್ಣಿಗೆ ಮಾತ್ರ. ಇದು ಕೇವಲ ಮಾನವ ಕುಲಕ್ಕೆ ಅಷ್ಟೇ ಅಲ್ಲದೆ ಜೀವಿಯಾಗಿರುವ ಪ್ರಾಣಿ ಪಕ್ಷಿಗಳಿಗೂ ಕುಲಕ್ಕೂ ಅನ್ವಯಿಸುತ್ತೆ. ಇದು ಈಗಿನಿಂದ ಬಂದಿರುವ ಪ್ರಕೃತಿ ನಿಯಮವಲ್ಲ ಜೀವಿಗಳ ಸಂತತಿಗಳು ಭೂಮಿಗೆ ಬಂದಾಗಿನಿಂದ ನಡೆದಿರುವ ಪದ್ಧತಿಯಾದರು ಈಗೀಗ ಹಲವು ಕೇಳಲು ಆಶ್ಚರ್ಯಕರವಾದ ವಿಷಯಗಳು ಬರುತ್ತಿವೆ. ಕೇವಲ ಹೆಣ್ಣು ಮಾತ್ರವಲ್ಲದೆ ಗಂಡಸರು ಕೂಡ ಮಗುವಿಗೆ ಜನ್ಮ ನೀಡಿದ ಉದಾಹರಣೆ ಇವೆ. ಇವೆಲ್ಲವನ್ನೂ ಮಿರುವಂತಹ ಒಂದು ಬೆಳವಣಿಗೆ ನಡೆದಿದ್ದು ಮಾನವ ಕುಲವೇ ತೀಕ್ಷ್ಣವಾಗಿ ವಿಚಾರದಲ್ಲಿ ಮುಳುಗುವ ಸಂಗತಿಯೊಂದು ತಿಳಿದಿದೆ.

Also read: ಸಮಾಜದಲ್ಲಿ ಎಲ್ಲರಿಂದಲೂ ಶೋಷಣೆಗೊಳಗಾಗಿರುವ ತೃತೀಯ ಲಿಂಗಿಗಳ ಪರವಾಗಿ ಹೋರಾಡುತ್ತಿರುವ ಅಕ್ಕ ಪದ್ಮಶಾಲಿಯವರ ಬಗ್ಗೆ ಓದಿ, ನಿಮಗೂ ಕಷ್ಟ ಎದರಿಸುವ ಸ್ಫೂರ್ತಿ ಬರುತ್ತೆ…

ಹೌದು ದೆಹಲಿಯ 28 ವರ್ಷದ ವಿಲೆ ಸಿಂಪಸನ್ ಎನ್ನುವ ತೃತೀಯ ಲಿಂಗಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸಿಂಪಸನ್ 2018ರ ಡಿಸೆಂಬರ್ ತಿಂಗಳಲ್ಲಿ ಸಿಜೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿ ತಾವು ಗರ್ಭ ಧರಿಸಿದ ಪ್ರತಿಯೊಂದು ಘಳಿಗೆಯ ಬಗ್ಗೆ ಬಿಚ್ಚಿಟ್ಟಿದ್ದಾರೆ. ತೃತೀಯ ಲಿಂಗಿಯಾಗಿರುವ ಸಿಂಪಸನ್ ಇತ್ತೀಚಿಗೆ ತಾವು ತಾಯಿಯಾದ ಅನುಭವ ಹಾಗೂ ಗರ್ಭ ಧರಿಸಿದ ಸಂದರ್ಭದಲ್ಲಿ ಜನರು ಹೇಗೆಲ್ಲ ತನ್ನನ್ನು ಅಣಕವಾಡಿದ್ದರು, ಅವಮಾನಿಸಿದ್ದರು ಎನ್ನುವ ನೋವನ್ನು ಸಹ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ನಾನು ಮಹಿಳೆಯಿಂದ ಪುರುಷನಾಗಿ ಬದಲಾಗುವ ಪ್ರಕ್ರಿಯೆಯಲ್ಲಿದ್ದಾಗ ಗರ್ಭ ಧರಿಸಿದ್ದು ಪತ್ತೆಯಾಗಿದೆ. ನಾನು ತಾಯಿಯಾಗುತ್ತಿರುವ ವಿಷಯ ತಿಳಿದು ಸಂಗಾತಿ‌ ಸ್ಟಿಫನ್ ಭೂಮಿ ಮೈಮೇಲೆ ಬಿದಂತೆ ವಿಚಲಿತರಾಗಿದ್ದರು.

ವಿಲೆ ಸಿಂಪಸನ್ ಜನ್ಮ ನೀಡಿದ ಅನುಭವ;

Also read: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಕಾಂಗ್ರೆಸ್​​ನ​ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ತೃತೀಯಲಿಂಗಿ ಅಪ್ಸರಾ ರೆಡ್ಡಿ ನೇಮಕ..

