ಪಾಲಕರೇ ನಿಮ್ಮ ಮಕ್ಕಳನ್ನು ಅಡುಗೆ ಮನೆಗೆ ಕಳುಹಿಸುವ ಮುನ್ನ ಎಚ್ಚರ; ಅಮ್ಮನಿಗೆ ಮ್ಯಾಗಿ ಮಾಡಲು ಹೋಗಿ ಶವವಾದ ಬಾಲಕ.!

0
2431

ಮಕ್ಕಳ ಕೈಯಲ್ಲಿ ಅಪಾಯಕಾರಿ ಕೆಲಸ ಮಾಡಿಸಿ ಮಜಾ ನೋಡುತ್ತಿರುವ ಪಾಲಕರೆ ಇತ್ತ ಸ್ವಲ್ಪ ನೋಡಿ. ಏಕೆಂದರೆ ಚಿಕ್ಕ ವಯಸ್ಸಿನ ಮಕ್ಕಳು ಏನಾದರು ಕೆಲಸ ಮಾಡುತ್ತೇವೆ ಎಂದರೆ ಪಾಲಕರಿಗೆ ಅದೇನೋ ಹೆಮ್ಮೆ ಆದರೆ ಅದರಿಂದ ಆಗುವ ಅಪಾಯವನ್ನು ಒಮ್ಮೆ ಯೋಚನೆ ಮಾಡಿದರೆ ಇಂತಹ ಸಾಹಸ ಕೆಲಸಕ್ಕೆ ಮಕ್ಕಳನ್ನು ಬಳಸುವುದಿಲ್ಲ, ಅದರಂತೆ ಕೆಲವರಂತೂ ಆಟವಾಡುವ ಮಕ್ಕಳಿಗೆ ಸಿಲಿಂಡರ್ ಹಚ್ಚಲು ಹೇಳುವುದು, ವಾಹನಗಳನ್ನು ಓಡಿಸಲು ಹೇಳುವುದು, ಹರತವಾದ ವಸ್ತುಗಳನ್ನು ಬಳಸುವಂತೆ ಹೇಳುವುದು, ಶ್ರೀಮಂತರ ಮನೆಯಲ್ಲಿರುವ ಗನ್ ಮಕ್ಕಳ ಕೈಯಲಿ ಕೊಟ್ಟು ಮಜಾ ನೋಡುವುದು ಸಾಮಾನ್ಯವಾಗಿದೆ.

Also read: ಪಾಲಕರೇ ಮಕ್ಕಳ ಕೈಯಲ್ಲಿ ವಾಹನ ಕೊಡುವ ಮುನ್ನ ಎಚ್ಚರ; ನಿಮಗೆ ಬಿಳ್ಳುತ್ತೆ 25 ಸಾವಿರ ದಂಡದ ಜೊತೆಗೆ 3 ವರ್ಷ ಜೈಲು ವಾಸ.!

ಹೀಗೆ ಚಿಕ್ಕ ಮಕ್ಕಳು ಮಾಡುವ ಅಪಾಯಕಾರಿ ಕೆಲಸಗಳನ್ನು ವೀಡಿಯೋ ಮಾಡಿ ಇಷ್ಟೊಂದು ಬೇಗ ನಮ್ಮ ಮಕ್ಕಳು ಮುಂದುವರೆದಿದ್ದಾರೆ ಎನ್ನುವ ಹೆಮ್ಮೆಯು ಇಂತಹ ಕೆಲವಸವನ್ನು ಮಾಡಿಸುತ್ತಿದೆ. ಇದಕ್ಕೆ ಸಾಕ್ಷಿಯಾದ ಘಟನೆಯೊಂದು ತುಮಕೂರಿನಲ್ಲಿ ನಡೆದಿದ್ದು, ತಾಯಿ 7 ವರ್ಷದ ಮಗನಿಗೆ ಮ್ಯಾಗಿ ಮಾಡಿ ಕೊಡು ಎಂದು ಹೇಳಿದ ಪರಿಣಾಮ ಗ್ಯಾಸ್ ಸ್ಟೌವ್ ಹಚ್ಚಿದ ಬಾಲಕ ಮೃತಪಟ್ಟ ಘಟನೆ ತುಮಕೂರು ನಗರದ ಕ್ರಿಶ್ಚಿಯನ್ ಸ್ಟ್ರೀಟ್‍ನಲ್ಲಿ ನಡೆದಿದೆ.

