ದೀಪಾವಳಿ ನಂತರ ಬರುವ ತುಳಸಿ ಹಬ್ಬ ಒಂದು ಮಹತ್ವದ ಹಬ್ಬ, ಈ ವರ್ಷ ತುಳಸಿ ಹಬ್ಬವನ್ನು ಹೇಗೆ, ಯಾವಾಗ ಆಚರಿಸಬೇಕು ಅಂತ ಹೇಳ್ತಿವಿ ಮುಂದೆ ಓದಿ!!!

0
1136

ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ತುಳಸಿ ಹಬ್ಬವನ್ನು ಆಚರಿಸಲಾಗುತ್ತದೆ. ಕೃಷ್ಣನ ಮೂರ್ತಿ ಮತ್ತು ತುಳಸಿಯ ವಿವಾಹವನ್ನು ಮಾಡಿಸುವುದೇ ಈ ಹಬ್ಬದ ವೈಶಿಷ್ಟ್ಯ. ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲಕ್ಕೆದ್ದು, ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ಈ ದಿನವನ್ನು ಕ್ಷೀರಾಭಿವ್ರತವೆಂದು ಹಲವು ಕಡೆ ಆಚರಿಸುವರು. ಅಂದು ತುಳಸಿಯನ್ನು ಅಗಸೆ ಹಾಗೂ ನೆಲ್ಲಿ ಟೊಂಗೆಯೊಂದಿಗೆ ಕಟ್ಟಿ ವೈಭವದಿಂದ ಪೂಜಿಸಿ, ಆರತಿ ಮಾಡಿ, ದಾನಾದಿಗಳನ್ನು ಮಾಡಬೇಕು. ಅಗಸೆ, ನೆಲ್ಲಿ ಮತ್ತು ತುಳಸಿ ಇವು ಮೂರು ಬಹಳ ಪವಿತ್ರವಾದುವು.

Also read: ತುಳಸಿ ಮತ್ತು ಶ್ರೀಕೃಷ್ಣನ ವಿವಾಹದ ಹಿಂದಿನ ಧಾರ್ಮಿಕ ಮಹತ್ವ ತಿಳಿಯೋಣವೇ!!

ತುಳಸಿ ಪೂಜೆ ಮಾಡುವ ಶುಭ ಮುಹೂರ್ತಗಳು

ನವೆಂಬರ್ 8, ಮಧ್ಯಾಹ್ನ 12.24 ರಿಂದ ದ್ವಾದಶಿ ತಿಥಿ ಪ್ರಾರಂಭವಾಗಿ, ನವೆಂಬರ್ 9, ಮಧ್ಯಾಹ್ನ 02.39ರವರೆಗೆ ಶುಭ ಮುಹೂರ್ತ ಇರುತ್ತದೆ. ಆದ್ದರಿಂದ ಎರಡೂ ದಿನವೂ ತುಳಸಿಪೂಜೆ ಮಾಡಲು ಶುಭ ಘಳಿಗೆ ಇದೆ.

ಸೂರ್ಯೋದಯ: ನವೆಂಬರ್ 09, 2019 ಬೆಳಿಗ್ಗೆ 6:40

ಸೂರ್ಯಾಸ್ತ: ನವೆಂಬರ್ 09, 2019 ಸಂಜೆ 5:40

ದ್ವಾದಶಿ ತಿಥಿ ಪ್ರಾರಂಭ : ನವೆಂಬರ್ 08, 2019 12:24

ದ್ವಾದಶಿ ತಿಥಿ ಕೊನೆಯಾಗುವುದು: ನವೆಂಬರ್ 09, 2019 ಮಧ್ಯಾಹ್ನ 2:39

ತುಳಸಿ ವಿವಾಹ ಮಾಡುವಾಗ ಬೇಕಾಗುವ ಪೂಜಾ ಸಾಮಗ್ರಿಗಳು:

Also read: ಮನೆಯ ಮುಂದೆ ತುಳಸಿ ಕಟ್ಟೆ ಕಟ್ಟುವ ಹಿಂದಿನ ವೈಜ್ಞಾನಿಕ ಸತ್ಯ!!!

ಸಾಮಾನ್ಯವಾಗಿ ಎಲ್ಲರ ಮನೆ ಮುಂದೆ ತುಳಸಿ ಗಿಡವಿದ್ದೇ ಇರುತ್ತದೆ. ತುಳಸಿ ಕಟ್ಟೆಯ ಮುಂದೆ ಹಾಕಲು ರಂಗೋಲಿ, ತುಳಸಿ ಕಟ್ಟೆಯನ್ನು ಸಿಂಗರಿಸಲು ಹೂವು, ಮಾವಿನ ಎಲೆ. ತುಳಸಿ ಗಿಡದ ಜೊತೆಗೆ ವಿಷ್ಣುವಿನ ಅವತಾರವಾದ ಕೃಷ್ಣನ ಮೂರ್ತಿ ಅಥವಾ ನೆಲ್ಲಿಕಾಯಿ ಗಿಡ, ಇವೆರಡನ್ನು ತುಳಸಿ ಜೊತೆಗೆ ಇಟ್ಟು ಪೂಜಿಸಲಾಗುತ್ತದೆ.

