ಇನ್ಮುಂದೆ ಚಪ್ಪಲಿ, ಲುಂಗಿ ಹಾಕ್ಕೊಂಡು ಗಾಡಿ ಓಡ್ಸಿದ್ರೂ ಬಿಳ್ಳುತ್ತೆ ದಂಡದ ಜೊತೆಗೆ ಜೈಲು ವಾಸ; ಮೊದಲು ಸಂಪೂರ್ಣ ನಿಯಮ ತಿಳಿದು ವಾಹನ ಹತ್ತಿ..!

0
271

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಂಚಾರಿ ನಿಯಮಕ್ಕೆ ಸಂಬಂಧಪಟ್ಟಂತೆ ಇಡಿ ದೇಶದ ಜನರು ವಾಹನಗಳನ್ನು ಹೊರ ತೆಗೆಯಲು ಹೆದರುತ್ತಿದ್ದಾರೆ. ಏಕೆಂದರೆ 10 ಸಾವಿರದಿಂದ ಲಕ್ಷದವರೆಗೆ ದಂಡ ಹಾಕುತ್ತಿದ್ದು ಜನರಲ್ಲಿ ಭೀತಿ ಹುಟ್ಟಿಸಿದೆ. ಅದರಲ್ಲಿ ದಿನಕ್ಕೊಂದು ರೋಲ್ಸ್ ಬರುತ್ತಿದ್ದು. ವಾಹನ ರಸ್ತೆಗಿಳಿಸಲು ಬೇಕಾದ ಡ್ರೈವಿಂಗ್ ಲೆಸನ್ಸ್, ಇನ್ಸುರೆನ್ಸ್, ವಾಹನ ದಾಖಲಾತಿ ಸೇರಿ ಹಲವು ನಿಯಮಕ್ಕೆ ಭಾರಿ ದಂಡ ಹಾಕುತ್ತಿದ್ದಾರೆ, ಈ ನಡುವೆಗೆ ಕೆಲವು ಹೊಸ ನಿಯಮಗಳು ಬಂದಿದ್ದು, ವಾಹನ ಓಡಿಸುವಾಗ ಚಪ್ಪಲ್ಲಿ, ಲುಂಗಿ ಹಾಕಿದರು ಕೂಡ ದಂಡ ಬಿಳ್ಳುತ್ತೆ ಎನ್ನುವ ಸುದ್ದಿ ವೈರಲ್ ಆಗಿದೆ.

Also read: ದ್ವಿಚಕ್ರ ಹಾಗೂ ಕಾರ್ ಮಾಲೀಕರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರದ ಹೊಸ ಆದೇಶ!! ನಿಮ್ಮ ಗಾಡಿ ಸೀಜ್ ಆಗಬಾರದು ಅಂದ್ರೆ ಮೊದಲು ಇದನ್ನ ಓದಿ…

ಚಪ್ಪಲಿ ಹಾಕಿದರು ದಂಡ?

ಹೌದು ಇನ್ಮುಂದೆ ನೀವೂ ವಾಹನ ಚಲಾಯಿಸುವಾಗ ಹವಾಯಿ ಚಪ್ಪಲಿಗಳು ಮತ್ತು ಲುಂಗಿಯನ್ನು ಹಾಕಿಕೊಂಡರೆ ದಂಡ ಜೊತೆಗೆ ಜೈಲಿಗೂ ಹೋಗಬೇಕಾಗುತ್ತೆ. ಅದರಂತೆ ಸವಾರರು ಸ್ಲಿಪ್ಪರ್, ಹವಾಯಿ ಚಪ್ಪಲ್ ಹಾಕಿಕೊಂಡು ಗೇರ್ ಹೊಂದಿರುವ ದ್ವಿಚಕ್ರ ವಾಹನ ಓಡಿಸುವಂತಿಲ್ಲ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ 1,000 ರೂ ದಂಡ ತೆರಬೇಕಾಗಿರುತ್ತದೆ. ಈ ತಪ್ಪು ಮರುಕಳಿಸಿದರೆ ದಂಡದ ಜೊತೆಗೆ 15 ದಿನಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಏಕೆಂದರೆ ಸ್ಲಿಪ್ಪರ್, ಹವಾಯಿ ಚಪ್ಪಲಿ ಹಾಕಿದರೆ ದ್ವಿಚಕ್ರ ವಾಹನದ ಗೇರ್ ಬದಲಾಯಿಸಲು, ಪಾರ್ಕಿಂಗ್‍ನಿಂದ ವಾಹನ ತೆಗೆಯಲು ಸಮಸ್ಯೆ ಆಗಲಿದೆ. ಜೊತೆಗೆ ಅಪಘಾತದವಾದಾಗ ಕಾಲಿಗೆ ಗಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸವಾರರು ಶೂ ಧರಿಸಿದರೆ ಒಳ್ಳೆಯದು ಎಂಬುದು ನಿಯಮದ ಉದ್ದೇಶವಾಗಿದೆ. 1988ರ ಮೋಟಾರು ವಾಹನ ಕಾಯ್ದೆಯಲ್ಲೇ ಇದನ್ನು ಉಲ್ಲೇಖಿಸಲಾಗಿದೆ.