Also read: ನಿಮ್ಮ್ ಮಕ್ಕಳ ಮೆಚ್ಚಿನ ಆಹಾರವಾದ ಮ್ಯಾಗ್ಗಿ , ನೂಡಲ್ಸ್ ನಲ್ಲಿ ಸೀಸ ಮತ್ತು ವಿಷಕಾರಿ ಅಂಶ ಇದೆ ಎಂದು ಆಹಾರ ತಯಾರಿಕ ಕಂಪನಿ ನೆಸ್ಲೆ ಒಪ್ಪಿಕೊಂಡಿದೆ…

ಹೌದು ಅಮ್ಮನಿಗೆ ಮ್ಯಾಗಿ ಮಾಡಿಕೊಡಲು ಹೋದ ಬಾಲಕ ಸಿಲಿಂಡರ್ ಸ್ಫೋಟದಿಂದ ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ಕ್ರಿಶ್ಚಿಯನ್ ಸ್ಟ್ರೀಟ್ ನಿವಾಸಿಯಾದ 7 ವರ್ಷದ ನೋಯಲ್ ಪ್ರಸಾದ್ ಎಂಬ ಬಾಲಕ ಸಾವನ್ನಪ್ಪಿದ್ದು. ಅಮ್ಮನಿಗೆ ತಾನೇ ಮ್ಯಾಗಿ ರೆಡಿ ಮಾಡ್ತೀನಿ ಎಂದು ಅಡುಗೆ ಮನೆಗೆ ಹೋದ ನೋಯಲ್ ಪ್ರಸಾದ್ ಗ್ಯಾಸ್ ಸ್ಟೌವ್ ಆನ್ ಮಾಡಿ ಮ್ಯಾಗಿ ಪ್ಯಾಕೆಟ್ ಒಡೆದಿದ್ದಾನೆ. ಮ್ಯಾಗಿ ಮಾಡಲು ತಯಾರು ಮಾಡಿಕೊಳ್ಳುವವರೆಗೂ ಗ್ಯಾಸ್​ ಆನ್ ಆಗೇ ಇತ್ತು.

Also read: ಬೆಂಗಳೂರಿನ ವಂಡರ್ಲಾದಲ್ಲಿ ಅವಘಡ; ಮಕ್ಕಳ ಜೊತೆಯಲ್ಲಿ ಅಮ್ಯೂಸ್‍ಮೆಂಟ್ ಪಾರ್ಕಿಗೆ ಹೋಗುವ ಮುನ್ನ ಈ ವಿಡಿಯೋ ನೋಡಿ;

ನೋಯಲ್ ಗ್ಯಾಸ್ ಸ್ಟೌವ್ ಆನ್ ಮಾಡಿದ ನಂತರ ಅಡುಗೆಮನೆಯ ತುಂಬ ಗ್ಯಾಸ್​ ತುಂಬಿಕೊಂಡಿತ್ತು. ನಿಧಾನವಾಗಿ ಬೆಂಕಿ ಹಚ್ಚಿದ ನೋಯಲ್ ಮೈಗಾವರಿಸಿಕೊಂಡ ಬೆಂಕಿಯಿಂದ ಆತ ಕಿರುಚಿಕೊಂಡಿದ್ದಾನೆ. ಲೈಟರ್ ನಲ್ಲಿ ಬೆಂಕಿ ಹಚ್ಚುವುದಕ್ಕೆ ಲೇಟ್ ಮಾಡಿದ್ದಾನೆ. ಆದರೆ ಅಷ್ಟರಲ್ಲಾಗಲೇ ಗ್ಯಾಸ್ ಲೀಕ್ ಆಗಿ ನೋಯಲ್ ಸುತ್ತಮುತ್ತ ಹರಡಿಕೊಂಡಿದೆ. ನಿಧಾನವಾಗಿ ಬೆಂಕಿ ಹಚ್ಚಿದಕ್ಕೆ ನೋಯಲ್ ಗೆ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಿಂದ ನೋಯಲ್‍ನನ್ನು ರಕ್ಷಣೆ ಮಾಡುವಷ್ಟರಲ್ಲಿ ಆತನಿಗೆ ತುಂಬಾ ಗಂಭೀರವಾಗಿ ಗಾಯಗಳಾಗಿತ್ತು. ತಕ್ಷಣ ಆತನ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನೋಯಲ್ ಮೃತಪಟ್ಟಿದ್ದಾನೆ.

ನೋಯಲ್ ಮನೆಯಲ್ಲಿ ತಂದೆ ತಾಯಿಗಳಿಗೆ ನೆರವಾಗುವ ಕೆಲಸವನ್ನು ಹೆಚ್ಚಾಗಿ ಮಾಡುತ್ತಿದ್ದ. ಹಾಗೆ ಶಾಲೆಯಲ್ಲಿ ಕೂಡ ಓದಿನಲ್ಲಿ ಮುಂದೆ ಇದ್ದ ಎಂದು ಸ್ಥಳಿಯರು ತಿಳಿಸಿದ್ದಾರೆ. ಆದರೆ ವಿದ್ಯುತ್ ಮತ್ತು ಗ್ಯಾಸ್​ ಬಗ್ಗೆ ಎಷ್ಟೇ ಜಾಗರೂಕರಾಗಿದ್ದರೂ ಅನಿರೀಕ್ಷಿತವಾಗಿ ಸಂಭವಿಸುವ ಅವಘಡ ದೊಡ್ಡ ಮಟ್ಟದಲ್ಲಿರುತ್ತೆ, ಅದಕ್ಕಾಗಿ ಮನೆಯವರು ಸಣ್ಣ ನಿರ್ಲಕ್ಷ್ಯವಹಿಸುವ ಮುನ್ನ ಸಾಕಷ್ಟು ಜಾಗೃತಿವಹಿಸುವುದು ಒಳ್ಳೆಯದು.