ರಾಜ್ಯದ ಶಿಕ್ಷಣದಲ್ಲಿ ಬದಲಾವಣೆ ಮಾಡಿ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಅತಂತ್ರಕ್ಕೆ ತಂದ ರಾಜ್ಯ ಸರಕಾರ

0
495

ಸರಕಾರಿ ಶಾಲೆಗಳ ಮೇಲೆ ರಾಜ್ಯ ಸರಕಾರದ ಹೊಸ ಗುನ್ನ, 70 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕ, ಅತಂತ್ರದ ಸ್ಥಿತಿಯಲ್ಲಿ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು. ಈ ಹೊಸ ಬದಲಾವಣೆ ನಿಯಮದಿಂದ ಗ್ರಾಮೀಣ ಪ್ರದೇಶದ ಮತ್ತು ಬಡಮಕ್ಕಳ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಕಲ್ಲು.

Also read: ಅಂದು ಕುರಿಕಾಯಿತ್ತಿದ ಹುಡುಗಿ ಇಂದು ಫ್ರಾನ್ಸ್​ ದೇಶದ ಶಿಕ್ಷಣ ಮಂತ್ರಿ; ಸಾಧನೆ ಮಾಡುವ ಮನಸ್ಸಿದ್ದರೆ ಒಂದು ಸಾರಿ ಈ ಕಥೆ ಓದಿ..

ಹೌದು ಶೈಕ್ಷಣಿಕ ವ್ಯವಸ್ಥೆಯಲ್ಲಿ ಮುಂದುವರಿದ ರಾಜ್ಯ ಎನಿಸಿಕೊಂಡಿರುವ ಕರ್ನಾಟಕ ಈ ಹಿಂದೆ 25 ಮಕ್ಕಳಿಗೊಬ್ಬರು ಶಿಕ್ಷಕರನ್ನು ಹೊಂದಿದ್ದ ಹೆಗ್ಗಳಿಕೆ ರಾಜ್ಯವಾಗಿತ್ತು. ಇಗ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿನ ವಿಭಾಗಳಲ್ಲಿ 70 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರಿದ್ದರೆ ಸಾಕು ಎನ್ನುವುದು ಶಿಕ್ಷಣ ಇಲಾಖೆಯ ವಿವಾದಾತ್ಮಕ ಹೇಳಿಕೆಯಾಗಿದೆ. ನಿಯಮ ಮಾಡಿ ಯಡವಟ್ಟು ಮಾಡಲು ಹೊರಟಿರುವುದು ಅಚ್ಚರಿ ಮೂಡಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯ (RTE) ಮಾನದಂಡ ಉಲ್ಲಂಘಿಸಿ, ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಸಂಖ್ಯೆಯ ನಿಯತ್ರಣ ಪ್ರಮಾಣದಲ್ಲಿ ರಾಜ್ಯ ಸರಕಾರ ಹೊಸದೊಂದು ಬದಲಾವಣೆ ತಂದಿದೆ ಇದರಿಂದ ಶಿಕ್ಷಣ ವ್ಯವಸ್ಥೆಯೇ ಹದಗೆಡುವ ಭಯ ಹರಡಿದೆ.

Also read: 10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುವುದಕ್ಕೆ ಕಾರಣರಾದವರು.. 5 ಕೋಟಿ ಗಿಡಗಳನ್ನು ನೆಟ್ಟವರು ಯಾರು ಗೊತ್ತಾ??

RTE ಪ್ರಕಾರ ಪ್ರಾಥಮಿಕ ಶಾಲೆಯಲ್ಲಿ 30 ಮಕ್ಕಳಿಗೊಬ್ಬರು ಶಿಕ್ಷಕರು ಹಾಗೂ ಪ್ರೌಢ ಶಾಲೆಯಲ್ಲಿ 35 ಮಕ್ಕಳಿಗೊಬ್ಬರು ಶಿಕ್ಷಕರಿರಬೇಕು ವಿಭಾಗ ನಿಯತ್ರಣಕ್ಕೆ ಒಬ್ಬ ಟೀಚರ್ಸ್ ಅಂದ್ರೆ 30:1ರ ಅನುಪಾತದಲ್ಲಿರಬೇಕು, ಈ ನಿಯಮವನ್ನು ಖಾಸಗಿ ಶಾಲೆಗಳು ಕಡ್ಡಾಯವಾಗಿ ಪಾಲಿಸುತ್ತಿವೆ. ಆದರೆ ಖಾಸಗಿ ಅನುದಾನಿತ ಶಾಲೆಗಳಲ್ಲಿ ನೇಮಕ ಮಾಡುವಾಗ ವಿದ್ಯಾರ್ಥಿಗಳು ಮತ್ತು ವಿಭಾಗಗಳ ಸಂಖ್ಯೆ 70:1ರ ಅನುಪಾತದಲ್ಲಿರಬೇಕು ಎಂಬ ನಿಯಮವನ್ನು ಕಡ್ಡಾಯ ಮಾಡಿತ್ತು. ಈ ನಿಯಮ ಸರಕಾರಿ ಅಥವಾ ಖಾಸಗಿ ಶಾಲೆಗಳಿಗೆ ಅನ್ವಯವಾಗುತ್ತಿರಲಿಲ್ಲ. ಆದರೆ ಪ್ರಸಕ್ತ ಸಾಲಿನಿಂದ ಈ ನಿಯಮವನ್ನು ಸರಕಾರಿ ಶಾಲೆಗಳಿಗೂ ಶಿಕ್ಷಣ ಇಲಾಖೆ ಅನ್ವಯ ಮಾಡಿದೆ.

