ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ : ಮೋದಿ follower ಆದ ಡೊನಾಲ್ಡ್ ಟ್ರಂಪ್.

0
1101

ಬಿ.ಜೆ.ಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಚುನಾವಣಾ ಪ್ರಚಾರ ಜಾಹಿರಾತುಗಳಲ್ಲಿ ಅಬ್ ಕಿ ಬಾರ್ ಮೋದಿ ಸರ್ಕಾರ್ ಎಂಬ ಸ್ಲೋಗನ್‍ಗಳ ಮೂಲಕ ಭಾರಿ ಫೇಮಸ್ ಆಗಿರೋದು ನಿಮಗೆ ಗೊತ್ತು.. ಆದರೆ ಇದೆ ಸ್ಲೋಗನ್ ಇಟ್ಕೊಂಡು ಅಮೇರಿಕಾ ಅಧ್ಯಕ್ಷೀಯ ಅಭ್ಯರ್ಥಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಕೂಡ ಅಮೇರಿಕಾದಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ.

ಭಾರತೀಯರು ಹಾಗೂ ಹಿಂದೂಗಳು ಅಮೆರಿಕಾದ ವೈಟ್ ಹೌಸ್ ಜೊತೆ ನಿಜವಾದ ಸ್ನೇಹ ಹೊಂದಲಿದ್ದು, ತೀವ್ರಗಾಮಿ ಇಸ್ಲಾಮಿಕ್ ಭಯೋತ್ಪಾದನೆ ಸೋಲಿಸಲಿದ್ದೇವೆ ಎಂದು ಅಮೆರಿಕಾ ಅಧ್ಯಕ್ಷೀಯ ಚುನಾವಣೆ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಭಾರತೀಯ ಅಮೆರಿಕನ್ ಟಿವಿ ಚಾನೆಲ್ ಗೆ ಜಾಹೀರಾತು ನೀಡಿದ್ದಾರೆ. ಹಿಂದೂಗಳ ದೊಡ್ಡ ಹಬ್ಬವಾದ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಆರಂಬಿಸಿರುವ ಟ್ರಂಪ್ ವಿ ಲವ್ ದಿ ಹಿಂದೂಸ್, ವಿ ಲವ್ ಇಂಡಿಯಾ ಎಂದು ಜಾಹೀರಾತಿನಲ್ಲಿ ತಿಳಿಸಿದ್ದಾರೆ.

ಎಲ್ಲಾ ಇಂಡಿಯನ್ ಅಮೆರಿಕನ್ನರ ಟಿವಿ ಚಾನೆಲ್ ನಲ್ಲಿ ದಿನಂಪ್ರತಿ 20 ಬಾರಿ ಈ ಜಾಹೀರಾತು ಪ್ರಸಾರವಾಗುತ್ತಿದೆ ಎಂದು ಟ್ರಂಪ್ ಆಪ್ತ ಶಲ್ಲಿ ಕುಮಾರ್ ಹೇಳಿದ್ದಾರೆ. ಹಿಂದಿಯಲ್ಲಿ ಸ್ಲೋಗನ್ ಹೇಳಲು ತಾವು ಟ್ರಂಪ್ ಗೆ ಸಹಾಯ ಮಾಡಿದ್ದಾಗಿ ಅವರು ತಿಳಿಸಿದ್ದಾರೆ. ಅಮೆರಿಕಕ್ಕೆ ಉತ್ತಮ, ಅಮೆರಿಕ-ಭಾರತ ಸಂಬಂಧಕ್ಕೆ ಉತ್ತಮ ಎಂದು ಅಡಿ ಬರಹ ಇದೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಇನ್ನೆರೆಡೆ ವಾರಗಳು ಬಾಕಿಯಿದ್ದು ಚುನಾವಣಾ ಪ್ರಚಾರ ಜೋರಾಗಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೋದಿಯವರ ಚುನಾವಣಾ ಘೋಷವನ್ನು ತಮ್ಮ ಪ್ರಚಾರದಲ್ಲಿ ಬಳಸುತ್ತಿದ್ದಾರೆ.