ಖದೀಮರು ಈಗ ಟ್ರೂ ಕಾಲರ್ ಬಳಸಿ ನಿಮ್ಮ ಹಣವನ್ನು ದೋಚುತ್ತಿದ್ದಾರೆ, ಅದರಿಂದ ಪಾರಾಗುವ ಬಗೆ ಹೇಳ್ತೀವಿ ಓದಿ..

0
947

ಟೆಕ್ನಲಾಜಿ ಹೆಚ್ಚುತ್ತಿರುವ ಈಗಿನ ಕಾಲದಲ್ಲಿ ಎಲ್ಲರ ಬಳಿ ಸ್ಮಾರ್ಟ್-ಫೋನ್ ಇದ್ದೆ ಇರುತ್ತದೆ, ಕೆಲವರಂತೂ ಒಂದು ಸಾಲಲ್ಲ ಅಂತ ಎರಡು ಮೊಬೈಲ್ ಖರೀದಿಸುತ್ತಾರೆ. ಈ ಎಲ್ಲ ಸ್ಮಾರ್ಟ್-ಫೋನ್ ನಲ್ಲಿ ನಿಮಗೆ ಕಾಣಸಿಗುವ ಒಂದು ಸಾಮಾನ್ಯ ಆಪ್ ಎಂದರೆ ಅದು “ಟ್ರೂ ಕಾಲರ್ ಕಾಲರ್ ಐಡೆಂಟಿಟಿ ಆಪ್”. ಆದರೆ ಇದರಿಂದ ಏನಾಗಿದೆ ಗೊತ್ತಾ.

ಟ್ರೂ ಕಾಲರ್ ಆಪ್ ಒಂದು ಉತ್ತಮ ಮೊಬೈಲ್ ಆಪ್ ಆಗಿದೆ ಜನರಿಗೆ ಬೇಕಿರುವ ಎಲ್ಲ ಮಾಹಿತಿಯನ್ನು ಕ್ಷಣಗಳಲ್ಲಿ ನೀಡುತ್ತದೆ. ನಿಮಗೆ ಗೊತ್ತಿರದ ಮೊಬೈಲ್ ನಂಬರ್ ಗಳನ್ನು ಗುರುತಿಸುತ್ತದೆ ಹಾಗು ಫೇಕ್ ಅಥವಾ ಅಪಾಯಕಾರಿ ಕರೆ ಬಂದಾಗ ನಿಮ್ಮನ್ನು ಎಚ್ಚರಿಸುತ್ತದೆ. ಜನರು ಕೂಡ ಈ ಆಪ್ ಅನ್ನು ತುಂಬಾನೆ ನಂಬಿ ಬಳಸುತ್ತಿದ್ದಾರೆ, ಇದು ಎಷ್ಟು ಸರಿಯಾಗಿ ಮಾಹಿತಿ ನೀಡುತ್ತೆ ಅಂತ ಯಾರಿಗಾದರೂ ಗೊತ್ತಾ.

true caller2

ಜನರಿಂದ ಮಾಹಿತಿ ಸಂಗ್ರಹಿಸುವ ಈ ಆಪ್ ನಲ್ಲಿ ಕೆಲವು ಫೀಚೆರ್ ಗಳಿವೆ ಅವುಗಳನ್ನು ದುರುಪಯೋಗ ಪಡಿಸಿಕೊಂಡು ಅಥವಾ ಹ್ಯಾಕ್ ಮಾಡಿಕೊಂಡು ಕೆಲವರು ಜನರ ಮಾಹಿತಿಯನ್ನು ಲಪಟಾಯಿಸುತ್ತಿದ್ದಾರೆ, ಇದರಿಂದ ಜನರಿಗೆ ತಮಗೆ ಗೊತ್ತಿಲ್ಲದ ಹಾಗೆ ತಾವು ಕಷ್ಟಪಟ್ಟು ದುಡಿದ ಹಣ ಮಾಯವಾಗುತ್ತಿದೆ ಅದು ಹೇಗೆ ಅಂತೀರ ಮುಂದೆ ಓದಿ.

ಟ್ರೂ ಕಾಲರ್ ನಲ್ಲಿ ಯಾರು ಬೇಕಾದರೂ ತಮ್ಮ ಖಾತೆ ತೆರೆಯಬಹುದು ಮತ್ತು ಅದರಲ್ಲಿ ನಿಮಗಿಷ್ಟವಾದ ಹೆಸರನ್ನು ಇಡಬಹುದು. ಇದರಿಂದ ನೀವು ಯಾರಿಗಾದರೂ ಕರೆ ಮಾಡಿದರೆ ಅವರಿಗೆ ನೀವು ಟ್ರೂ ಕಾಲರ್ ನಲ್ಲಿ ನೀಡಿದ ಹೆಸರು ಕಾಣಿಸುತ್ತದೆ. ಉದಾಹರಣೆಗೆ ನೀವು ಮುಖ್ಯಮಂತ್ರಿ ಎಂದು ಖಾತೆಯಲ್ಲಿ ಸೇವ್ ಮಾಡಿದರೆ ನೀವು ಯಾರಿಗಾದರೂ ಕರೆ ಮಾಡಿದರೆ ಅವರಿಗೆ ಮುಖ್ಯಮಂತ್ರಿ ಕರೆ ಮಾಡುತ್ತಿದ್ದಾರೆ ಎಂದು ಅವರ ಮೊಬೈಲ್ ಸ್ಕ್ರೀನ್ ಮೇಲೆ ತೋರಿಸುತ್ತದೆ.

