ಟ್ರೂಕಾಲರ್ ಬಳಕೆದಾರರಿಗೆ ಬಿಗ್ ಶಾಕ್; APP ಬಳಕೆದಾರರ ಅನುಮತಿಯಿಲ್ಲದೆಯೇ, UPI ಸೇವೆಗೆ ನೋಂದಾಯಿಸಿದ ಕಂಪನಿ..

0
382

ಸ್ಮಾರ್ಟ್ ಫೋನ್ ಬಂದಾಗಿಂದ ಹಲವು app- ಗಳು ಹುಟ್ಟಿಕೊಳ್ಳುತ್ತಿದ್ದು, ಬಳಕೆದಾರರಿಗೆ ಹಲವು ಅನುಕೂಲತೆ ಆಗಿದೆ. ಆದರೆ ಕೆಲವು ದಿನಗಳಿಂದ ಹರಡಿದ ಸುದ್ದಿಯಂತೆ app-ಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕದಿಯುತ್ತಿದ್ದಾರೆ. ಎನ್ನುವ ಭಯವನು ಹುಟ್ಟಿಸಿತ್ತು, ಇಂತಹದೆ ಆಘಾತವನ್ನು ನೆಚ್ಚಿನ ಟ್ರೂಕಾಲರ್ app ನೀಡಿದ್ದು ಬಳಕೆದಾರರ ಅನುಮತಿಯಿಲ್ಲದೆಯೇ, ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಸೇವೆಗೆ ಅವರನ್ನು ಸ್ವಯಂಚಾಲಿತವಾಗಿ ನೋಂದಾಯಿಸಿ ಎಡವಟ್ಟು ಮಾಡಿದ್ದಾರೆ ಎನ್ನುವ ಬಗ್ಗೆ ಬಳಕೆದಾರರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

true caller2

Also read: ಕಲಿಕಾ ಆ್ಯಪನ್ನು ಅಭಿವೃದ್ಧಿಪಡಿಸಿ ಭಾರತದ ನೂತನ ಬಿಲಿಯನೇರ್ ಆದ ಬೆಂಗಳೂರಿನ ಶಿಕ್ಷಕ; ಸಾಧನೆ ಮಾಡುವವರಿಗೆ ಸ್ಪೂರ್ತಿಯಾಗಿದ್ದಾರೆ..

ಏನಿದು ಟ್ರೂಕಾಲರ್ ಸಂಕಷ್ಟ?

ತಮ್ಮ ಮೊಬೈಲ್‌ಗೆ ಕರೆ ಮಾಡುವವರ ಮಾಹಿತಿಯನ್ನು ತಿಳಿಸುವ Truecaller ಆ್ಯಪ್, ಸರ್ವೇಸಾಮಾನ್ಯವಾಗಿ ಬಿಟ್ಟಿದೆ. 100 ಮಿಲಿಯನ್‌ಕ್ಕಿಂತಲೂ ಹೆಚ್ಚು ಮಂದಿ ಈ ಆ್ಯಪನ್ನು ತಮ್ಮ ಫೋನ್‌ಗಳಲ್ಲಿ ಬಳಸುತ್ತಿದ್ದಾರೆ. ಆ್ಯಂಡ್ರಾಯಿಡ್ ಸ್ಮಾರ್ಟ್‌ಫೋನ್‌ಗಳಲ್ಲಿ Truecaller ಬಳಸುವವರಿಗೆ ಇಂದು ಬೆಳ್ಳಂಬೆಳಗ್ಗೆ ಶಾಕ್ ಸಿಕ್ಕಿದೆ. ಟ್ರೂಕಾಲರ್ ತನ್ನ ಆ್ಯಪ್ ಬಳಕೆದಾರರ ಅನುಮತಿಯಿಲ್ಲದೇ, ICICI ಬ್ಯಾಂಕಿನಲ್ಲಿ UPI ಖಾತೆಯನ್ನು ತೆರೆದಿದೆ. Truecaller ಇತ್ತೀಚೆಗೆ 10.41.6. ಅಪ್ಡೇಟನ್ನು ಬಿಡುಗಡೆ ಮಾಡಿತ್ತು. ಆ ಬಳಿಕ ಈ ಸಮಸ್ಯೆ ಎದುರಾಗಿದೆ. 2017ರಲ್ಲಿ UPI ಆಧಾರಿತ ಮೊಬೈಲ್ ಪಾವತಿ ಸೇವೆಯನ್ನು ಆರಂಭಿಸಲು, Truecaller ಕಂಪನಿಯು ICICI ಬ್ಯಾಂಕ್ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದ ಬಗ್ಗೆ ಗ್ರಾಹಕರಿಗೆ ಸಂದೇಶ ಬಂದಿದೆ.

ಹಣ ಕಳೆದುಕೊಳ್ಳುವ ಭಯದಲ್ಲಿ ಗ್ರಾಹಕರು?

true caller2

Also read: ಯಾವಾಗ್ಲೂ ಮೊಬೈಲ್ ಲಾಕ್, ಆನ್ ಮಾಡ್ತಿರ್ತೀರಾ..? ಹಾಗಾದ್ರೆ ಇಲ್ಲಿದೆ ನೋಡಿ ದುಡ್ ಮಾಡೋ ಆ್ಯಪ್..

