ಭಾರತ ಅಂದ್ರೆ ಆಗಲ್ವಾ ಈ ಟ್ರಂಪ್ ಗೆ…!!

0
760

ಹೀಗೊಂದು ವಿಚಾರ ಎಲ್ಲರ ತಲೆಯಲ್ಲೂ ಓಡಾಡ್ತಿದೆ… ಹೌದು, ಇತ್ತೀಚೆಗೆ ಟ್ರಂಪ್ ತೆಗೆದುಕೊಂಡ ಕೆಲ ನಿರ್ದಾರಗಳನ್ನು ನೋಡ್ತಿದ್ರೆ ಎಲ್ಲರಿಗೂ ಹಾಗೆನ್ನಿಸದೆ ಇರದು. ಟ್ರಂಪ್ ಅವರ ಆಡಳಿತ ವೈಖರಿ ಭಾರತೀಯ ಐಟಿ ಕ್ಷೇತ್ರದ ಮೇಲೆ ದುಷ್ಪರಿಣಾಮಗಳು ಬೀರುವ ಸಾಧ್ಯತೆಗಳೂ ಇವೆ ಎಂಬುದನ್ನು ಅಲ್ಲಗೆಳೆಯಲಾಗದು, ಈಗಾಗಲೇ ಟ್ರಂಪ್ ಕೈಗೊಳ್ಳಬಹುದಾದ ನೀತಿಗಳಿಂದಾಗಿ ಷೇರುಪೇಟೆ, ಹಣದುಬ್ಬರದ ಮೇಲೆ ಭಾರಿ ಪರಿಣಾಮಗಳೇ ಉಂಟಾಗಿವೆ ಎಂಬುದನ್ನು ನಾವು ಮರೆಯಬಾರದು.

ಹೊಸ ವೀಸಾ ನೀತಿ :

H1-B ವೀಸಾದ ಅಡಿಯಲ್ಲಿ ಪ್ರತಿ ವರ್ಷ ಭಾರತದ ಐಟಿ ಇಂಡಸ್ಟ್ರಿ ಲಕ್ಷ ಲಕ್ಷ ಉದ್ಯೋಗಿಗಳನ್ನು ಯುಎಸ್ ಗೆ ಕಳುಹಿಸಿಕೊಡುತ್ತದೆ. ಇದರಿಂದಾಗಿ ಅಮೆರಿಕನ್ನರ ಉದ್ಯೋಗದ ಅವಕಾಶಗಳಿಗೆ ಹಾನಿ ಮಾಡಿದಂತಾಗುತ್ತದೆ ಎನ್ನುವುದು ಡೊನಾಲ್ಡ್ ಟ್ರಂಪ್ ಅಭಿಪ್ರಾಯ. H1-B ವೀಸಾ ಅಮೆರಿಕಾದ ಕಂಪನಿಗಳಲ್ಲಿ ಕೆಲಸ ಮಾಡಲು ವಿದೇಶದಿಂದ ತಜ್ಞ ನೌಕರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕಾದ ಕೆಲಸಗಾರರಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವುದು ಟ್ರಂಪ್ ವಾದ. ಟ್ರಂಪ್ ಅಧಿಕಾರಕ್ಕೆ ಬಂದ ಕೂಡಲೇ ಇದಕ್ಕೆ ಕತ್ತರಿ ಹಾಕಬಹುದು!!

ಭಾರಿ ಹೊಡೆತ ಬೀಳುತ್ತೆ :

ಅಮೆರಿಕಕ್ಕೆ ಹೋಗಲು ವರವಾಗಿದ್ದ ಎಚ್1- ಬಿ ವೀಸಾವನ್ನು ತೆಗೆದು ಹಾಕಿದಲ್ಲಿ ಸುಮಾರು 150 ಬಿಲಿಯನ್ ಡಾಲರ್ ಐಟಿ ಸೇವಾ ಕ್ಷೇತ್ರ ಆತಂಕ ಎದುರಿಸಲಿದೆ. ವೀಸಾ ನೀತಿಯ ಹಿನ್ನೆಲೆಯಲ್ಲಿ ಅಮೆರಿಕಾದ ಸ್ಥಳೀಯರಿಗೆ ಮಾತ್ರ ಉದ್ಯೋಗ ಯೋಜನೆಗಳನ್ನು ಜಾರಿಗೊಳಿಸಿದರೆ ಟಿಸಿಎಸ್, ಇನ್ಫೋಸಿಸ್ ಹಾಗೂ ವಿಪ್ರೋಗೆ ಸೇರಿದಂತೆ ದೇಶದ ಐಟಿ ಕಂಪನಿಗಳ ಮೇಲೆ ಭಾರಿ ಹೊಡೆತ ಬೀಳಲಿದೆ.