true caller2

ಟ್ರೂ ಕಾಲರ್ ನಲ್ಲಿರುವ ಇಂತಹ ಫೀಚೆರ್ ಅನ್ನು ಬಳಸಿ ಖದೀಮರು ತಮ್ಮ ಖಾತೆಯಲ್ಲಿ ಬ್ಯಾಂಕ್, ಬ್ಯಾಂಕ್ ಮ್ಯಾನೇಜರ್ ಅಥವಾ ಬ್ಯಾಂಕ್ ಸಿಬ್ಬಂದಿ ಎಂದು ಹೆಸರು ನೀಡಿ ಜನರಿಗೆ ಕರೆ ಮಾಡಿ ಅವರ ಬ್ಯಾಂಕ್ ಅಕೌಂಟ್, ATM ಕಾರ್ಡ್ ನಂಬರ್ ಪಿನ್ ಅಥವಾ ಪಾಸ್ವರ್ಡ್ ಅನ್ನು ಕರೆಮಾಡಿ ಸುಲಭವಾಗಿ ಪಡೆಯುತ್ತಿದ್ದಾರೆ.

ಜನ ಇಂತಹ ನಂಬರ್ ನಿಂದ ಕರೆ ಬಂದಾಗ ಮರುಕ್ಷಣವು ಯೋಚಿಸದೆ ಬ್ಯಾಂಕ್ ನವರು ಎಂದು ನಂಬಿ ಎಲ್ಲಾ ಮಾಹಿತಿಯನ್ನು ನೀಡಿಬಿಡುತ್ತಾರೆ. ಕರೆ ಮಾಡುವ ಖದೀಮರು ಸಹ ನಿಮ್ಮ ATM ಕಾರ್ಡಿನ ವಾಯಿದೆ ಮುಗಿದಿದೆ ಅಥವಾ ಬ್ಯಾಂಕ್ ಅಕೌಂಟ್ ಬ್ಲಾಕ್ ಆಗಿದೆ ಅಥವಾ ಕ್ರೆಡಿಟ್ ಕಾರ್ಡ್ ನವೀಕರಿಸಬೇಕಿದೆ ಇಲ್ಲವಾಲಾದರೆ ನಿಮ್ಮ ಅಕೌಂಟ್ ನಿಷ್ಕ್ರಿಯೆ ಗೊಳ್ಳುತ್ತದೆ ಎಂದು ಚೆನ್ನಾಗಿಯೇ ಮಾತನಾಡಿ ಮಾಹಿತಿ ಪಡೆದುಕೊಳ್ಳುತ್ತಾರೆ.

ಇದು ಕೇವಲ ಜನ ಸಾಮಾನ್ಯರಿಗೆ ಆದ ತೊಂದರೆಯಲ್ಲ ಇತ್ತೀಚಿಗೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗೂ ಸಹ ಬ್ಯಾಂಕ್ ನವರು ಎಂದು ಕರೆ ಮಾಡಿ ನಿಮ್ಮ ATM ಕಾರ್ಡ್ ನವೀಕರಿಸಬೇಕಿದೆ ಎಂದು ಬ್ಯುಸಿಯಾಗಿದ್ದ ವೇಳೆಯಲ್ಲಿ ಎಲ್ಲ ಮಾಹಿತಿ ಪಡೆದು ಸಾವಿರಾರು ರೂಪಾಯಿಗಳನ್ನು ಕ್ಷಣಗಳಲ್ಲಿ ಎಗರಿಸಿದ್ದಾರೆ.

true caller2

ಒಟ್ಟಿನಲ್ಲಿ ಈ ಆಪ್ ನಲ್ಲಿ ತೋರಿಸುವ ಎಲ್ಲ ಮಾಹಿತಿ ಸರಿಯಾಗಿದೆ ಎಂದು ನಂಬಿದರೆ ಹಣ ಕಳೆದು ಕೊಳ್ಳುವುದಂತು ಖಚಿತ..!!

ಹಾಗು ಓದಿ ನಿಮ್ಮ ಫೋನಿನ ಪಾಸುವರ್ಡ್ ಅಥವಾ ಪಿನ್ ಮರೆತು ಹೋದರೆ ಪ್ರಪಂಚವೇ ಕಳೆದು ಹೋದಂತಾಗುತ್ತೆ ಅಲ್ವಾ, ಹೀಗೆ ಮಾಡಿ ಪಿನ್ ರಿಸೆಟ್ ಮಾಡಬಹುದು..