ಯುವಕರೇ ಆಸ್ಪತ್ರೆಗೆ ಹೋಗುವ ಮೊದಲು ಈ ಸುದ್ದಿ ಓದಿ; ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದಿದ್ದ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಬರೆದುಕೊಟ್ಟ ವ್ಯೆದ್ಯ.!

0
166

ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ವೈದ್ಯರು ಮಾಡುವ ಯಡವಟ್ಟುಗಳು ದೇಶದ ತುಂಬೆಲ್ಲ ವೈರಲ್ ಆಗಿ, ನಗೆ ಪಾಟಿಕೆಗೆ ಗುರಿಯಾಗುತ್ತೇವೆ, ಇನ್ನೂ ಕೆಲವಂತೂ ರೋಗಿಗಳ ಪ್ರಾಣದ ಜೊತೆಗೆ ಆಟವಾಡಿದಂತೆ ಇರುತ್ತೇವೆ. ಅದರಲ್ಲಿ ಸರ್ಕಾರಿ ಆಸ್ಪತ್ರೆಯ ಡಾಕ್ಟರ್ಸ್-ಗಳು ಎಷ್ಟೊಂದು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನುವುದಕ್ಕೆ ಇಲ್ಲೊಂದು ಘಟನೆ ನಡೆದಿದ್ದು ಕೇಳಿದ ಗಂಡು ಮಕ್ಕಳು ಆಸ್ಪತ್ರೆಗೆ ಹೋಗಲು ಹೆದರುವಂತೆ ಇದ್ದು. ಹೊಟ್ಟೆನೋವೆಂದು ಆಸ್ಪತ್ರೆಗೆ ಹೋದ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದು ಬರೆದು ಕೊಟ್ಟ ಪ್ರಕರಣ ದಾಖಲಾಗಿದೆ.

Also read: ಮಗು ಸತ್ತ ದುಃಖದಲ್ಲಿ ಮಗುವಿನ ಶವ ಹೂಳಲು ಹೋದ ತಂದೆಗೆ ಮೂರು ಅಡಿ ಗುಂಡಿ ತೆಗೆದ ನಂತರ ಸಿಕ್ತು ಮತ್ತೊಂದು ಜೀವಂತ ಮಗು.!

ಏನಿದು ಘಟನೆ?

ಹೌದು ಜಾರ್ಖಂಡಿನ ಚತ್ರ್ ಜಿಲ್ಲೆಯ ಸಿಮಾರಿಯಾದ ರೆಫರೆಲ್ ಸರ್ಕಾರಿ ಆಸ್ಪತ್ರೆಗೆ ಹೊಟ್ಟೆನೋವೆಂದು ಆಸ್ಪತ್ರೆಗೆ ಬಂದಿದ್ದ ಇಬ್ಬರು ಯುವಕರಿಗೆ ಚಿಕಿತ್ಸೆ ಕೊಡಬೇಕಾಗಿದ್ದ ವೈದ್ಯ ಸರಿಯಾಗಿ ತಪಾಸಣೆ ಮಾಡದೇ, ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದು ಬರೆದು ಕೊಟ್ಟಿರುವ ಆರೋಪ ಕೇಳಿಬಂದಿದ್ದು, ಈಗ ಬಾರಿ ಚರ್ಚೆಯಾಗುತ್ತಿದೆ. ಈ ಘಟನೆ ಅಕ್ಟೋಬರ್ 1 ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಮುಕೇಶ್ ವಿರುದ್ಧ ಯುವಕರಿಗೆ ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿ ಎಂದು ಹೇಳಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

Also read: ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ಸಿಟ್ಟಿಗೆದ್ದು ಪತ್ನಿಯ ತಲೆಯನ್ನೇ ಬೋಳಿಸಿದ ಭೂಪ; ಕೊನೆಗೆ ಏನಾಯಿತು ನೋಡಿ.!

