ಪ್ರತಾಪ್ ಸಿಂಹ ಟ್ವೀಟ್-ಗೆ, ಸರಳತೆಯಿಂದಲೇ ಉತ್ತರಿಸಿದ ಎಸ್‌ಪಿ ರವಿ ಡಿ.ಚನ್ನಣ್ಣನವರ್‌‌…

0
765

ಕೆಲ ದಿನಗಳ ಹಿಂದೆಯೇ ಎಸ್‌ಪಿ ರವಿ ಡಿ.ಚನ್ನಣ್ಣನವರ್‌‌ ಅವರು ತಮ್ಮ ಕರ್ತವ್ಯದ ಜೊತೆಗೆ ಪ್ರತಿಯೊಬ್ಬ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಎಷ್ಟು ಕಾಳಜಿ ಇಂದ ಮಾತನಾಡಿಸುತ್ತಾರೆ ಎಂದು ಎಎಸ್‍ಪಿ ಮಹಮ್ಮದ್ ಸುಜಿತಾ ಗುಣಗಾನ ಮಾಡಿದ್ದರು. ಎಎಸ್‍ಪಿ ಮಹಮ್ಮದ್ ಸುಜಿತಾ ಅವರನ್ನು ಮಾತನಾಡಲು ಕರೆಸಿದ್ದ ಎಸ್‌ಪಿ ರವಿ ಡಿ.ಚನ್ನಣ್ಣನವರ್‌‌ ಅವರಿಗೆ ಹುಟ್ಟಹಬ್ಬದ ಶುಭಾಶಯ ಕೋರಿ ಕೇಕ್‌ ಕತ್ತರಿಸುವಂತೆ ಹೇಳಿದ್ದರು, ಇವರ ಈ ಕಾರ್ಯಕ್ಕೆ ಎಲ್ಲ ಪೊಲೀಸ್ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈಗ ಇವರ ಸರಳತೆಗೆ ಇನ್ನೊಂದು ಉದಾಹರಣೆ ಸಿಕ್ಕಿದೆ, ಸದಾ ಚಟುವಟಿಗೆಯಿಂದ ಕೆಲಸ ಮಾಡುತ್ತ, ದೊಡ್ಡ ಅಧಿಕಾರಿಯಾಗಿದ್ದರು ಸಹ ಎಲ್ಲರ ಜೊತೆ ಸರಳವಾಗಿ, ಸಾಮಾನ್ಯನಾಗಿ ನಡೆದುಕೊಳ್ಳುತ್ತ ಇನ್ನೊಬ್ಬರನ್ನು ಹುರಿದುಂಬಿಸುವ ವ್ಯಕ್ತಿತ್ವ ರವಿ ಅವರದ್ದು, ಹೀಗಿದ್ದರು ಅವರ ಬಗ್ಗೆ ಕೆಲವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿರುತ್ತಾರೆ.

ಮಾಧ್ಯಮದೊಂದಿಗೆ ನೀಡಿದ ಸಂದರ್ಶನದಲ್ಲಿ, ಸಂಸದರು ನೀಡಿದ ಟ್ವೀಟ್-ಗೆ ಉತ್ತರಿಸಿದ ರವಿ ಅವರು ಅಣ್ಣಾಮಲೈ ಅಧಿಕಾರಿಗಳಿಂದ ನಾನು ತುಂಬಾ ಕಲಿಯಬೇಕಿದೆ ಅಷ್ಟೇಕೆ ಒಬ್ಬ ಪೊಲೀಸ್ ಪೇದೆಯಿಂದಲೂ ನಾನು ಕಲಿಯಬೇಕಾಗಿರುವುದು ತುಂಬಾ ಇದೆ ಎಂದರು. ಇಲ್ಲಿ ಯಾರು ಪರಿಪೂರ್ಣರಲ್ಲ, ನಾವು ಪರಿಪೂರ್ಣರಲ್ಲ, ಏನಾದರು ಕಲಿಯುವುದು ಇದ್ದೇ ಇರುತ್ತದೆ, ಸಂಸದರ ಬಗ್ಗೆ ನಮಗೆ ತುಂಬ ಗೌರವ ಇದೆ.

ಎಸ್‌ಪಿ ಅವರ ಈ ಹೇಳಿಕೆಗೂ ಮುನ್ನ ಸಂಸದ ಪ್ರತಾಪ್ ಸಿಂಹ ಅವರು ಟ್ವಿಟ್ಟರ್ ನಲ್ಲಿ “ಆಳುವವರ ಆಳು” ಎಂದು ಟ್ವೀಟ್ ಮಾಡಿದ್ದರು, ಇದಕ್ಕೆ ಎಸ್‌ಪಿ ರವಿ ಡಿ.ಚನ್ನಣ್ಣನವರ್‌‌ ಮಾಧ್ಯಮದೊಂದಿಗೆ ನೀಡಿದ ಸಂದರ್ಶನದಲ್ಲಿ, ನಾವು ಯಾರ ಸೂಚನೆಯೆಂತೆಯು ಕೆಲಸ ಮಾಡುತ್ತಿಲ್ಲ, ಯಾರ ಪರವೂ ಇಲ್ಲ, ವಿರುದ್ಧವೂ ಇಲ್ಲ, ಸಂವಿಧಾನವೇ ನಮಗೆ ಶ್ರೇಷ್ಠ. ಎಂದು ತಮ್ಮ ಸರಳತೆಯಿಂದಲೇ ಉತ್ತರಿಸಿದ್ದಾರೆ.