ಬೆಂಗಳೂರಿನಲ್ಲಿ ಸಜೀವ ಬಾಂಬ್ ಪತ್ತೆ; ಬಂಧಿತ ಉಗ್ರ ಮಸೀದಿಯ ಮೌಲ್ವಿ ಜೊತೆಗೆ ನಂಟಿರುವ ಶಂಕೆ..

0
160

ಶ್ರೀಲಂಕಾ ನಂತರ ಬೆಂಗಳೂರಿನಲ್ಲಿ ಉಗ್ರರು ಬಾಂಬ್ ದಾಳಿಗೆ ತಯಾರಿ ನಡೆಸಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಬೆಂಗಳೂರಿನ ತುಂಬೆಲ್ಲ ಬಿಗಿಭದ್ರತೆ ವಹಿಸಲಾಗಿತ್ತು. ಇದಕ್ಕೆ ಹಲವು ಕಡೆ ಅನುಮಾನಗಳು ಕೂಡ ವ್ಯಕ್ತಪದಿಸಲಾಗಿತು, ಈಗ ಅದು ಸತ್ಯವೆನ್ನುವ ಪ್ರಶ್ನೆಗಳು ಬೆಂಗಳೂರಿಗರನ್ನು ಬೆಚ್ಚಿಬಿಳಿಸಿದ್ದು, ಬಾಂಗ್ಲಾದೇಶದ ಜೆಎಂಬಿ ಸಂಘಟನೆಯ ಶಂಕಿತ ಉಗ್ರ ಅಬೀಬುರ್ ರೆಹಮಾನ್ ನೀಡಿದ ಮಾಹಿತಿಯಂತೆ ಎರಡು ಸಜೀವ ಬಾಂಬ್​ಗಳನ್ನು ಎನ್​ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಇನ್ನೂ ಆರು ಬಾಂಬ್-ಗಳಿಗೆ ಶೋಧನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಬಾಂಬ್?

ಹೌದು ರಾಮನಗರದಲ್ಲಿ ಎರಡು ಸಜೀವ ಬಾಂಬ್​ಗಳನ್ನು ಎನ್​ಐಎ ಅಧಿಕಾರಿಗಳು ಮತ್ತು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನೆನ್ನೆ ದೊಡ್ಡಬಳ್ಳಾಪುರದಲ್ಲಿ ರಾಷ್ಟ್ರೀಯ ದಳದ ಸಿಬ್ಬಂದಿ ವಶಕ್ಕೆ ಪಡೆದಿದ್ದ ಜೆಎಂಬಿ ಸಂಘಟನೆಯ ಶಂಕಿತ ಉಗ್ರ ನೀಡಿದ ಮಾಹಿತಿ ಮೇಲೆ ಶೋಧ ಕಾರ್ಯ ನಡೆಸಿದಾಗ ಈ ಬಾಂಬ್​ಗಳು ಪತ್ತೆಯಾಗಿವೆ. ಮಂಗಳವಾರ ಎನ್‍ಐಎ ದಾಳಿ ಮಾಡುತ್ತಿದ್ದಂತೆ ತಪ್ಪಿಸಿಕೊಂಡು ಗ್ರೆನೇಡ್‍ಗಳನ್ನು ರಾಮನಗರದ ರಾಜಾಕಾಲುವೆಯಲ್ಲಿ ಹಬೀಬುಲ್ಲಾ ರೆಹಮಾನ್ ಬಿಸಾಕಿದ್ದ. ರಾಮನಗರದಲ್ಲಿ ಒಟ್ಟು 6 ಗ್ರೆನೇಡ್‍ಗಳನ್ನು ಬಿಸಾಕಿದ್ದು, ಇದೀಗ ಎನ್‍ಐಎ ಎರಡು ಸಜೀವ ಗ್ರೆನೇಡ್ ಪತ್ತೆ ಮಾಡಿದೆ. ಉಳಿದ ನಾಲ್ಕು ಗ್ರೆನೇಡ್‍ಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಹಬೀಬುಲ್ಲಾ ರೆಹಮಾನ್, ಮುನೀರ್ ಅಲಿಯಾಸ್ ಕೌಸರ್ ಮತ್ತು ಇನ್ನೊಬ್ಬ ಶಂಕಿತ ಉಗ್ರ ಮೂವರೂ ಒಂದೇ ಕಡೆ ರಾಮನಗರದಲ್ಲಿ ವಾಸವಾಗಿದ್ದರು. ಎನ್ನುವುದು ತಿಳಿದಿದೆ.

