ದಕ್ಷಿಣ ಭಾರತದ ಈ ಸುಂದರ ನಟಿ ಸ್ವತಃ ಶೌಚಾಲಯ ನಿರ್ಮಾಣ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ…

0
662

ಸ್ವಚ್ಛ ಭಾರತ ಅಭಿಯಾನ ಎಲ್ಲೆಡೆ ರಾರಾಜಿಸುತ್ತಿದೆ, ಜನರು ತಮ್ಮ ಅಕ್ಕ-ಪಕ್ಕದ ಸ್ಥಳದ ಸ್ವಚ್ಛತೆ, ಉದ್ಯಾನವನಗಳು ನಗರದ ರಸ್ತೆಗಳು, ಸಮುದ್ರ ದಂಡೆ ಹೀಗೆ ಹಲವಾರು ಕಡೆ ವಾರಕ್ಕೊಮ್ಮೆ ಸ್ವಚ್ಛತೆ ಅಭಿಯಾನದ ಸ್ವಯಂ ಸೇವಕರು ಅಥವಾ ವೋಲೆಂಟಿಯರ್ ಜೊತೆಗೂಡಿ ಮಾಡುತ್ತಿದ್ದಾರೆ. ಆದರೆ ಭಹುಭಾಷಾ ನಟಿಯೊಬ್ಬರು ತಮಿಳುನಾಡಿನ ಹಳ್ಳಿಯಲ್ಲಿ ತಾವೆ ನಿಂತು ಶೌಚಾಲಯ ಕಟ್ಟಲು ನೆರವಾಗಿದ್ದಾರೆ, ಯಾರು ಆ ನಟಿ ನೀವೇ ನೋಡಿ.

ನಟಿಯರು ಕೇವಲ ಚಿತ್ರಗಳಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯು ಹಿರೋಯಿನ್-ಗಳೆ ಎಂದು ನಿರೂಪಿಸಿದ್ದಾರೆ ದಕ್ಷಿಣ ಭಾರತದ ಬೆಡಗಿ ತ್ರಿಶಾ. ಕಂಚಿಪುರಂ ಜಿಲ್ಲೆಯ ನೆಮಾಲಿ ಗ್ರಾಮದಲ್ಲಿ ಜನರು ಶೌಚಾಲಯವಿಲ್ಲದೆ ನಿತ್ಯ ಪರಡತ್ತಿರುವುದು ಇವರ ಗಮನಕ್ಕೆ ಬರುತ್ತಿದಂತೆ ತಾವೆ ಆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ತಕ್ಷಣ ಶೌಚಾಲಯ ನಿರ್ಮಾಣ ಮಾಡಲು ಸೂಚಿಸಿದ್ದಾರೆ.

ನಟಿ ತ್ರಿಶಾ ನವೆಂಬರ್ ತಿಂಗಳಿನಿಂದ ಯುನಿಸೆಫ್ (ಯುನೈಟೆಡ್ ನೇಷನ್ಸ್ ಚಿಲ್ಡ್ರನ್ಸ್ ಫಂಡ್) ಜೊತೆಗೂಡಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ತಮ್ಮ ಮನೋಜ್ಞ ನಟನೆ ಮತ್ತು ಸೌಂದರ್ಯದ ಮೂಲಕ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿಗಳಿಸಿರುವ ತ್ರಿಶಾ ಈಗ ರಕ್ತಹೀನತೆ, ಬಾಲ್ಯ ವಿವಾಹ, ಬಾಲಕಾರ್ಮಿಕ ಹಾಗು ಮಕ್ಕಳ ಮೇಲಿನ ದೌರ್ಜನ್ಯ ಕುರಿತು ತಮಿಳುನಾಡು ಮತ್ತು ಕೇರಳದಲ್ಲಿ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ.

ತ್ರಿಶಾ ಇಟ್ಟಿಗೆ ಹಾಗು ಸಿಮೆಂಟ್-ನಿಂದ ಶೌಚಾಲಯ ನಿರ್ಮಿಸುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೆ ಸದ್ದು ಮಾಡುತ್ತಿವೆ. ತ್ರಿಶಾಳ ಈ ಒಳ್ಳೆ ಕೆಲಸಕ್ಕೆ ಜನ ಅವರಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಗ್ರಾಮದ ಜನರಂತು ತಮ್ಮ ಕಷ್ಟಕ್ಕೆ ನೇರವಾದ ನಟಿಯ ಸಮಾಜಮುಖಿ ಕಾರ್ಯಕ್ಕೆ ತುಂಬಾನೆ ಖುಷಿಯಾಗಿದ್ದಾರೆ.

ಒಟ್ಟಿನಲ್ಲಿ ಖ್ಯಾತ ನಟಿಯಾಗಿಯು ತ್ರಿಶಾ ಈ ರೀತಿ ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವುದು ನಿಜಕ್ಕೂ ಇತರರಿಗೆ ಮಾದರಿಯಾಗಿದೆ.