ಮನೆಯ ಮುಂದೆ ತುಳಸಿ ಕಟ್ಟೆ ಕಟ್ಟುವ ಹಿಂದಿನ ವೈಜ್ಞಾನಿಕ ಸತ್ಯ!!!

0
5582

ಹಿಂದುಗಳು ಪೂಜಿಸುವ ಪರಮ ಪವಿತ್ರ ತುಳಸಿ ಔಷಧೀಯ ಹಾಗೂ ಪೌಷ್ಟಿಕಾಂಶಗಳನ್ನು ತುಂಬಿಕೊಂಡಿದ್ದು ನಿತ್ಯವೂ ಒಂದೆರಡು ಎಲೆಗಳನ್ನು ತಿನ್ನುವುದ-ರಿಂದ ಸಾಕಷ್ಟು ಲಾಭವಿದೆ. ಇಂದಿಗೂ ಹಿರಿಯರು ನಿತ್ಯ ತುಳಸಿ ತೀರ್ಥ ಕುಡಿಯುತ್ತಾರೆ. ಇದರರ್ಥ ಮಡಿ, ನೇಮವೆಂದಲ್ಲ. ಅದರಲ್ಲಿರುವ ಔಷಧೀಯ ಗುಣಗಳಿಂದ ದೇಹಕ್ಕೆ ದೊರೆಯುವ ಲಾಭವನ್ನು ನಾವು ಪರಿಗಣಿಸಬೇಕು.

Also read: ಕೃಷ್ಣನ ಹೆಂಡತಿ ಎಂದು ಕರೆಯಲ್ಪಡುವ ತುಳಸಿಯ ಔಷಧೀಯ ಗುಣಗಳು:

ಹಿಂದೂ ಧರ್ಮವು “ತುಳಸಿ” ಗಿಡಕ್ಕೆ ಮಾತೃ ಸ್ಥಾನವನ್ನು ನೀಡಿ ಗೌರವಿಸಿದೆ. ” ಪವಿತ್ರ ತುಳಸಿ” ಎಂದು ಸಹ ಕರೆಯಲ್ಪಡುವ ತುಳಸಿಯು ಭಾರತದಲ್ಲಿಯಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲು ಸಹ ಪೂಜ್ಯನೀಯ ಸ್ಥಾನವನ್ನು ಪಡೆದು, ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಡುತ್ತಿದೆ. ವೇದ ಕಾಲದ ಋಷಿ ಮುನಿಗಳಿಗೆ ಇದರ ಪ್ರಯೋಜನಗಳು ಚೆನ್ನಾಗಿ ತಿಳಿದಿದ್ದವು. ಆದ್ದರಿಂದಲೇ ಅವರು ಇದಕ್ಕೆ ಮಾತೃ ಸ್ಥಾನವನ್ನು ನೀಡಿ, ಪ್ರತಿಯೊಬ್ಬರ ಮನೆಯಲ್ಲಿ ಇದನ್ನು ಬೆಳೆಯಬೇಕೆಂಬ ಸಂದೇಶವನ್ನು ರವಾನಿಸಿದರು. ಹೀಗಾಗಿ ಇಂದು ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಎಂಬ ಬೇಧ ಭಾವವಿಲ್ಲದೆ ಎಲ್ಲರ ಮನೆಯಲ್ಲೂ ತುಳಸಿಯನ್ನು ನಾವು ಕಾಣಬಹುದು. ಇದನ್ನು ನಾವು ಮನೆಯಲ್ಲಿ ಬೆಳೆಸುವ ಮೂಲಕ ಈ ಸಸ್ಯವನ್ನು ನಾವು ಸಂರಕ್ಷಿಸುತ್ತಿದ್ದೇವೆ, ಏಕೆಂದರೆ ಇದು ಮನುಕುಲದ ಸಂಜೀವಿನಿ ಎಂಬ ಕಾರಣಕ್ಕಾಗಿ. ತುಳಸಿಯಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿರುವುದು ಎಲ್ಲರಿಗು ತಿಳಿದ ವಿಚಾರವೇ.