ಭಾರತ ಮಾದರಿಯ ಕ್ಯಾಂಪಸ್ ಸೆಲೆಕ್ಷನ್ ನೆಡೆಸಬಹುದು :

ಹೌದು, ಭಾರತದಲ್ಲಿ ಕ್ಯಾಂಪಸ್ ಸಂದರ್ಶನ ಕೈಗೊಳ್ಳುವಂತೆ ಸ್ಥಳೀಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಅಮೆರಿಕದಲ್ಲೇ ಕ್ಯಾಂಪಸ್ ಸಂದರ್ಶನ ನಡೆಸಲು ಸೂಚನೆ ನೀಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಭರಥದ ಕಾಲೇಜುಗಳ ರೀತಿಯಲ್ಲೇ ಅಲ್ಲಿನ ಕಾಲೇಜುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಂಪಸ್ ಇಂಟರ್ ವ್ಯೂ ನಡೆಸಲು ಮುಂದಾಗಿವೆ.

ಪಾಕಿಸ್ತಾನ ಅದ್ಬುತ ರಾಷ್ಟ್ರ ಎಂದ ಟ್ರಂಪ್ !!

ಪಾಕಿಸ್ತಾನ ಒಂದು ಅದ್ಭುತ ರಾಷ್ಟ್ರ, ಅಲ್ಲಿ ಉತ್ತಮ ಅವಕಾಶಗಳಿವೆ ಎಂದಿರುವ ಟ್ರಂಪ್, ಪಾಕಿಸ್ತಾನೀಯರು ಅತ್ಯಂತ ಬುದ್ಧಿವಂತ ಜನ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ನವಾಜ್ ಷರೀಫ್, ಅವರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ್ದಾರೆ. ಅದೂ ಅಲ್ಲದೆ ನವಾಜ್ ಷರೀಫ್ ಒಬ್ಬ ಅದ್ಭುತ ವ್ಯಕ್ತಿ ಅಂತಾನೂ ಹಾಡಿ ಹೊಗಳಿದ್ದಾರೆ.

ಟ್ರಂಪ್ ಆಯ್ಕೆ ಬಳಿಕ ಅಭದ್ರತೆ :

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ನಂತರ ಭಾರತೀಯರಲ್ಲಿ ಹಾಗೂ ಕಪ್ಪುಜನರಲ್ಲಿ ಅಭದ್ರತೆ ಕಾಡುತ್ತಿದೆ ಎಂದು ಭಾರತ ಮೂಲದ ಪೆಪ್ಸಿಕೋ ಸಿಇಒ ಇಂದ್ರಾ ನೂಯಿ ಹೇಳಿದ್ದಾರೆ. ಜತೆಗೆ ಅಮೆರಿಕದ ಜನರಿಗೇ ಅಲ್ಲಿನ ಕಂಪನಿಗಳು ಉದ್ಯೋಗ ನೀಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಈ ನಿಟ್ಟಿನಲ್ಲಿ ನೂಯಿ ಈ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.

ಏನೇ ಹೇಳಿ ಭಾರತವನ್ನು ಎದುರು ಹಾಕಿಕೊಳ್ಳುವುದು ಅಷ್ಟು ಸುಲಭದ ವಿಚಾರವಲ್ಲ, ಪ್ರಪಂಚದ ಬಲಿಷ್ಠ ರಾಷ್ಟ್ರ ಭಾರತವನ್ನು ವಿರೋಧಿಸುವ ಮೊದಲು ಅವರು ಒಮ್ಮೆ ಯೋಚಿಸಿದರೆ ಒಳಿತು.