ನಿಮ್ ಹತ್ರ twitter ಅಕೌಂಟ್ ಇದ್ಯಾ… ಹಾಗಾದ್ರೆ ಕಾಲೇಜಿಗೆ bunk ಹೊಡಿರಿ…

0
616

ಹೌದು, ಹೊಸ ತಂತ್ರಜ್ಞಾನ ಉಪಯೋಗಿಸಿಕೊಂಡು ಕುಳಿತಲ್ಲೇ ಪಾಠ ಕೇಳುವ ಹೊಸ ವಿಧಾನವನ್ನು ಶ್ರೀ ಭಗವಾನ್ ಮಹಾವೀರ್ ಜೈನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಕಂಡುಕೊಂಡಿದ್ದಾರೆ… ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಸ್ ಗಳ ಸಂಚಾರ ಇಲ್ಲದಿದ್ದ ಕಾರಣ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಸಾಧ್ಯವಾಗಿರಲಿಲ್ಲ, ಇದನ್ನು ಮನಗಂಡ ಮಹಾವೀರ್ ಜೈನ್ ವಿಶ್ವವಿದ್ಯಾನಿಲಯದ ಕಲಾ ವಿಭಾಗದ ಪ್ರಾಧ್ಯಾಪಕ ಸಚಿನ್ ತಂತ್ರಿ ಟ್ವಿಟರ್ ಮೂಲಕವೇ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಿದ್ದಾರೆ.

” ಹತ್ತು ದಿನಗಳ ಹಿಂದೆ ನೇರ ಪ್ರಸಾರವಾದ ದೃಶ್ಯಾವಳಿಗಳಿಗೆ ಅನುಕೂಲವಾಗುವ ಟ್ವಿಟರ್ ನ ಪೆರಿಸ್ಕೋಪ್ ಅಪ್ಲಿಕೇಷನ್ ಬಗ್ಗೆ ಚರ್ಚೆ ನಡೆಸಿದ್ದೆವು. ಇದರಿಂದ ಪ್ರಥಮ ವರ್ಷದ ಬಿಎ ಜರ್ನಲಿಸಂ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ತರಗತಿಗಳನ್ನು ನಡೆಸಲು ಸಾಧ್ಯವಾಗಿದೆ” ಎಂದು ಸಚಿನ್ ತಂತ್ರಿ ತಿಳಿಸಿದ್ದಾರೆ.

ಸತತ ಎರಡು ದಿನಗಳು ಸಾರಿಗೆ ಮುಷ್ಕರ ನಡೆಯುವ ಹಿನ್ನೆಲೆಯಲ್ಲಿ ಬಸ್ ಗಳಿಲ್ಲದೆ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ, ಆದ್ದರಿಂದ ಟ್ವಿಟರ್ ಮೂಲಕ ತರಗತಿಗಳನ್ನು ನಡೆಸುವಂತೆ ವಿದ್ಯಾರ್ಥಿಯೊಬ್ಬರು ಸಲಹೆ ನೀಡಿದ್ದನು ಪರಿಗಣಿಸಿ, ಸೋಮವಾರ ಬೆಳಿಗ್ಗೆ 8.30 ಕ್ಕೆ ಟ್ವಿಟರ್ ನ ಪೆರಿಸ್ಕೋಪ್ ಆಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಎಲ್ಲರಿಗೂ ವಾಟ್ಸ್ ಆಪ್ ಮೂಲಕ ಸೂಚನೆ ನೀಡಲಾಯಿತು. ಅದರಂತೆ ಸುಮಾರು 2 ಗಂಟೆಗಳ ನಂತರ ಅಂದರೆ 10:45 ಕ್ಕೆ ತರಗತಿಗಳು ಪ್ರಾರಂಭವಾದವು ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ. ಟ್ವಿಟರ್ ಆಪ್ ಮೂಲಕ ತರಗತಿಗಳನ್ನು ನಡೆಸಲು, ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್, ಟ್ವಿಟರ್ ಖಾತೆ ಹಾಗು ಪೆರಿಸ್ಕೋಪ್ ಆಪ್ ಇದ್ದರೆ ಸಾಕು ಎನ್ನುತ್ತಾರೆ ಸಚಿನ್ ತಂತ್ರಿ.

ತರಗತಿಯಲ್ಲಿ ಒಟ್ಟು 79 ವಿದ್ಯಾರ್ಥಿಗಳಿದ್ದು ಅದರಲ್ಲಿ 20 ವಿದ್ಯಾರ್ಥಿಗಳು ನೇರವಾಗಿ ತರಗತಿಯಲ್ಲಿ ಕುಳಿತು ಪಾಠ ಕೇಳಿದರೆ ಇನ್ನುಳಿದ ವಿದ್ಯಾರ್ಥಿಗಳು(55) ಆಪ್ ಮೂಲಕ ತರಗತಿಯಲ್ಲಿ ಹೇಳಲಾದ ಪಾಠವನ್ನು ಕೇಳಿದರು ಎಂದು ವಿವರಿಸಿದರು. ಮತ್ತೊಂದು ಸಂಗತಿ ಎಂದರೆ ಕ್ರೀಡಾ ಸ್ಪರ್ಧೆಗಾಗಿ ಗುವಾಹಟಿಗೆ ತೆರಳಿದ್ದ ಓರ್ವ ವಿದ್ಯಾರ್ಥಿ ಸಹ ಟ್ವಿಟರ್ ಮೂಲಕ ತರಗತಿಗೆ ಹಾಜರಾಗಿದ್ದ ಎಂದು ಸಚಿನ್ ತಂತ್ರಿ ತಿಳಿಸಿದ್ದಾರೆ.

ಈಗಿರುವ ಟ್ವಿಟ್ಟರ್ ಅಪ್ಲಿಕೇಷನ್ನಿನಲ್ಲಿ ಕೇವಲ 20 ನಿಮಿಷ ಮಾತ್ರ ನೆರೆ ದೃಶ್ಯಾವಳಿ ಪ್ರಸಾರ ಮಾಡಲು ಅವಕಾಶವಿದ್ದು, ತರಗತಿ ಒಂದು ಗಂಟೆ ಇದ್ದ ಕಾರಣ, ಪ್ರತಿ 20 ನಿಮಿಷಗಳಂತೆ 3 ಬಾರಿ ಪ್ರಸಾರ ಮಾಡಲಾಯಿತು, ಇದರ ಬಗ್ಗೆ ಟ್ವಿಟರ್ ಗೆ ಪತ್ರ ಬರೆಯುವುದಾಗಿ ಸಚಿನ್ ತಂತ್ರಿ ತಿಳಿಸಿದ್ದಾರೆ.