Also read: ಹಗಲುದರೋಡೆಯಾಗಿದೆ ಇಂದಿನ ಶಿಕ್ಷಣ ವ್ಯವಸ್ಥೆ!!! ಪ್ರತಿಯೊಬ್ಬರೂ ಇದನ್ನು ಓದಲೇಬೇಕು!!!

70 ಮಕ್ಕಳಿಗೆ ಒಬ್ಬರೇ ಶಿಕ್ಷಕರು ಪಾಠ ಮಾಡುತ್ತಾರೆಂದರೆ ಅದನ್ನು ಊಹಿಸಿಕೊಳ್ಳುವುದೂ ಕಷ್ಟ. ಇದರ ಪ್ರಕಾರ 70ಕ್ಕಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿಗೆ ಒಂದು ವಿಭಾಗ, 71-140ರಷ್ಟು ವಿದ್ಯಾರ್ಥಿಗಳಿಗೆ 2 ವಿಭಾಗ, 141-210ರಷ್ಟು ವಿದ್ಯಾರ್ಥಿಗಳಿಗೆ 3 ವಿಭಾಗ, 211-280 ಸಂಖ್ಯೆ ವಿದ್ಯಾರ್ಥಿಗಳಿಗೆ 4 ವಿಭಾಗ ಹಾಗೂ 281-350 ವಿದ್ಯಾರ್ಥಿಗಳಿಗೆ 5 ವಿಭಾಗಗಳನ್ನಾಗಿ ಮಾಡಲು ಅವಕಾಶ ಕಲ್ಪಿಸಿದೆ. ಕಳೆದ 7-8 ವರ್ಷದಲ್ಲಿ ಗಣನೀಯ ಸಂಖ್ಯೆಯಲ್ಲಿ ಶಿಕ್ಷಕರು ನಿವೃತ್ತರಾಗಿದ್ದಾರೆ. ಹೊಸ ನೇಮಕಾತಿಇಲ್ಲ. ಹಾಗಾಗಿ ಅಂದಾಜು 15 ಸಾವಿರ ಶಿಕ್ಷಕರ ಕೊರತೆಇದ್ದು ಶಿಕ್ಷಕ ನೇಮಕ ಪ್ರಕ್ರಿಯೆ ಕೈಗೊಳ್ಳಲು ಸಾಧ್ಯವಾಗದ್ದರಿಂದ ಸರಕಾರ ಇಂಥ ಅವೈಜ್ಞಾನಿಕ ಕ್ರಮಮಾಡಿದೆ ಇದರಿಂದ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳೂ ಅವನತಿಯತ್ತ ಸಾಗಲಿವೆ. ವಿಶೇಷವಾಗಿ ಗ್ರಾಮೀಣ ಭಾಗದ ಶಾಲೆಗಳು ಸೊರಗಲಿವೆ. ಹಾಗೆಯೇ ಬಡ, ಮಧ್ಯಮ ವರ್ಗದಿಂದ ಬಂದಿರುವ ಮಕ್ಕಳು ತೊಂದರೆಗೆ ಒಳಗಾಗಿ ಶಿಕ್ಷಣದ ಗುಣಮಟ್ಟ ಕುಸಿಯುವುದರ ಜತೆಗೆ ಶಿಕ್ಷಕರ ಮೇಲಿನ ಒತ್ತಡ ಹೆಚ್ಚಲಿದೆ.

ಈ ನಿಯಮದ ವಿರುದ್ದ ‘ಶಿಕ್ಷಣ ತಜ್ಞ’ ‘ಡಾ.ವಿ.ಪಿ.ನಿರಂಜನಾರಾಧ್ಯ’ ಮಾತನಾಡಿ ಶೈಕ್ಷಣಿಕ ವರ್ಷ ಪ್ರಾರಂಭದ ಬಳಿಕ ಇಂಥ ಕ್ರಮ ಬೇಡ. ಪ್ರತಿ ವಿಷಯಕ್ಕೊಬ್ಬರು ಶಿಕ್ಷಕರನ್ನು ನೇಮಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿ, ಶಿಕ್ಷಕರ ನಡುವಿನ ಅನುಪಾತ ಕೇಂದ್ರದ ಮಾನದಂಡದಂತೆ ಇರಬೇಕು ಎಂದು ಆಗ್ರಹಿಸಲಾಗಿದೆ. ಹಾಗೇ ರಾಜ್ಯದ ತುಂಬೆಲ್ಲ ಶಿಕ್ಷಕರು ವಿರೋಧ ವ್ಯಕ್ತಪಡಿಸಿ ಮುಖ್ಯವಾಗಿ ಪ್ರೌಢಶಾಲೆಗಳ ಮೇಲೆ ಈ ನಿಯಮ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬಹುತೇಕ ಸರಕಾರಿ ಶಾಲೆಗಳು ಹಲವು ಕುಂದುಕೊರೆತಯ ನಡುವೆಯೇ ಉತ್ತಮ ಸಾಧನೆ ಮಾಡುತ್ತಿವೆ. ಇಂತಹ ಸಮಯದಲ್ಲಿ ಸಮಪ್ರಮಾಣದಲ್ಲಿರುವ ಶಿಕ್ಷಕರನ್ನು ಗುರುತಿಸಿ ವರ್ಗಾವಣೆ ಮಾಡಿದರೆ, ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಗೋಡೆ ಕಟ್ಟಿದಹಾಗೆ ಎಂಬ ವಿಷಯವನ್ನು ಬಿಚ್ಚಿಟ್ಟಿದ್ದಾರೆ.