ಸುಮಾರು ಎಂಟು ವರ್ಷಗಳ ಹಿಂದೆ ಅಂದರೆ, 2012ರಿಂದ ನಾನು ಟೆಸ್ಟೋಸ್ಟೆರಾನ್ ತೆಗೆದುಕೊಳ್ಳುತ್ತಿದ್ದೆ. ಇದರಿಂದಾಗಿ ನನಗೆ ಅನೇಕ ವರ್ಷಗಳಿಂದ ಮುಟ್ಟಾಗಿರಲಿಲ್ಲ. ಸಹಜ ಪ್ರಕ್ರಿಯೆಗೆ ಒಳಗಾಗದಿದ್ದರೆ ಗರ್ಭ ಧರಿಸುವುದು ಅಸಾಧ್ಯ. ಹಾಗಿದ್ದಾಗಲೂ ನಾನು ಗರ್ಭಧರಿಸಿದ್ದೆ. ಅದು ನನಗೆ ನಂಬಲಸಾಧ್ಯವಾಗಿತ್ತು. ಆದರೂ ಅದು ಸತ್ಯವಾಗಿತ್ತು. ಈ ನಲವತ್ತರ ವಯಸ್ಸಲ್ಲಿ ಮಗುವನ್ನು ಸ್ವಾಗತಿಸುವುದು, ಅದರ ಪಾಲನೆ ಮಾಡುವುದು ಅಸಾಧ್ಯವೆಂದು ಜನರು ಸಾಕಷ್ಟು ಮೂದಲಿಸಿದರು. ಕೆಲವರು ಗರ್ಭಪಾತ ಮಾಡಿಸುವ ಬಿಟ್ಟಿ ಸಲಹೆಯನ್ನೂ ನೀಡಿದ್ದರು‌. ಅಲ್ಲದೆ, ಅನೇಕ ಅಪಮಾನವನ್ನು ಸಹ ಕೇಳಿದ್ದೆ. ಅವುಗಳ ನಡುವೆಯೇ ಮಗು ಗರ್ಭದಲ್ಲಿ ಬೆಳೆಯುತ್ತಾ ಹೋಯಿತು. 2018ರ ಡಿಸೆಂಬರ್ ತಿಂಗಳಲ್ಲಿ ಸಿಜೇರಿಯನ್ ಮೂಲಕ ನಾನು ಮಗುವಿಗೆ ಜನ್ಮ ನೀಡಿದೆ. ಖುಷಿಯಿಂದಲೇ ಜಗತ್ತಿಗೆ ಬರಮಾಡಿಕೊಂಡೆ. ನಾನು ತೃತೀಯ ಲಿಂಗಿಯಾಗಿ ಬದಲಾದರೂ, ನನ್ನ ದೇಹದಲ್ಲಿ ಹೆಣ್ಣಿನ ಪ್ರಜನನ ಅಂಗವಿದ್ದುದರಿಂದ ಹೀಗಾಯಿತು. ಆದರೆ, ಮಗು ಹೊಟ್ಟೆಯಲ್ಲಿದ್ದ 9 ತಿಂಗಳ ಜರ್ನಿ ನಿಜಕ್ಕೂ ಪ್ರಯಾಸದಾಯಕವಾಗಿತ್ತು. ರಸ್ತೆಯಲ್ಲಿ ಗರ್ಭಧಾರಿ ಪುರುಷ ಓಡಾಡುತ್ತಿರುವುದನ್ನು ನೋಡುವುದು ಜನರ ಪಾಲಿಗೆ ಸಾಮಾನ್ಯ ಸಂಗತಿಯೇ ಅಲ್ಲ. ಹೀಗಾಗಿ ಹಲವು ಬಾರಿ ನಾನು ತಮಾಷೆಯ ವಸ್ತುವಾಗಿದ್ದೆ ಎಂದು ತನ್ನ ನೋವನ್ನು ಸಿಂಪಸನ್ ತೋಡಿಕೊಂಡಿದ್ದಾರೆ. ನೀನು ಪುರುಷನೇ ಅಲ್ಲ. ಪುರುಷ ಗರ್ಭ ಧರಿಸಲು ಸಾಧ್ಯವಿಲ್ಲ. ಅಲ್ಲದೆ, ಮಗುವನ್ನು ಹುಟ್ಟಿಸಲು ಹೇಗೆ ಸಾಧ್ಯ? ಎಂದು ಜನರು ಪದೇ ಪದೇ ಪ್ರಶ್ನಿಸುತ್ತಿದ್ದರು. ಅದು ನನಗೆ ಭಾವನಾತ್ಮಕವಾಗಿ ಬಹಳ ಪೆಟ್ಟು ಬೀಳುವಂತೆ ಮಾಡುತ್ತಿತ್ತು. ಗರ್ಭದಲ್ಲಿರುವ ಮಗುವಿಗೆ ನನ್ನ ಭಾವೋದ್ವೇಗ ಪರಿಣಾಮ ಬೀರಬಾರದು ಎಂದು ಎಲ್ಲ ನೋವನ್ನು ಶಾಂತವಾಗಿ ನುಂಗಿಕೊಳ್ಳುತ್ತ ನಿಶ್ಚಿಂತೆಯಿಂದ ಇರುತ್ತಿದ್ದೆ. ಈಗ ಎಲ್ಲವೂ ಸರಿಯಾಗಿದೆ. ನಾನು ಮತ್ತು ಸ್ಟೀಫನ್ ಪಾಲಕತ್ವವನ್ನು ಎಂಜಾಯ್ ಮಾಡುತ್ತಿದ್ದೇವೆ. ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ನಾನು ಪುರುಷನಾಗಲಿದ್ದೇನೆ. ಹೀಗಾಗಿ ಮತ್ತೆ ತಾಯಿಯಾಗಲಾರೆ ಎಂದು ಸಿಂಪಸನ್ ಹೇಳಿಕೊಂಡಿದ್ದಾರೆ. ಇದೆಲ್ಲ ಏನೇ ಇದ್ದರು ಪ್ರಕೃತಿಯ ವಿರೋಧವಾಗಿ ಯಾವುದೇ ವಿಷಯ ಎಷ್ಟೇ ಒಳ್ಳೆಯದು ಇದ್ದರು ಅದು ಜನರ ಕೆಂಗಣ್ಣಿಗೆ, ಅಣುಕು ಮಾತಿಗೆ ಊಟವಾಗುವುದು ನಿಜವಲ್ಲವೆ?