ಕೊಳವೆ ಬಾವಿಯೊಳಗೆ ಸಿಕ್ಕಿಬಿದ್ದಿರುವ ಕಾರ್ಮಿಕರು!!

0
581

ರೀ ಬೋರ್ ಮಾಡುವಾಗ ಕೊಳವೆ ಬಾವಿಯಲ್ಲಿ ಇಬ್ಬರು ಕಾರ್ಮಿಕರು ಸಿಲುಕಿರುವ ಘಟನೆ ಗದಗ ಜಿಲ್ಲೆಯಲ್ಲಿ ರೋಣ್ ತಾಲೂಕಿನ ಸವಡಿಯಲ್ಲಿ ನಡೆದಿದೆ. ಕೇಸಿಂಗ್ ಪೈಪ್ ತೆಗೆಯುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬತ್ತಿದ ಕೊಳವೆ ಬಾವಿಯಿಂದ ಕೇಸಿಂಗ್ ಪೈಪ್ ತೆಗೆಯುತ್ತಿದ್ದರು. ಈ ವೇಳೆ ಮಣ್ಣು ಕುಸಿದ ಪರಿಣಾಮ ಇಬ್ಬರು ವ್ಯಕ್ತಿಗಳು ಮಧ‍್ಯ ಸಿಲುಕಿಕೊಂಡಿದೆ. ಬಿದ್ದವರನ್ನು ಬಸವರಾಜ್ ಮತ್ತು ಶಂಕರಪ್ಪ ಎಂದು ಗುರುತಿಸಲಾಗಿದೆ.


ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ್ ಅವರ ತಂದೆ ಸ್ಥಳದಲ್ಲೇ ಇದ್ದಿದ್ದರಿಂದ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಅಲ್ಲದೆ ಅಗ್ನಿಶಾಮಕ ದಳ, ಪೊಲೀಸರು ಆಗಮಿಸಿದ್ದು ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಈ ಘಟನೆಯನ್ನು ತಿಳಿದ ಬಳಿಕ ಸ್ಥಳಕ್ಕೆ ನೂರಾರು ಜನ ಆಗಮಿಸಿದ್ದಾರೆ. ಬಸವರಾಜ್ ಹಾಗೂ ಶಂಕರಪ್ಪ ಇಬ್ಬರೂ ಬಿದ್ದ ಬಳಿಕ ಇವರ ಮೇಲೆ ಮಣ್ಣು ಬಿದ್ದಿದೆ. ಹೀಗಾಗಿ ಇವರು ಬದುಕಿರುವ ಸಾಧ್ಯತೆ ಕಡಿಮೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸುತ್ತಿದ್ದಾರೆ.

ಘಟನೆ ಹಿನ್ನೆಲೆ ಏನು:
ಮಲ್ಲಪ್ಪ ಬಾಣದ ಹಿಂದೆ ಬೋರ್ ವೆಲ್ ತೆಗಿಸಿದ್ದರು. ಈ ಬೋರ್ ವೆಲ್ ನಲ್ಲಿ ನೀರು ಸಿಗದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಬೋರ್ ವೆಲ್ ಗೆ ಬಳಸಿದ ಕೇಸಿಂಗ್ ಪೈಪ್ ತೆಗೆಯುವ ಕಾರ್ಯ ನಡೆದಿತ್ತು. ಬುಧವಾರ 25 ಅಡ್ಡಿಯಷ್ಟು ಉದ್ದರ ಕೇಸಿಂಗ್ ಪೈಪ್ ಹೊರ ತೆಗೆಯಲಾಗಿತ್ತು. ಪೈಪ್ ತೆಗೆದ ಬಳಿಕ ಇಬ್ಬರು ಸಮಾಧಾನದ ನಿಟ್ಟುಸಿರು ಬಿಡುತ್ತಾ ನಿಂತಿದ್ದರು. ಆದರೆ ಮಣ್ಣು ಕುಸಿತದ ಪರಿಣಾಮ ಇಬ್ಬರು ಕೆಳಕ್ಕೆ ಜಾರಿ ಬಾವಿಗೆ ಬಿದ್ದಿದ್ದಾರೆ. ಈ ಬಳಿಕ ಇವರ ಮೇಲೆ ಮಣ್ಣು ಜಾರಿದೆ.