ಟ್ರೂಕಾಲರ್ ಆ್ಯಪ್ ಬಳಕೆದಾರರ ಬಳಿ ಐಸಿಐಸಿಐ ಬ್ಯಾಂಕ್ ಖಾತೆ ಇಲ್ಲದಿದ್ದರೂ ಕೂಡ ಹಲವಾರು ಬಳಕೆದಾರರಿಗೆ ಯುಪಿಐ ನೋಂದಾವಣೆಯನ್ನು ಸ್ವಯಂಚಾಲಿತವಾಗಿ ಆರಂಭಿಸಲಾಗಿತ್ತು. ಈ ಬಗ್ಗೆ ಸಾಕಷ್ಟು ಮಂದಿ ಟ್ವಿಟರ್, ಫೇಸ್‌ಬುಕ್‌ನಲ್ಲಿ ಆಕ್ರೋಶ ಹೊರಹಾಕಿದ್ದು. ಸ್ವಯಂಚಾಲಿತವಾಗಿ ಯುಪಿಐ ರಿಜಿಸ್ಟ್ರೇಶನ್ ಆರಂಭಿಸುವ ನಿಟ್ಟಿನಲ್ಲಿ ಟ್ರೂಕಾಲರ್ ಆ್ಯಪ್, ಐಸಿಐಸಿಐ ಬ್ಯಾಂಕಿಗೆ ಎನ್‌ಕ್ರಿಪ್ಟ್ ಆಗಿರುವ ಸಂದೇಶವನ್ನು ಕಳುಹಿಸಿದ್ದು, ಇದರಿಂದಾಗಿ ಐಸಿಐಸಿಐ ಬ್ಯಾಂಕಿನಿಂದ ಎಲ್ಲ ಬಳಕೆದಾರರಿಗೆ ಎಸ್ಎಂಎಸ್ ಬಂದಿತ್ತು. ಈ ಎಸ್ಸೆಮ್ಮೆಸ್‌ನಲ್ಲಿ, “ಯುಪಿಐ ಆ್ಯಪ್‌ಗೆ ನಿಮ್ಮ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ” ಎಂಬ ಒಕ್ಕಣೆಯಿತ್ತು. ಹಿನ್ನೆಲೆಯಲ್ಲಿ ಏನಾಗಿತ್ತು ಎಂಬುದರ ಅರಿವಿಲ್ಲದೆ, ತಮ್ಮ ಖಾತೆಯ ಗೌಪ್ಯತೆ ಬಯಲಾಗಿದೆ, ಬ್ಯಾಂಕ್ ಖಾತೆಯಿಂದ ಹಣ ಕಳೆದುಹೋಗಬಹುದು ಎಂಬ ಆತಂಕದಲ್ಲಿ ಹೆಚ್ಚಿನ ಟ್ರೂಕಾಲರ್ ಬಳಕೆದಾರರು ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ (ಎನ್‌ಪಿಸಿಐ) ಹಾಗೂ ತಮ್ಮ ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರ ಸಂಪರ್ಕಿಸತೊಡಗಿದರು. ಸೋಷಿಯಲ್ ಮೀಡಿಯಾದಲ್ಲಿ ಕೂಡ ಟ್ರೂಕಾಲರ್ ವಿರುದ್ಧ ವಾರ್ ನಡೆದುಹೋಗಿದೆ.

ತಪ್ಪು ಒಪ್ಪಿಕೊಂಡ ಟ್ರೂಕಾಲರ್

true caller2

Also read: ಮತ್ತೆ tiktok, Hello ಆ್ಯಪ್‌ ನಿಷೇಧ? ಕೇಂದ್ರ ಸರ್ಕಾರದಿಂದ ನೋಟಿಸ್‌ ಜಾರಿ; ಎರಡು app -ಗಳಿಂದ ದೇಶದ್ರೋಹಿ ಚಟುವಟಿಕೆ ಶಂಕೆ..

ತಕ್ಷಣ, ಈ ವಿಷಯವನ್ನುNational Payments Corporation of India (NPCI), ICICI ಬ್ಯಾಂಕ್ ಮತ್ತು Truecaller ಗಮನಕ್ಕೆ ತಂದರು. NPCI ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದರೆ, ಬೇರಾರೂ ದೂರಿಗೆ ಸ್ಪಂದಿಸಲಿಲ್ಲ. ಬಳಿಕ, ಈ ಎಡವಟ್ಟಿನ ಬಗ್ಗೆ ಸ್ಪಷ್ಟೀಕರಣ ನೀಡಿರುವ Truecaller, ಇದೊಂದು ಬಗ್‌ನಿಂದ ಆಗಿರುವ ತಾಂತ್ರಿಕ ದೋಷ ಎಂದು ಹೇಳಿದೆ. ಈ ಸಮಸ್ಯೆಯನ್ನು ಸರಿಪಡಿಸುತ್ತಿದ್ದೇವೆ ಎಂದು ಹೇಳಿದೆ. ಬ್ಯಾಂಕಿಂಗ್ ಅಥವಾ ಪಾವತಿ ಆ್ಯಪ್‌ಗಳ ಮೂಲಕ ಹಣ ವ್ಯವಹಾರ ಮಾಡಬೇಕಾದರೆ Unified Payment Interface (UPI) ಖಾತೆಯನ್ನು ತೆರೆಯಬೇಕಾಗುತ್ತದೆ. UPI ಖಾತೆಯಿದ್ದರೆ, ಹೆಚ್ಚಿನ ಕಿರಿಕಿರಿಯಿಲ್ಲದೇ ತಕ್ಷಣ ಹಣ ಪಾವತಿ ಮಾಡಬಹುದಾಗಿದೆ ಎಂದು ತಿಳಿಸಿದೆ.