2013ರ ಭೋದಗಯಾ ಸ್ಫೋಟದಲ್ಲಿ ಬಾಗಿಯಾದ ಉಗ್ರ;

ದೊಡ್ಡಬಳ್ಳಾಪುರ ಮಸೀದಿಯೊಂದರಲ್ಲಿ ತಂಗಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ವಿಶೇಷ ಕಾರ್ಯಾಚರಣೆ ನಡೆಸಿ ಮಂಗಳವಾರ ಬಂಧಿಸಿತ್ತು. ಬಾಂಗ್ಲಾದೇಶದ ಜಮತ್-ಉಲ್ಲಾ-ಮುಜ್ಜಾಹೀದಿನ್ ಎಂಬ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹಬೀಬರ್ ರೆಹಮಾನ್ ಎಂಬ ಉಗ್ರನನ್ನು ಮಂಗಳವಾರ ಮಧ್ಯಾಹ್ನ ಬೆಂಗಳೂರು ಹಾಗೂ ಕೋಲ್ಕತಾ ಎನ್‍ಐಎ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ಮಸೀದಿ ಬಳಿ ಬಂಧಿಸಿದ್ದರು. ಬಂಧಿತ ಉಗ್ರ ಹಬೀಬುಲ್ಲಾ 2013ರ ಭೋದಗಯಾ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತು ಪಶ್ಚಿಮ ಬಂಗಾಳದ ಬುದ್ರ್ವಾನ್ ಸ್ಫೋಟದ ಆರೋಪಿಯಾಗಿದ್ದಾನೆ.

ಮಸೀದಿಯೊಂದಿಗೆ ಉಗ್ರನ ನಂಟು?

ಕಳೆದ ಐದು ದಿನಗಳಿಂದ ಬೆಂಗಳೂರು ಹೊರ ವಲಯದ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಉಗ್ರ ತಂಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಧಿಕಾರಿಗಳು ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬೆಂಗಳೂರಿನಲ್ಲಿ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದ ಅನ್ವರ್ ಎಂಬಾತನೊಂದಿಗೆ ಈತ ನಂಟು ಹೊಂದಿದ್ದು, ಮಸೀದಿಗೆ ಬಂದು ಹೋಗುತ್ತಿದ್ದ. ಕೆಲ ಸಮಯದ ಬಳಿಕ ಅನ್ವರ್ ದೊಡ್ಡಬಳ್ಳಾಪುರ ನಗರದ ಚಿಕ್ಕಪೇಟೆಯ ಮಸೀದಿಯಲ್ಲಿ ಮೌಲ್ವಿಯಾಗಿ ನೇಮಕಗೊಂಡಿದ್ದ. ಹೀಗಾಗಿ ಆಗಾಗ ಮೌಲ್ವಿ ಅನ್ವರ್ ಭೇಟಿ ಮಾಡಲು ದೊಡ್ಡಬಳ್ಳಾಪುರದ ಮಸೀದಿಗೆ ಬರುತ್ತಿದ್ದ. ಇದೇ ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರದಲ್ಲಿ ಬಾಡಿಗೆ ಮನೆ ಮಾಡಲು ಉಗ್ರ ಪ್ಲಾನ್ ಮಾಡಿದ್ದನು ಮತ್ತು ಮನೆಯನ್ನು ಸಹ ನೋಡಿಕೊಂಡು ಬಂದಿದ್ದ. ಅದರಂತೆ ಇವರಿಗೆ ಹೆಲ್ಪರ್ ಕೆಲಸ ಮಾಡುತ್ತಿದ್ದ ಮಸೀದಿಯ ಲುಚ್ಚಾ ಮೌಲ್ವಿ ಅನ್ವರ್‍ನನ್ನು ದೊಡ್ಡಬಳ್ಳಾಪುರ ಪೊಲೀಸರ ವಶಕ್ಕೆ ನೀಡಲಾಗಿದೆ.