ಗೋಪಾಲ್ ಗಂಜು(22) ಹಾಗೂ ಕಾಮೇಶ್ವರ ಗಂಜು(26) ಅವರಿಗೆ ವೈದ್ಯ ಪ್ರಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದಿದ್ದಾರೆ ಎನ್ನಲಾಗಿದೆ. ಇಬ್ಬರು ಯುವಕರು ಹಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆದ್ದರಿಂದ ಯುವಕರನ್ನು ಅವರ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಮುಕೇಶ್ ಅವರಿಬ್ಬರಿಗೂ ಕಾಟಾಚಾರಕ್ಕೆ ತಪಾಸಣೆ ಮಾಡಿ, ಎಚ್‍ಐವಿ, ಎಚ್‍ಬಿಎ, ಎಚ್‍ಸಿವಿ, ಸಿಬಿಸಿ, ಎಚ್‍ಎಚ್2 ಮತ್ತು ಎಎನ್‍ಸಿ ಪರೀಕ್ಷೆ ಮಾಡಿಕೊಂಡು ಬನ್ನಿ ಎಂದು ಚೀಟಿ ಬರೆದು ಕೊಟ್ಟಿದ್ದರು. ಜೊತೆಗೆ ಪ್ರಗ್ನೆನ್ಸಿ ಪರೀಕ್ಷೆ ಕೂಡ ಮಾಡಿಸಿಕೊಂಡು ಬರಲು ಬರೆದಿದ್ದಾರೆ.

Also read: ಮೃತಪಟ್ಟ ಗಂಡನ ಮೃತದೇಹಕ್ಕಾಗಿ 7 ಜನ ಪತ್ನಿಯರ ಕಿತ್ತಾಟ; ಯಾರಿಗೂ ತಿಳಿಯದಂತೆ 7 ಜನರನ್ನು ಮದುವೆಯಾಗಿ ಆತ್ಮಹತ್ಯೆ ಮಾಡಿಕೊಂಡ.!

ಇವರಿಬ್ಬರು ವೈದ್ಯರು ಬರೆದುಕೊಟ್ಟಿದ್ದ ಚೀಟಿಯನ್ನು ಹಿಡಿದುಕೊಂಡು ಲ್ಯಾಬ್‍ಗೆ ಹೋದಾಗ ಅಲ್ಲಿನ ಸಿಬ್ಬಂದಿ ಚೀಟಿ ನೋಡಿ ದಂಗಾಗಿದ್ದಾರೆ. ಪ್ರಗ್ನೆನ್ಸಿ ಪರೀಕ್ಷೆ ನಿಮಗಲ್ಲ ಮಹಿಳೆಯರಿಗೆ ಮಾಡುವುದು ಎಂದು ತಿಳಿಸಿದ್ದಾರೆ. ಬಳಿಕ ಯುವಕರು ಯಾವ ಪರೀಕ್ಷೆಯನ್ನೂ ಕೂಡ ಮಾಡಿಸದೆ ಮನೆಗೆ ವಾಪಸ್ ಬಂದಿದ್ದಾರೆ. ನಂತರ ನಡೆದ ಘಟನೆ ಬಗ್ಗೆ ನಮ್ಮ ಊರಿನಲ್ಲಿ ಹೇಳಿದ್ದಾರೆ. ಈ ಸುದ್ದಿ ಒಬ್ಬರ ಬಾಯಿಂದ ಇನ್ನೊಬ್ಬರಿಗೆ ತಿಳಿದು ಇಡೀ ಜಾರ್ಖಂಡಿನಲ್ಲೇ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಆದ್ರೆ ವೈದ್ಯ ಮಾತ್ರ ಇದು ಸುಳ್ಳುಸುದ್ದಿ. ನನ್ನ ಹೆಸರನ್ನು ಹಾಳು ಮಾಡಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಇದೊಂದು ಪಿತೂರಿ, ನಾನು ತಪ್ಪು ಮಾಡಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲಾ ಸರ್ಜನ್ ಅರುಣ್ ಕುಮಾರ್ ಪಾಸ್ವಾನ್, ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಇದೊಂದು ಪಿತೂರಿ ಇರಬಹುದು. ನನಗೆ ಶನಿವಾರ ಈ ವಿಷಯ ತಿಳಿದಿದೆ ಹೀಗಾಗಿ ಸತ್ಯಾಸತ್ಯತೆ ತಿಳಿಯಲು ಈ ಪ್ರಕರಣದ ತನಿಖೆಗೂ ಆದೇಶಿಸಿರುವುದಾಗಿ ತಿಳಿಸಿದ್ದಾರೆ.