ಕಲಾಪದ ಮಧ್ಯ ರಿಂಗ ರಿಂಗ roses ಆಟ ಆಟ ಆಡಿದ ಟಿಎಂಸಿ ಶಾಸಕ !!

0
569

ಅಗರ್ತಲಾ :  ಕಾಂಗ್ರೆಸ್ನ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ತೀವ್ರ ಇರಿಸು ಮುರಿಸು ಉಂಟು ಮಾಡುವಂತಹ ವಿದ್ಯಮಾನವೊಂದರಲ್ಲಿ ತ್ರಿಪುರ ವಿಧಾನಸಭೆಯಲ್ಲಿನ ಟಿಎಂಸಿ ಶಾಸಕ, ಕಲಾಪದ ಮಧ್ಯದಲ್ಲಿ, ತ್ರಿಪುರ ಸ್ಪೀಕರ್ ಅವರ ಸಾಂಕೇತಿಕ ಬೆಳ್ಳಿಯ ಲಾಂಛನವನ್ನು ಕಿತ್ತುಕೊಂಡು ಸದನದ ತುಂಬಾ ಓಡುತ್ತಾ, ಕಲಾಪವನ್ನು ತಡೆದ ವಿಲಕ್ಷಣಕಾರಿ ಘಟನೆ ನಡೆದಿದೆ.

ಆಳುವ ಸಿಪಿಐ-ಎಂ ಪಕ್ಷದ ನಾಯಕರು ಶಾಮಿಲಾಗಿದ್ದಾರೆ ಎನ್ನಲಾದ ರಾಸಲೀಲೆ ಪ್ರಕರಣದ ಬಗ್ಗೆ ಸದನದಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ತೃಣಮೂಲ ಪಕ್ಷದ ಶಾಸಕನಿಂದ ಈ ಅಚ್ಚರಿಯ ಕೃತ್ಯ ನಡೆಯಿತೆಂದು ವರದಿಗಳು ತಿಳಿಸಿವೆ.

ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ನ ಶಾಸಕರು ಸ್ಪೀಕರ್ ಅವರ ಪೋಡಿಯಂನತ್ತ ನುಗ್ಗಿ ಅರಣ್ಯ ಸಚಿವ ನರೇಶ್ ಜಮಾತಿಯಾ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು.

ಆಗ ಇದ್ದಕ್ಕಿದ್ದಂತೆಯೇ ಟಿಎಂಸಿ ಶಾಸಕ ಸುದೀಪ್ ರಾಯ್ ಬರ್ಮನ್ ಅವರು ಸ್ಪೀಕರ್ ಅವರ ಲಾಂಛನವನ್ನು ಕಿತ್ತುಕೊಂಡು ಸದನದ ಹೊರಗೆ ಓಡಲು ಮುಂದಾದರು. ಪರಿಣಾಮವಾಗಿ ಸದನ ಕಲಾಪ ಹಠಾತ್ತನೇ ನಿಲುಗಡೆಗೊಂಡಿತು.

ಸ್ಪೀಕರ್ ಅವರ ಲಾಂಛನವನ್ನು ಹಿಡಿದುಕೊಂಡು ಓಡುತ್ತಿದ್ದ ಬರ್ಮನ್ ಅವರನ್ನು ಕೂಡಲೇ ಸದನದ ಭದ್ರತಾ ಸಿಬಂದಿಗಳು ಬೆನ್ನಟ್ಟಿ ಸುಮಾರು ಅರ್ಧ ನಿಮಿಷದೊಳಗೆ ಆತನ ಕೈಯಲ್ಲಿದ್ದ ಲಾಂಛನವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಸ್ಪೀಕರ್ ರಾಮೇಂದ್ರ ದೇವನಾಥ್ ಅವರು ತಮ್ಮ ಚೇಂಬರ್ಗೆ ಮರಳುವ ಮೊದಲೇ ಭದ್ರತಾ ಸಿಬಂದಿಗಳು ಲಾಂಛನವನ್ನು ತಂದು ಅವರ ಮುಂದೆ ಇರಿಸಿದರು.

“ಬರ್ಮನ್ ಅವರು ಯಾವುದೇ ಪೂರ್ವ ಸೂಚನೆ ನೀಡದೆ ಶೂನ್ಯವೇಳೆಯಲ್ಲಿ ಲಾಸಲೀಲೆ ವಿಷಯವನ್ನು ಸದನದಲ್ಲಿ ಎತ್ತಿದ್ದರು. ಆಗ ವಿರೋಧ ಪಕ್ಷದವರು ಸದನದ ಬಾವಿಗೆ ಲಗ್ಗೆ ಇಟ್ಟು ಅಲ್ಲಿ ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಆಗಲೇ ಬರ್ಮನ್ ಅವರು ಸ್ಪೀಕರ್ ಅವರ ಲಾಂಛನವನ್ನು ಕಿತ್ತುಕೊಂಡು ಓಡಲು ಆರಂಭಿಸಿದರು. ಬರ್ಮನ್ ಅವರು ಈ ರೀತಿಯ ಕೆಟ್ಟ ಕೆಲಸವನ್ನು ಮಾಡಬಾರದಿತ್ತು’ ಎಂದು ಸ್ಪೀಕರ್ ಅವರು ತಮ್ಮ ಚೇಂಬರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ತ್ರಿಪುರಕ್ಕೆ 1972ರಲ್ಲಿ ಪೂರ್ಣ ಮಟ್ಟದ ರಾಜ್ಯ ಸ್ಥಾನಮಾನ ಸಿಕ್ಕಿತ್ತು. ಅಲ್ಲಿಂದೀಚೆಗೆ ವಿರೋಧ ಪಕ್ಷದ ಶಾಸಕರು ಸದನ ಕಲಾಪ ವೇಳೆ ಸ್ಪೀಕರ್ ಅವರ ಬೆಳ್ಳಿಯ ಲಾಂಛನವನ್ನು ಕಿತ್ತುಕೊಂಡು ಓಡಿದ ಮೂರು ಪ್ರಕರಣಗಳು ದಾಖಲಾಗಿವೆ.