ಈ ಹಳ್ಳಿಯಲ್ಲಿ ಹುಟ್ಟುವ ಮಕ್ಕಳೆಲ್ಲ ಅವಳಿ-ಜವಳಿಗಳು ಅಂದ್ರೆ ನಂಬುತ್ತೀರಾ??

0
1076

ಇಲ್ಲಿದೆ ನೋಡಿ ಅವಳಿ ಹಳ್ಳಿ .            

ಕೋಡಿನ್ಹಿ ಎಂಬುದು ಮಲಪ್ಪುರಂ , ಕೇರಳ ದ ಒಂದು ಚಿಕ್ಕ ಹಳ್ಳಿ . ಈ ಹಳ್ಳಿಯೂ “ಮಲಪ್ಪುರಂ ” ಅಥವ ಅವಳಿ ಹಳ್ಳಿ ಎಂದೇ ಪ್ರಸಿದ್ದಿ . ಏಕೆ ಎನ್ನುತೀರಾ? ಈ ಹಳ್ಳಿಯಲ್ಲಿರುವುದೇ 2000 ಮಂದಿ , ಅದ್ರಲ್ಲಿ 204 ಅವಳಿ ಜವಳಿ ಮಕ್ಕಳ ಜೋಡಿಗಳಿವೆ . ಈ ಸಂಖ್ಯೆಯ ಅವಳಿಗಳು ಜಗತ್ತಿನಲ್ಲಿ ಬಹಳ ಅಪರೂಪ.

Image result for malappuram twins village

 ಇಲ್ಲಿ ವರ್ಷಕ್ಕೆ ಸರಿ ಸುಮಾರು 15 ಅವಳಿ ಜವಳಿ ಮಕ್ಕಳು ಹುಟ್ಟುತ್ತಾರೆ . ಇಲ್ಲಿ ಪ್ರತಿ 1000 ಜನನಕ್ಕೆ 45 ಅವಳಿ ಜವಳಿ ಆಗುತ್ತವೆ. ಪ್ರಪಂಚದ ಬೇರೆ ಕಡೆ ಇದರ ಸಂಖ್ಯೆ 4. ಇದು ಸಂಶೋದನಕಾರರ ಕುತೂಹಲಕ್ಕೆ ಕಾರಣವಾಗಿದೆ , ಆದರೂ ಉತ್ತರ ದೊರಕ್ಕಿಲ್ಲ.        

ಈ ಹಳ್ಳಿಯವರ ಪ್ರಕಾರ ಇದು ಈ ರೀತಿಯ ಅವಳಿ ಜವಳಿ ಮಕ್ಕಳ ಜನನ ಶುರು ಆಗಿದ್ದು 1949ರಲ್ಲಿ . ಈ ಹಳ್ಳಿಯ ಹೆಣ್ಣು ಮಗಳು ಬೇರೆಯವರನ್ನು ಮದುವೆಯಾದರು , ಇಲ್ಲಿನ ಗಂಡು ಮಕ್ಕಳು ಬೇರೆ ಕಡೆಯ ಹುಡುಗಿಯನ್ನು ಮದುವೆಯಾದರು ಸಹ ಅವಳಿ ಜವಳಿ ಮಕ್ಕಳ ಜನನದ ಸಂಖ್ಯೆ  ಕಮ್ಮಿ ಆಗಿಲ್ಲ.

Image result for malappuram twins village

ಎಷ್ಟೋ ಡಾಕ್ಟರ್ ಗಳು ಇಲ್ಲಿಗೆ ಸಂಶೋಧನೆಗೆ ಎಂದು ಬಂದು ಕಾಲಿ ಕೈಯಲ್ಲಿ ವಾಪಸ್ಸಾಗಿದ್ದಾರೆ . ಇಲ್ಲಿನ ಅವಳಿ ಜವಳಿ ಜನನದ ಸಂಖ್ಯೆ ಜಗತ್ತಿನ ಬೇರೆ ಕಡೆಗಿಂತ 6 ಪಟ್ಟು ಜಾಸ್ತಿ .

ಕೆಲವರ ಪ್ರಕಾರ ಇಲ್ಲಿನ ನೀರಿನಲ್ಲಿ ಯಾವುದೋ ರಾಸಾಯಿನಿಕ ಪದಾರ್ಥ ಸೇರಿದೆ , ಅದು ಇದಕ್ಕೆಲ್ಲ ಕಾರಣ ಎಂದು. ಆದರೆ ಇದಕ್ಕೆ ಯಾವುದೇ ಆಧಾರವಿಲ್ಲ. ಪ್ರಕೃತಿಯೇ ಹಾಗೆ , ನಿಗುಡತೆಗಳ ಸಾಗರ.