ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ನೂತನ ಆದೇಶಕ್ಕೆ ಸಹಿ

0
558

ಡೊನಾಲ್ಡ್ ಟ್ರಂಪ್ ಇಂದು ನೂತನ ಆದೇಶಕ್ಕೆ ಸಹಿ ಹಾಕಲಿದ್ದು .ಎಚ್-1ಬಿ ವೀಸಾ ನೀಡುವ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡುವ ಸಂಬಂಧ ಟ್ರಂಪ್ ಇಂದು ವಿಸ್ಕಾನ್​ಸಿನ್​ನ ಮಿಲವಾಕೆಗೆ ಭೇಟಿ ನೀಡಲಿದ್ದು, ಅಲ್ಲಿ ‘ಅಮೆರಿಕದ ಉತ್ಪನ್ನವನ್ನೇ ಖರದಿಮಾಡಿ , ಅಮೆರಿಕದವರಿಗೇ ಉದ್ಯೋಗ ನೀಡಿ’ ಆದೇಶಕ್ಕೆ ಸಹಿ ಹಾಕಲಿದ್ದಾರೆ ಎಂದು ತಿಳುದುಬಂದ್ದಿದೆ .

ಈ ಆದೇಶದಿಂದಾಗಿ ಎಚ್-1ಬಿ ವೀಸಾ ನೀಡುವ ನಿಯಮಾವಳಿಗಳು ಮತ್ತಷ್ಟು ಬಿಗಿಯಾಗಲಿದ್ದು, ಐಟಿ ಕಂಪನಿಗಳಿಗೆ ಭಾರತ ಸೇರಿದಂತೆ ಹೊರ ದೇಶಗಳಿಂದ ಉದ್ಯೋಗಿಗಳನ್ನು ಅಮೆರಿಕಕ್ಕೆ ಬರಮಾಡಿಕೋಳ್ಳುವುದು ಕಷ್ಟವಾಗಲಿದೆ.

ಎಚ್-1ಬಿ ವೀಸಾಗಳನ್ನು ಲಾಟರಿ ಮೂಲಕ ವಿತರಿಸುವುದರಿಂದ ಐಟಿ ಕಂಪನಿಗಳು ಕಡಿಮೆ ಸಂಬಳಕ್ಕೆ ವಿದೇಶಿ ಉದ್ಯೋಗಿಗಳನ್ನು ಕರೆ ತರುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಕೆಲಸ ಸಿಗುತ್ತಿಲ್ಲ. ದೇಶದ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಗಳ ಅವಶ್ಯಕತೆಯನ್ನು ಪೂರೈಸುವಷ್ಟು ನುರಿತ ಕೆಲಸಗಾರರು ನಮ್ಮಲ್ಲೇ ಲಭ್ಯರಿದ್ದಾರೆ.

ಹಾಗಾಗಿ ವೀಸಾ ನೀಡುವ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ವೈಟ್ ಹೌಸ್​ನ ಅಧಿಕಾರಿಗಳು ತಿಳಿಸಿದ್ದಾರೆ. 2018ನೇ ಆರ್ಥಿಕ ವರ್ಷದ ಎಚ್-1ಬಿ ವೀಸಾಗಾಗಿ 1,99,000 ಅರ್ಜಿಗಳು ಬಂದಿದ್ದು, ಮುಂದಿನ ಹಂತದ ಪ್ರಕ್ರಿಯೆಗಾಗಿ ಅರ್ಜಿಗಳ ವಿಂಗಡಣೆ ಕಾರ್ಯ ಮುಗಿದಿದೆ ಎಂದು ಯುಎಸ್​ಸಿಐಎಸ್ ಪ್ರಕಟಿಸಿದ ಮರುದಿನವೇ ಟ್ರಂಪ್ ಹೊಸ ಆದೇಶಕ್ಕೆ ಸಹಿ ಹಾಕುವ ಕುರಿತು ಮಾಹಿತಿ  ವರದಿಯಾಗಿದೆ.