ಇದೊಂದು ಅದ್ಭುತವಾದ ಆಂಟಿ ಬಯೋಟಿಕ್. ಪ್ರತಿದಿನ ಚಹಾ ಜೊತೆಗೆ ತುಳಸಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಹಾಗು ಕುಡಿಯುವವರಿಗೆ ರೋಗಗಳು ಕಾಡುವ ಅಪಾಯವಿರುವುದಿಲ್ಲ. ಆತನ ಆರೋಗ್ಯ ಸ್ಥಿತಿ ಸಮತೋಲನದಲ್ಲಿರುವುದರ ಜೊತೆಗೆ, ಆತನ ಆಯುಸ್ಸು ಸಹ ಹೆಚ್ಚಾಗುತ್ತದೆ. ತುಳಸಿ ಸಸ್ಯಗಳನ್ನು ಮನೆಯಲ್ಲಿ ಇರಿಸಿಕೊಳ್ಳುವುದರಿಂದ ಮನೆಯೊಳಗೆ ಸೊಳ್ಳೆ ಮುಂತಾದ ಕೀಟಗಳು ಪ್ರವೇಶಿಸುವುದನ್ನು ತಡೆಗಟ್ಟಬಹುದು. ನಂಬಿಕೆಗಳ ಪ್ರಕಾರ ಹಾವುಗಳು ಸಹ ತುಳಸಿ ಗಿಡದ ಬಳಿಗೆ ಹೋಗುವ ಧೈರ್ಯವನ್ನು ಮಾಡುವುದಿಲ್ಲವಂತೆ. ಬಹುಶಃ ಅದಕ್ಕೆ ಇರಬೇಕು ಪ್ರಾಚೀನ ಕಾಲದ ಜನರು ತುಳಸಿಯನ್ನು ತಮ್ಮ ಮನೆಯ ಸಮೀಪದಲ್ಲಿ ಬೆಳೆಸುತ್ತಿದ್ದುದು.

Also read: ತುಳಸಿ ನೀರಿನಲ್ಲಿರುವ ಔಷಧೀಯ ಅಂಶ ಹಲವಾರು ರೋಗ ರುಜಿನಗಳನ್ನು ದೂರಮಾಡುತ್ತದೆ !! ಇದೆ ಕಾರಣಕ್ಕೆ ನಮ್ಮ ಹಿರಿಯರು ನಿತ್ಯ ತುಳಸಿ ತೀರ್ಥವನ್ನು ಸೇವಿಸುತಿದ್ದಿದ್ದು!!

ಮೃತ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಹಾಕಿ, ತುಳಸಿ ಎಲೆಯನ್ನು ಇಡುತ್ತಾರೆ ಕಾರಣ ಪ್ರಾಣ ಹೋಗುವಾಗ ಬಹಳಷ್ಟು ಸಲ ವ್ಯಕ್ತಿಯ ಬಾಯಿಯು ತೆರೆದಿರುತ್ತದೆ ಮತ್ತು ಅದರಿಂದ ಶರೀರದಲ್ಲಿರುವ ನಿರುಪಯುಕ್ತ ಲಹರಿಗಳು ವಾತಾವರಣದಲ್ಲಿ ಪ್ರಕ್ಷೇಪಿಸುತ್ತಿರುತ್ತವೆ. ಬಾಯಿಯಲ್ಲಿ ಗಂಗಾಜಲವನ್ನು ಹಾಕಿ ತುಳಸಿಯ ಎಲೆಯನ್ನು ಇಡುವುದರಿಂದ ಅದರ ಕಡೆಗೆ ಆಕರ್ಷಿಸುವ ಬ್ರಹ್ಮಾಂಡದಲ್ಲಿನ ಸಾತ್ತ್ವಿಕ ಲಹರಿಗಳ ಸಹಾಯದಿಂದ ಬಾಯಿಯಿಂದ ವಾತಾವರಣದಲ್ಲಿ ಪ್ರಕ್ಷೇಪಿಸುವ ಅಶುದ್ಧ ಲಹರಿಗಳ ವಿಘಟನೆಯಾಗಿ ವಾಯುಮಂಡಲವನ್ನು ಸತತವಾಗಿ ಶುದ್ಧವಾಗಿಡಲಾಗುತ್ತದೆ. ಅದೇರೀತಿ ಗಂಗಾಜಲ ಮತ್ತು ತುಳಸಿ ಎಲೆಗಳಿಂದಾಗಿ ಮೃತದೇಹದ ಅಂತರ್‌ಕೋಶಗಳು ಶುದ್ಧವಾಗಿ ಬಾಯಿಯಿಂದ ಒಳಗೆ ಸೇರಿಕೊಳ್ಳಲು ಪ್ರಯತ್ನಿಸುತ್ತಿರುವ ಕೆಟ್ಟ ಶಕ್ತಿಗಳಿಗೆ ಅಡ್ಡಿಯುಂಟಾಗುತ್ತದೆ.

ಮನೆಯ ಮು೦ದೆ ಹಾಗೂ ಆವರಣದಲ್ಲಿನ ತುಳಸಿ ಗಿಡಗಳನ್ನು ನೆಡುವುದರಿ೦ದ ಮನೆಗೂ ಭೂಷಣ, ಮನಸ್ಸಿಗೂ ನೆಮ್ಮದಿ.