ಮಂಗಳ ಮುಖಿಯೊಬ್ಬಳು ಕೆಲಸವನ್ನು ಗಿಟ್ಟಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೊಗಿ ಜಯ ಸಾಧಿಸಿದಕಥೆ ಇದು!!

0
775

ಮಂಗಳ ಮುಖಿಯೊಬ್ಬಳು ಕೆಲಸವನ್ನು ಗಿಟ್ಟಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೊಗಿ ಜಯ ಸಾಧಿಸಿದಕಥೆ ಇದು.

ಇವರ ಹೆಸರು ಪ್ರೀತಿಕಾ. ತಮಿಳುನಾಡು ಮೂಲದವರು. ಪ್ರೀತಿಕಾ 2015ರಲ್ಲಿ ಪೊಲೀಸ್ ಹುದ್ದೆಗೆ ಅರ್ಜಿಸಲ್ಲಿಸಿದ್ದರು. ಆಗ ಹೆಣ್ಣು ಮತ್ತು ಗಂಡು ವಿಭಾಗಕ್ಕೆ ಸೇರದೆ ಇರುವ ಕಾರಣ ಇವರ ಅರ್ಜಿ ತಿರಸ್ಕಾರಗೊಂಡಿತ್ತು. ಈ ನಿಲುವನ್ನು ಪ್ರಶ್ನಿಸಿದ ಇವರು ನ್ಯಾಯಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರೀತಿಕಾ 100ಮೀಟರ್ ಓಟದ ಸ್ಪರ್ಧೆಯಲ್ಲಿ 1.1 ಸೆಕೆಂಡ್ ತಡವಾಗಿ ನಿಗದಿತ ಗುರಿ ಮುಟ್ಟಿದ್ದರು. ಇದನ್ನೆಲ್ಲಾ ಪರಿಗಣಿಸಿದಕೋರ್ಟ್, ಮಂಗಳಮುಖಿಯರಿಗೆ ಅವಕಾಶ ನೀಡಬೇಕೆಂದು ಆದೇಶ ನೀಡಿತ್ತು. ಹೈಕೋರ್ಟ್ ಆದೇಶದಂತೆಸಿಟಿ ಪೊಲೀಸ್ ಆಯುಕ್ತರು ಪ್ರೀತಿಕಾ ಸೇರಿದಂತೆ 22 ಮಂಗಳಮುಖಿಯರಿಗೆ ಎಸ್ ಐ ಹುದ್ದೆಗೆನೇಮಕವಾಗುವಂತೆ ಸೂಚನೆ ನೀಡಿದರು.

ಪ್ರೀತಿಕಾ ಹೋರಾಟದ ಫಲವಾಗಿ ಈಗ ಧರ್ಮಪುರಿ ಜಿಲ್ಲೆಯ ಸಬ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ.ತಮ್ಮ ಮೊದಲ ದಿನದ ಅನುಭವ ಹಂಚಿಕೊಂಡ ಅವರು ಹಿರಿಯ ಹಾಗೂ ಸಹೋದ್ಯೊಗಿಗಳ ನೆರವಿನಿಂದನನಲ್ಲಿದ್ದ ಅಂಜಿಕೆ ದೂರವಾಗಿದೆ. ಮುಂದೆಯೂ ಉತ್ತಮ ರೀತಿಯಿಂದ ಕೆಲಸ ಮಾಡುವೆ. ಅಲ್ಲದೆ ಯುಪಿಎಸ್ಸಿ ಪರೀಕ್ಷೆ ಬರೆದು ಐಪಿಎಸ್ ಆಗಿ ಆಯ್ಕೆ ಯಾಗಬೇಕೆಂಬ ಕನಸು ನನ್ನದಾಗಿದೆ ಎಂದು ತಿಳಿಸಿದ್ದಾರೆ.

ಪ್ರೀತಿಕಾ ಹಿಂದಿನ ಕಥೆ ಏನು?

ಹುಟ್ಟಿದಾಗ ಇವರು ಗಂಡು ಮಗು.. ಇವರ ಹೆಸರು ಪ್ರದೀಪ್ ಕುಮಾರ್. ಪದವಿ ಮೂಗಿಸಿದ ಬಳಿಕ ಲಿಂಗಬದಲಾವಣೆ ಮಾಡಿಸಿಕೊಂಡಿದ್ದಾರೆ. ಇವರ ನಿರ್ಧಾರ ಪೋಷಕರಿಗೆ ಶಾಕ್ ನೀಡಿತು. ಪ್ರೀತಿಕಾ ಅವರನ್ನುಪ್ರದೀಪ್ ನನ್ನಾಗಿ ಮಾಡಲು ಹರಸಾಹಸ ಪಟ್ಟರು. ನಂತರ ಇದರಿಂದ ಬೇಸತ್ತು ಜೀವನ ನಿರ್ವಹಣೆಗೆ ಪಾಲಕರನ್ನು ಬಿಟ್ಟು ಬಂದಿದ್ದಾರೆ.