ಮಕ್ಕಳಿಗೆ ಟಿವಿ ಕಾಲಹರಣ ಆಗದಿರಲಿ

0
565

ಟಿವಿ ನೋಡಿ, ಆದರೆ ರಿಮೋಟ್ ಕೈಲಿದೆ ಎಂದು ಸಿಕ್ಕ ಸಿಕ್ಕ ಚಾನೆಲ್ ನ ಧಾರಾವಾಹಿಗಳನ್ನು ನೋಡದೇ, ಅಧ್ಯಯನಕ್ಕೆ ಪೂರಕವಾದ ಕಾರ್ಯಕ್ರಮಗಳು, ಸುದ್ದಿಗಳನ್ನು ಮಾತ್ರ ನೋಡಿ.

ಮೊನ್ನೆ ಮಿಸ್ ತಮಗೇನೋ ಕೆಲಸವಿದೆ ಎಂದು ನಮಗೆ ಸುಮ್ಮನೆ ಓದಿಕೊಳ್ಳಲು ಹೇಳದಿದ್ದನ್ನು ಚರ್ಚಿಸುತ್ತಿದ್ದಾರೆಂದು ಭಾವಿಸಿ, ಅವರೊಂದಿಗೆ ಕುಳಿತು ಓದೋಣವೆಂದು ಹೋದೆ. ಆದರೆ ಅಲ್ಲಿ ಹೋದಮೇಲೆ ಗೊತ್ತಾಗಿದ್ದು ಅವರು ಒಂದು ಧಾರಾವಾಹಿಯ ಬಗ್ಗೆ ಚರ್ಚಿಸುತ್ತಿದ್ದರು. ಹಾಗಂತ ಅವರು ಮಾತ್ರವಲ್ಲ. ಹೆಚ್ಚಿನವರಿಗೆ ಸೀರಿಯಲ್ ಹುಚ್ಚು ಜಾಸ್ತಿ. ಆದರೆ ಅವುಗಳನ್ನು ನೊಡುವುದರಿಂದ ನಮಗೇನು ಲಾಭವಿದೆ ಎಂಬುದನ್ನು ನಾವೊಮ್ಮೆ ಯೋಚಿಸಬೇಕು.

ಯಾವುದನ್ನು ನೋಡಬೇಕು: ಟಿವಿ ನೋಡುವುದು ತಪ್ಪಲ್ಲ, ಆದರೆ ಅದರಲ್ಲಿ ಬರುವ ಯಾವ ಕಾರ್ಯಕ್ರಮವನ್ನು ನೋಡುತ್ತೀರಿ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ದಿನಾಲೂ ವಾರ್ತೆಯನ್ನು ನೋಡುವುದು, ಕ್ವಿಜ್ ಸ್ಪರ್ಧೆಗಳನ್ನು ವೀಕ್ಷಿಸುವುದು, ಉತ್ತಮವಾದ ಕಲಾತ್ಮಕ ಸಿನಿಮಾಗಳನ್ನು ನೋಡುವುದು, ಇಂಗ್ಲೀಷ್ – ಹಿಂದಿ ಸುದ್ದಿಗಳನ್ನು ನೋಡುವುದರಿಂದ ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ದೈನದಿಂದಿನ ಆಗುಹೋಗುಗಳಿಗೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ಜತೆಗೆ ಭಾಷೆ ಕಲಿಯಲು ನೆರವಾಗುತ್ತದೆ. ಅದೇ ಧಾರಾವಾಹಿಗಳನ್ನು ನೋಡಿದರೆ ಮನರಂಜನೆಯ ಹೊರತಾಗಿ ಮತ್ತೇನು ಚಂಚಲವಾಗುತ್ತದೆ ಹೋಗುತ್ತದೆ. ಸಮಯವೂ ವ್ಯರ್ತವಾಗುತ್ತದೆ.

ಅತಿ ವೀಕ್ಷಣೆ ಒಳ್ಳೆಯದಲ್ಲ: ಅತಿಯಾದ ಟೀವಿ ವೀಕ್ಷಣೆ ಆರೋಗ್ಯ, ಮಕ್ಕಳ ಬೆಳವಣಿಗೆ ದೃಷ್ಠಿಯಿಂದ ಒಳ್ಳೆಯದಲ್ಲ ಎಂದು ಸಂಶೋಧನೆಗಳು ದೃಢಪಡಿಸಿವೆ. ಅಲ್ಲದೇ, ಇದು ಮಕ್ಕಳ ಮಾನಸಿಕ ಆರೋಗ್ಯ, ಭಾವನಾತ್ಮಕ ಸಂಬಂಧಗಳಿಗೆ ಒಳ್ಳೆಯದಲ್ಲ ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ. ಆದ್ದರಿಂದ ಸ್ನೇಹಿತರೇ. ಟಿವಿ ವೀಕ್ಷಣೆ ಬದಲು ಸಂಗೀತ, ನೃತ್ಯ, ಚಿತ್ರಕಲೆ ಮುಂತಾದ ಹವ್ಯಾಸಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ.

*ಆಟಕ್ಕೆ, ಪಾಠಕ್ಕೆ ಇಂತಿಷ್ಟು ಸಮಯವೆಂದು ನಿಗದಿ ಪಡಿಸಿಕೊಳ್ಳಿ. ಅದಕ್ಕೊಂದು ವೇಳಾಪಟ್ಟಿ ಹಾಕಿಕೊಳ್ಳಿ.

*ಟೀವಿ ನೋಡುವುದಕ್ಕೂ ಇಂತಿಷ್ಟು ಸಮಯ ನಿಗದಿಪಡಿಸಿ.

*ಯಾವ್ಯಾವ ಪ್ರೋಗ್ರಾಮ್ ಗಳನ್ನು ಅಥವಾ ಚಾನೆಲ್ ಗಳನ್ನು ನೋಡಬೇಕೆಂದು ಮನೆಯವರ ಜೊತೆ ಕೇಳಿ ತಿಳಿದುಕೊಳ್ಳಿ.

*ಜ್ಞಾನ ವೃದ್ಧಿಸುವ ಕಾರ್ಯಕ್ರಮಗಳಿಗೆ ಮೊದಲು ಆದ್ಯತೆ ನೀಡಿ. ಅನಗತ್ಯವಾದ ಕಾರ್ಯಕ್ರಮಗಳಿಗೆ ಮೊದಲ ಆದ್ಯತೆ ನೀಡಿ. ಅನಗತ್ಯವಾದ ಕಾರ್ಯಕ್ರಮಗಳನ್ನು ನೋಡುತ್ತಾ ಸಮಯ ವ್ಯರ್ಥ ಮಾಡಬೇಡಿ.