ಅಂತೂ ಇಂತೂ ೨ ವರ್ಷ ಆದ ಮೇಲೆ ಹತ್ತಿಕೊಂಡ ಟ್ಯೂಬ್ ಲೈಟ್

0
974

ಎರಡು ವರ್ಷದ ಇಂದೇ ಯುಟ್ಯೂಬ್ ನಲ್ಲಿ ಶಬ್ದ ಮಾಡಿದ್ದು ಟ್ಯೂಬ್ ಲೈಟ್ ಎಂಬ ಟೀಸರ್. ಕನ್ನಡದಲ್ಲಿ ತೆರೆ ಕಾಣಬೇಕಿದ್ದ ಟ್ಯೂಬ್ ಲೈಟ್ ಚಿತ್ರ ಶುರುವಾಗಿದ್ದು ಎರಡು ವರ್ಷಗಳ ಹಿಂದೆ, ಚಿತ್ರ ಕಂಪ್ಲೀಟ್ ಮಾಡೋಕೇ ಆಗದೇ, ಪದೇ ಪದೇ ಹಲವು ಸಮಸ್ಯೆಗಳಿಂದ ತೆರೆ ಕಾಣಲು ವಿಳಂಬವಾಗಿತ್ತು. ಆದ್ರೆ ಚಿತ್ರಕ್ಕೆ ಹಣದ ಸಮಸ್ಯೆ ಎದುರಾಗಿತ್ತು.ಕೊನೆಗೆ ಪ್ರೂರ್ಣಿಮ ಜಗನ್ ಪ್ರೋಡ್ಯೂಕ್ಷನ್ಸ್ ಈ ಸಿನಿಮಾ ಸಾರಥ್ಯ ವಹಿಸಿತು. ಇಷ್ಟರ ನೆಡುವೆ ಅಂತೂ ಇಂತೂ ೨ ವರ್ಷ ಆದ ಮೇಲೆ ಹತ್ತಿಕೊಂಡಿದೆ ಈ ಟ್ಯೂಬ್ ಲೈಟ್.

ಈ ಚಿತ್ರದ ಟ್ರೈಲರ್ ನೋಡಿ :

ಈ ನೆಡುವೆ ಹಿಂದಿಯಲ್ಲೂ ಸಲ್ಮಾನ್ ಖಾನ್ ಕೂಡ ಟ್ಯೂಬ್ ಲೈಟ್ ಹೆಸರಿನ ಫಿಲಿಮ್ ಮಾಡಲು ಹೊರಟರು. [ಕನ್ನಡದ ‘ಟೂಬ್ ಲೈಟ್’ ಚಿತ್ರದ ಟೈಟಲ್ ಹಿಂದಿಯಲ್ಲಿ ಸಲ್ಮಾನ್ ಖಾನ್ ಚಿತ್ರಕ್ಕೆ]ಅಂದಹಾಗೇ ಕನ್ನಡ ಟ್ಯೂಬ್ ಲೈಟ್ ಚಿತ್ರತಂಡದ ನಿರ್ದೇಶಕರು ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಟ್ಯೂಬ್ ಲೈಟ್ ಚಿತ್ರಕ್ಕೆ ನಮ್ಮದ್ದು ಯಾವುದೇ ಆಕ್ಷೇಪಣೆ ಇಲ್ಲ ಎಂದು ತಿಳಿಸಿದ್ದಾರಂತೆ. ಕನ್ನಡದ ‘ಟ್ಯೂಬ್ ಲೈಟ್’ ಚಿತ್ರ ಹಿಂದಿಯಲ್ಲಿಯೂ ನಿರ್ಮಾಣವಾಗುತ್ತಿದೆ.

ನಾನು ಸಲ್ಮಾನ್ ಖಾನ್ ಆಪ್ತ ಮ್ಯಾನೇಜರ್ ಜತೆಗೆ ನಾವು ಉತ್ತಮವಾದ ಸಂಬಂಧ ಹೊಂದಿದ್ದೇವೆ. ಸಲ್ಮಾನ್ ನಮ್ಮ ಚಿತ್ರದ ಟ್ರೇಲರ್ ನೋಡಿದ್ದಾರೆ. ಇದರಿಂದ ಅವರು ಪ್ರಭಾವಿತರಾಗಿದ್ದಾರೆ. ಅಲ್ಲದೇ ಸಲ್ಲು ಕಬೀರ್ ಖಾನ್‌ಗೆ ತಮ್ಮ ಟ್ರೇಲರ್ ಕೂಡ ತೋರಿಸಿದ್ದಾರೆ. ಸಲ್ಮಾನ್ ಮುಂಬರುವ ಚಿತ್ರದ ‘ಟ್ಯೂಬ್ ಲೈಟ್’ ಟೈಟಲ್ ಕುರಿತು ನಮ್ಮ ಜತೆಗೆ ಕಬೀರ್ ಖಾನ್ ಮಾತನಾಡಿದ್ದಾರೆ. ಈ ವೇಳೆ ನಮಗೆ ತುಂಬಾ ಖುಷಿಯಾಗಿದೆ. ಇದರಿಂದ ಪ್ರೇಕ್ಷಕರ ಹತ್ತಿರಕ್ಕೆ ಮತ್ತಷ್ಟು ತಲುಪಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಂದಹಾಗೇ ಫಸ್ಟ್ ರಾಂಕ್ ರಾಜು ಸ್ಟಾರ್ ಗುರುನಂದನ್ ಅಭಿನಯದ ಕನ್ನಡ ಟ್ಯೂಬ್ ಲೈಟ್ ಚಿತ್ರ ಫೆಬ್ರವರಿ ವೇಳೆಗೆಲೀಸ್ ಕಾಣಲಿದೆ. ಈ ಚಿತ್ರವನ್ನು ವೇಣುಗೋಪಾಲ್ ನಿರ್ದೇಶನ ಮಾಡಿದ್ದಾರೆ.