ತುಳಸಿ ಪೂಜೆ ಮಾಡುವಾಗ ಇರಲಿ ಈ ಕುರಿತು ಗಮನ:

ತುಳಸಿಯನ್ನು ಹೀಗೆಯೇ ಸಿಂಗರಿಸಬೇಕು ಎಂಬ ನಿಯಮವೇನಿಲ್ಲ. ಅವರವರ ಅನೂಕೂಲಕ್ಕೆ ತಕ್ಕದಾಗಿ ತುಳಸಿಯನ್ನು ಅಲಂಕರಿಸುತ್ತಾರೆ. ತುಳಸಿಯಷ್ಟೇ ಔಷಧಿಯ ಗುಣವನ್ನು ಹೊಂದಿರುವ ಬೆಟ್ಟದ ನೆಲ್ಲಿಕಾಯಿಯ ಗಿಡ ಅತ್ಯಂತ ಪಾಮುಖ್ಯವಾದುದರಿಂದ ಹಬ್ಬದ ದಿನದಂದು ಈ ಗಿಡಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಹೆಚ್ಚಿನ ಕಡೆಗಳಲ್ಲಿ ನೆಲ್ಲಿಕಾಯಿಯ ಆರತಿಯನ್ನೇ ಬೆಳಗುವುದು ಇನ್ನೊಂದು ವಿಶೇಷ. ಕೆಲವೊಂದು ಕಡೆಗಳಲ್ಲಿ ಪೂಜೆಯ ವೇಳೆಗೆ ಬಾಳೆ ಎಲೆಯನ್ನು ತುಳಸಿಕಟ್ಟೆಯ ಎದುರು ಇಟ್ಟು ಅದಕ್ಕೆ ಅವಲಕ್ಕಿ, ಬೆಲ್ಲ, ತೆಂಗಿನ ಕಾಯಿ, ಹಣ್ಣು-ಹಂಪಲು, ಸಿಹಿತಿಂಡಿಗಳನ್ನು ತುಳಸಿಯ ಎದುರು ಇಟ್ಟು ಬಡಿಸಲಾಗುತ್ತದೆ. ಕೊನೆಯಲ್ಲಿ ಮಂಗಳಾರತಿಯನ್ನು ಮಾಡಿ ಮನೆಮಂದಿಯೆಲ್ಲ ತುಳಸಿಯನ್ನು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ.

Also read: ಇಂದು ಉತ್ಥಾನ ದ್ವಾದಶಿ, ತುಳಸಿಯ ಹಬ್ಬ. ಈ ಸಂದರ್ಭದಲ್ಲಿ ತುಳಸಿಯ ಮಹಿಮೆಯ ಕುರಿತ ಲೇಖನವಿಲ್ಲಿದೆ….

ಆ ದಿನ ಹೆಂಗಳೆಯರು ತುಳಸಿ ಗಿಡವನ್ನು ಮದುವಣಗಿತ್ತಿಯಂತೆ ಸಿಂಗರಿ ವಿಷ್ಣುವಿನ ಅಥವಾ ಅವನ ಅವತಾರವಾದ ಕೃಷ್ಣ, ರಾಮನ ಫೋಟೋವನ್ನು ಇಲ್ಲವೇ ಸಾಲಿಗ್ರಾಮ ಕಲ್ಲು, ಇಲ್ಲವೇ ನೆಲ್ಲಿಕಾಯಿ ಗಿಡವನ್ನು ತುಳಸಿ ಗಿಡದ ಪಕ್ಕದಲ್ಲಿ ಇಟ್ಟು ಸ್ನಾನ ಮಾಡಿಸಿ ಶುಭ್ರ ಬಟ್ಟೆ ತೊಡಿಸಿ ಹೂವು, ಹಣ್ಣುಗಳಿಂದ ಅಲಂಕರಿ ವಿಷ್ಣುವಿನ ಭಾವಚಿತ್ರ ಹಾಗೂ ತುಳಸಿ ಗಿಡಕ್ಕೆ ಹತ್ತಿಯಿಂದ ತಯಾರಿಸಿದ ಮಾಲೆಯನ್ನು ತೊಡಿಸಿ ಮದುವೆಯ ಶಾಸ್ತ್ರಮಾಡಿ. ಹಿಂದೂ ವಿವಾಹ ಪದ್ಧತಿಯಲ್ಲಿ ನಡೆಯುವ ಆಚರಣೆಯಂತೆಯೇ ವಿಷ್ಣು-ತುಳಸಿ ವಿವಾಹವನ್ನು ಭಕ್ತರು ಆಚರಿಸುತ್ತಾರೆ.