Also read: ಸಂಚಾರಿ ನಿಯಮದ ನೇಪದಲ್ಲಿ ಟ್ರಾಫಿಕ್ ಪೋಲೀಸರ ದುರ್ವರ್ತನೆಗೆ ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿ; ಇದಕ್ಕೆ ಯಾರು ಹೊಣೆ??

ಲುಂಗಿ ಹಾಕಿದರೆ ದಂಡ?

ಹೌದು ಒಂದು ವೇಳೆ ಲುಂಗಿ ಧರಿಸಿ ವಾಹನ ಚಲಾಯಿಸಿದ್ದು ಕಂಡು ಬಂದರೆ 2000 ರು. ದಂಡ ಬೀಳುವುದು ಗ್ಯಾರೆಂಟಿ. ನೂತನ ಮೋಟಾರ್ ವಾಹನ ಕಾಯ್ದೆ ಅಡಿ ವಾಣಿಜ್ಯ ವಾಹನ ಚಾಲಕರು, ಸಹಾಯಕರು ಪ್ಯಾಂಟ್ ಹಾಗೂ ಶರ್ಟ್/ ಟಿ-ಶರ್ಟ್‌ಗಳನ್ನು ಧರಿಸುವುದು ಕಡ್ಡಾಯವಾಗಿದೆ. ಅದರಲ್ಲಿ ಕೆಲವು ಚಾಲಕರು ದೂರದ ಸ್ಥಳಗಳಿಗೆ ತೆರಳುವ ಟ್ರಕ್ ಹಾಗೂ ಲಾರಿ ಚಾಲಕರು ಆರಾಮದಾಯಕವಾಗಿರಲಿದೆ ಎಂಬ ಕಾರಣಕ್ಕೆ ಲುಂಗಿ ಧರಿಸುವುದು ಮಾಮೂಲಿ ಸಂಗತಿ. ಆದರೆ, ದೇಶದಲ್ಲಿ ವಾಹನ ಚಾಲಕರು ಇನ್ನುಮುಂದೆ ಲುಂಗಿ ಧರಿಸುವಂತೆ ಇಲ್ಲ. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತಿದ್ದು, ವಾಹನ ಚಾಲಕರು ವಸ್ತ್ರ ಸಂಹಿತೆ ಪಾಲಿಸದೇ ಇದ್ದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಬಹುದಾಗಿದೆ. ಈ ಹಿಂದೆಯೂ ಈ ನಿಯಮ ಜಾರಿಯಲ್ಲಿತ್ತು. ಆದರೆ, ಕಟ್ಟುನಿಟ್ಟಾಗಿ ಜಾರಿ ಮಾಡಿರಲಿಲ್ಲ. ಈಗ ಜಾರಿ ಮಾಡಲಾಗಿದೆ.

Also read: ಪಾಲಕರೇ ಮಕ್ಕಳ ಕೈಯಲ್ಲಿ ವಾಹನ ಕೊಡುವ ಮುನ್ನ ಎಚ್ಚರ; ನಿಮಗೆ ಬಿಳ್ಳುತ್ತೆ 25 ಸಾವಿರ ದಂಡದ ಜೊತೆಗೆ 3 ವರ್ಷ ಜೈಲು ವಾಸ.!

ಪೊಲೀಸರು ವಾಹನ ಹಿಡಿದರೆ ಒಂದಿಲ್ಲದೊಂದು ನಿಯಮವನ್ನು ಹೇಳಿ ದಂಡ ವಿಧಿಸುತ್ತಿರುವುದು ಜನರ ತಾಳ್ಮೆಯನ್ನು ಪರೀಕ್ಷಿಸುವಂತೆ ಇದೆ. ಎನ್ನುವ ದೂರು ಕೇಳಿಬರುತ್ತಿವೆ. ಇತ್ತೀಚೆಗೆ ಉತ್ತರ ಪ್ರದೇಶದ ಆಲಿಘರ್‍ನಲ್ಲಿ ಟ್ರಾಫಿಕ್ ಪೊಲೀಸರು ಕಾರು ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿದ್ದು, ಆ ಚಾಲಕ ಹೆಲ್ಮೆಟ್ ಹಾಕಿಕೊಂಡೇ ಕಾರು ಚಲಾಯಿಸುತ್ತಿರುವ ಪ್ರಕರಣ ಕೂಡ ಸಖತ್ ಸುದ್ದಿಯಾಗಿದೆ. ರಾಜಸ್ಥಾನದಲ್ಲಿ ಲಾರಿ ಚಾಲಕನೊಬ್ಬ ಸಂಚಾರ ನಿಯಮ ಉಲ್ಲಂಘನೆ ಮಾಡಿ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದು, ಬರೋಬ್ಬರಿ 1,41,700 ರೂ. ದಂಡ ಕಟ್ಟಿದ್ದಾನೆ. ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಬಂದ ಬಳಿಕ ಇದು ದೇಶದಲ್ಲಿಯೇ ದುಬಾರಿ ಮೊತ್ತದ ದಂಡ ಎಂದು ಹೇಳಲಾಗಿದೆ.